image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್‌ಗೆ ಅ.26ರಂದು ವಿಶೇಷ ಸನ್ಮಾನ

ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್‌ಗೆ ಅ.26ರಂದು ವಿಶೇಷ ಸನ್ಮಾನ

ಶಿವಮೊಗ್ಗ: ಕರ್ನಾಟಕ ವಿಧಾನ ಪರಿಷತ್ ಸಭಾಪತಿಯಾಗಿ ಪ್ರಥಮ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಸಲೀಂ ಅಹಮದ್ ಅವರಿಗೆ ಅಕ್ಟೋಬರ್ 26ರಂದು ಬೆಳಿಗ್ಗೆ 10:00 ಗಂಟೆಗೆ ಶಿವಮೊಗ್ಗದ ಫಾರೂಖಿಯಾ ಶಾದಿಮಹಲ್‌ನಲ್ಲಿ ಶಿವಮೊಗ್ಗ ಜಿಲ್ಲಾ ಮೈನಾರಿಟಿ ಫೋರಂ ವತಿಯಿಂದ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಬಾನು ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೂ ಮುನ್ನ ಶಿವಮೊಗ್ಗದ ಹೊಳೆ ಬಸ್ ನಿಲ್ದಾಣದಿಂದ ಫಾರೂಖಿಯಾ ಶಾದಿ ಮಹಲ್ ವರೆಗೆ ಬೈಕ್ ರ್ಯಾಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಮುಖ್ಯ ಸಂಚಾಲಕರಾದ ಮುಖ್ತಿಯಾರ್ ಅಹಮದ್ ಮತ್ತು ಮೊಹಮ್ಮದ್ ಮುಹೀಬ್ ಉಲ್ಲಾ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ನೀಲಂಗ ಷರೀಫ್‌ನ ಸಜ್ಜಾದೇ ನಶೀನ್ ಹಜರತ್ ಸೈಯದ್ ಷಾ ಹೈದರ್ ವಲೀ ಅವರು ಗಣ್ಯ ಉಪಸ್ಥಿತಿ ವಹಿಸಲಿದ್ದು, ಮುಖ್ತಿಯಾರ್ ಅಹಮದ್, ಇಕ್ಬಾಲ್ ಹಬೀಬ್ ಸೇಠ್ ಹಾಗೂ ಹಾಮೀದ್ ಉಮ್ರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Category
ಕರಾವಳಿ ತರಂಗಿಣಿ