image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ ಪೋಸ್ಟರ್ ಅಂಟಿಸುವುದು ಅಪರಾಧವಲ್ಲ: ಹೈಕೋರ್ಟ್ ಆದೇಶ

ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ ಪೋಸ್ಟರ್ ಅಂಟಿಸುವುದು ಅಪರಾಧವಲ್ಲ: ಹೈಕೋರ್ಟ್ ಆದೇಶ

ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ಅನ್ಯಾಯವಾಗಿದೆ ಎಂದು ಪೋಸ್ಟರ್‌ ಹಾಕುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಥವಾ ದ್ವೇಷ ಪ್ರಚೋದಿಸುವ ಅಪರಾಧವಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಮಂಗಳೂರಿನಲ್ಲಿ ಸುಪ್ರೀಂ ತೀರ್ಪಿನ ವಿರುದ್ಧ ಪೋಸ್ಟರ್ ಅಂಟಿಸಿದ ಆರೋಪದಲ್ಲಿ 13 ಜನರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಹಾಗೂ ಎಲ್ಲಾ ಅಪರಾಧಿಕ ನಡಾವಳಿಗಳನ್ನು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ನ್ಯಾಯಪೀಠ ರದ್ದುಗೊಳಿಸಿದೆ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವುದು ದೇಶದ್ರೋಹ ಅಥವಾ ಅಶಾಂತಿಯನ್ನುಂಟು ಮಾಡಿದಂತಾಗುವುದಿಲ್ಲ ಎಂದು ಪೀಠ ತಿಳಿಸಿದೆ.

ಪೋಸ್ಟರ್‌ನಲ್ಲಿ 'ನ್ಯಾಯ ನಿರಾಕರಣೆಯಾಗಿದೆ, ನ್ಯಾಯಕ್ಕಾಗಿ ಧ್ವನಿ ಎತ್ತಿ' ಎಂದು ಮಾತ್ರ ಹೇಳಲಾಗಿದ್ದು, ಇದು ನ್ಯಾಯಾಲಯದ ತೀರ್ಪಿನ ಮೇಲಿನ ಅಸಮ್ಮತಿ ಹಾಗೂ ಸಂವಿಧಾನದ ವಿಧಿ 19 ಮತ್ತು 21ರ ವ್ಯಾಪ್ತಿಯಲ್ಲಿದೆ. ಸಾರ್ವಜನಿಕ ಹೇಳಿಕೆಗಳು ಅಥವಾ ಪೋಸ್ಟರ್‌ಗಳ ಪ್ರಭಾವವನ್ನು ಸಮಾಜದ ಸಾಮಾನ್ಯ ಮತ್ತು ವಿವೇಕಯುತ ಜನರ ದೃಷ್ಟಿಕೋನದಿಂದ ನೋಡಬೇಕೇ ಹೊರತು, ಕೆಲವು ವ್ಯಕ್ತಿಗಳ ವೈಯಕ್ತಿಕ ಭಾವನೆಗಳ ಆಧಾರದ ಮೇಲಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

Category
ಕರಾವಳಿ ತರಂಗಿಣಿ