image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ತೆರವು ಕಾರ್ಯ ಆರಂಭ

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ತೆರವು ಕಾರ್ಯ ಆರಂಭ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳು ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ತೆರವಿಗೆ ಅಧಿಕಾರಿಗಳು ಮುಂದಾಗಿದ್ದು, ಶುಕ್ರವಾರ ಬಾಬುಸಾಪಾಳ್ಯದಲ್ಲಿನ ಎರಡು ಹಾಗೂ ಪಶ್ಚಿಮ ವಲಯದಲ್ಲಿ ಎರಡು ಕಟ್ಟಡಗಳನ್ನು ತೆರವುಗೊಳಿಸುವ ಮೂಲಕ ಕಾರ್ಯವನ್ನು ಆರಂಭಿಸಿದ್ದಾರೆ.

ಪಶ್ಚಿಮ ವಲಯದ ಮಹಾಲಕ್ಷ್ಮೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಮಲಾನಗರದಲ್ಲಿ ಕಟ್ಟಡದ ತಳಪಾಯದ ಗೋಡೆ ಶೇ. 20 ರಷ್ಟು ಕುಸಿದಿದ್ದು, ಶುಕ್ರವಾರ ತೆರವು ಕಾರ್ಯವನ್ನು ನಡೆಸಲಾಗಿದೆ. ಕಮಲಾನಗರ 3ನೇ ಮುಖ್ಯರಸ್ತೆಯ ಬಳಿಯ ನೀರುಗಾಲುವೆಗೆ ಹೊಂದಿಕೊಂಡಂತಿರುವ 3 ಅಂತಸ್ತಿನ ಮನೆಯನ್ನು, ಸುಮಾರು 20 - 25 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು.

ತಳಭಾಗದಲ್ಲಿ ದ್ವಿತೀಯ ನೀರು ಗಾಲುವೆಯ ಮೂಲಕ ಬರುವ ನೀರು ಮನೆಯ ತಳಪಾಯಕ್ಕೆ ಹೋಗಿರುವ ಕಾರಣ, ತಳಪಾಯದ ನೀರಿನ ಸಂಪ್ ಹಾಗೂ ಶೇ. 20 ರಷ್ಟು ತಳಪಾಯದ ಗೋಡೆ ಕುಸಿದಿದೆ. ಈ ಸಂಬಂಧ ಪಾಲಿಕೆ ಆಯುಕ್ತೆ ಅರ್ಚನಾ ಭೇಟಿ ನೀಡಿ ಪರಿಶೀಲನೆ ನಡೆಸಿ ತೆರವುಗೊಳಿಸಲು ಸೂಚನೆ ನೀಡಿದ್ದರು.

Category
ಕರಾವಳಿ ತರಂಗಿಣಿ