image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮೈಸೂರು-ತಾಳಗುಪ್ಪ ರೈಲಿಗೆ ಎಲ್‌.ಎಚ್‌.ಬಿ ಬೋಗಿ ಅಳವಡಿಕೆ ಸ್ವಾಗತಾರ್ಹ: ಸಂಸದ ಬಿ.ವೈ.ರಾಘವೇಂದ್ರ

ಮೈಸೂರು-ತಾಳಗುಪ್ಪ ರೈಲಿಗೆ ಎಲ್‌.ಎಚ್‌.ಬಿ ಬೋಗಿ ಅಳವಡಿಕೆ ಸ್ವಾಗತಾರ್ಹ: ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ : ಶಿವಮೊಗ್ಗ ಹಾಗೂ ಮಲೆನಾಡು ಭಾಗದ ರೈಲು ಪ್ರಯಾಣಿಕರಿಗೆ ಉತ್ತಮ ಹಾಗೂ ಸುರಕ್ಷಿತ ಪ್ರಯಾಣಾನುಭವ ಒದಗಿಸುವ ನಿಟ್ಟಿನಲ್ಲಿ, ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ ಮತ್ತು ತಾಳಗುಪ್ಪ-ಶಿವಮೊಗ್ಗ ಟೌನ್ ರೈಲುಗಳು ಸೇರಿದಂತೆ ನೈರುತ್ಯ ರೈಲ್ವೆಯ ಆರು ರೈಲುಗಳಲ್ಲಿ ಹಳೆಯ ಬೋಗಿಗಳ ಬದಲಿಗೆ ಆಧುನಿಕ ಎಲ್.ಎಚ್.ಬಿ ಬೋಗಿಗಳನ್ನು ಅಳವಡಿಸಲು ರೈಲ್ವೆ ಇಲಾಖೆ ನಿರ್ಧರಿಸಿರುವುದು ಸ್ವಾಗತಾರ್ಹ ಸಂಗತಿಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.

ದಸರಾ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯ ಜನತೆಗೆ ಸಿಕ್ಕಿರುವ ಈ ಕೊಡುಗೆಗಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ. ನೈರುತ್ಯ ರೈಲ್ವೆಯ ಅಧಿಕೃತ ಆದೇಶದ ಪ್ರಕಾರ, ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್‌ನಲ್ಲಿ ಅಕ್ಟೋಬರ್ 20ರಿಂದ ಹಾಗೂ ತಾಳಗುಪ್ಪ-ಶಿವಮೊಗ್ಗ ಟೌನ್ ರೈಲಿನಲ್ಲಿ ಅಕ್ಟೋಬರ್ 21ರಿಂದ ಈ ಹೊಸ ಬೋಗಿಗಳ ಅಳವಡಿಕೆ ಜಾರಿಗೆ ಬರಲಿದೆ. ಆಧುನಿಕ ವಿನ್ಯಾಸ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಈ ಎಲ್.ಎಚ್.ಬಿ ಬೋಗಿಗಳಿಂದ ಬೆಂಗಳೂರಿಗೆ ಸಂಚರಿಸುವ ಮಲೆನಾಡಿನ ಜನರು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಪ್ರವಾಸಿಗರಿಗೆ ಅತ್ಯುತ್ತಮ ಪ್ರಯಾಣಿಕ ಸೌಲಭ್ಯ ಲಭ್ಯವಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ