image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಧ್ರುವ್ ರಾಠಿ ಪೌರತ್ವ, ವೀಸಾ ತನಿಖೆಗೆ ಕೇಂದ್ರಕ್ಕೆ ಭಾಸ್ಕರ್ ರಾವ್ ಪತ್ರ

ಧ್ರುವ್ ರಾಠಿ ಪೌರತ್ವ, ವೀಸಾ ತನಿಖೆಗೆ ಕೇಂದ್ರಕ್ಕೆ ಭಾಸ್ಕರ್ ರಾವ್ ಪತ್ರ

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಖಂಡಿಸಿ ಅಕ್ಟೋಬರ್ 8ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಅವರು ಭಾಗವಹಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ, ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಧ್ರುವ್ ರಾಠಿ ವಿರುದ್ಧ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದಾರೆ.

ಧ್ರುವ್ ರಾಠಿ ಅವರು ಜರ್ಮನ್ ಪೌರತ್ವ ಹೊಂದಿದ್ದಾರೆ ಎಂಬ ವರದಿಗಳಿದ್ದು, ಅವರು ಭಾರತಕ್ಕೆ ಯಾವ ವೀಸಾ ಹಾಗೂ ಅನುಮತಿಯ ಆಧಾರದಲ್ಲಿ ಬಂದಿದ್ದಾರೆ ಎಂಬುದನ್ನು ಗೃಹ ಇಲಾಖೆ ಪರಿಶೀಲಿಸಬೇಕು ಎಂದು ಭಾಸ್ಕರ್ ರಾವ್ ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ. ವಿದೇಶಿ ಪ್ರಜೆಯೊಬ್ಬರು ಭಾರತದಲ್ಲಿ ರಾಜಕೀಯ ಹಾಗೂ ಸಾರ್ವಜನಿಕ ಪ್ರತಿಭಟನೆಗಳಲ್ಲಿ ಭಾಗವಹಿಸಲು ವೀಸಾ ನಿಯಮಗಳು ಮತ್ತು ವಿದೇಶಿಗರ ಕಾಯ್ದೆಯಡಿ ಅವಕಾಶವಿದೆಯೇ ಹಾಗೂ ಯಾವುದೇ ನಿಯಮ ಉಲ್ಲಂಘನೆಯಾಗಿದೆಯೇ ಎಂಬುದನ್ನು ಪರಿಶೀಲಿಸುವಂತೆ ಅವರು ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ಫಾಲೋವರ್ಸ್ ಹೊಂದಿರುವ ಧ್ರುವ್ ರಾಠಿ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮತದಾರರ ಪಟ್ಟಿ ಅಕ್ರಮದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ವಿಶೇಷವಾಗಿ ಭಾಗವಹಿಸಿದ್ದರು. ಪ್ರಸ್ತುತ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಕೆಯಾಗಿರುವ ಈ ದೂರಿನಿಂದಾಗಿ ಅವರ ವೀಸಾ ಸ್ಥಿತಿಗತಿ ಹಾಗೂ ಪ್ರವಾಸದ ದಾಖಲೆಗಳ ಪರಿಶೀಲನೆ ವಿಚಾರ ತೀವ್ರ ಕುತೂಹಲ ಮೂಡಿಸಿದೆ.

Category
ಕರಾವಳಿ ತರಂಗಿಣಿ