image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಜಿಎಸ್‍ಟಿ ಸಭೆಯಲ್ಲಿ ರಾಜ್ಯದ ಬಾಕಿ ಹಣದ ಕುರಿತು ಸಿಹಿ ಸುದ್ದಿ ಸಿಕ್ಕಿದೆ - ಡಿ.ಕೆ. ಶಿವಕುಮಾರ್

ಜಿಎಸ್‍ಟಿ ಸಭೆಯಲ್ಲಿ ರಾಜ್ಯದ ಬಾಕಿ ಹಣದ ಕುರಿತು ಸಿಹಿ ಸುದ್ದಿ ಸಿಕ್ಕಿದೆ - ಡಿ.ಕೆ. ಶಿವಕುಮಾರ್

ಬೆಂಗಳೂರು: ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಜಿಎಸ್‍ಟಿ ಕೌನ್ಸಿಲ್ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಕೃಷ್ಣ ಬೈರೇಗೌಡ ಭಾಗವಹಿಸಿ ರಾಜ್ಯದ ಪರವಾಗಿ ಪ್ರಮುಖ ವಿಷಯಗಳನ್ನು ಮಂಡಿಸಿದ್ದಾರೆ. ಸಭೆಯ ಬಳಿಕ ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ರಾಜ್ಯಕ್ಕೆ ಬರಬೇಕಿರುವ ಹಳೆಯ ಬಾಕಿ ಹಣದ ವಿಚಾರವಾಗಿ ಕೇಂದ್ರ ವಿತ್ತ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಅವರು ಕೆಲವು ಸಿಹಿ ಸುದ್ದಿಗಳನ್ನು ನೀಡಿದ್ದಾರೆ ಎಂದು ತಿಳಿಸಿದರು. ಆದರೆ ಈ ಕುರಿತು ಸಂಪೂರ್ಣ ವಿವರಗಳನ್ನು ಸೂಕ್ತ ಸಮಯದಲ್ಲಿ ಹಂಚಿಕೊಳ್ಳುವುದಾಗಿ ಹೇಳಿದರು.

ಜಿಎಸ್‍ಟಿ ಕೌನ್ಸಿಲ್ ಸಭೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಕರ್ನಾಟಕ ಸರ್ಕಾರ ಮಂಡಿಸಿದ ಅಂಶಗಳಿಗೆ ಸಭೆಯಲ್ಲಿದ್ದ ಇತರ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. ಮುಖ್ಯವಾಗಿ, ಜಿಎಸ್‍ಟಿ ಪಾವತಿಸದವರ ವಿರುದ್ಧ ತಕ್ಷಣವೇ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸುವುದು ಸರಿಯಲ್ಲ ಎಂಬುದನ್ನು ಸಭೆಯಲ್ಲಿ ಪ್ರತಿಪಾದಿಸಲಾಯಿತು. ಆದಾಯ ತೆರಿಗೆ ನಿಯಮ ಹಾಗೂ ನಿಬಂಧನೆಗಳಂತೆಯೇ ಜಿಎಸ್‍ಟಿ ವಿಚಾರದಲ್ಲೂ ಕ್ರಮ ಕೈಗೊಳ್ಳಬೇಕು, ಅಧಿಕಾರಿಗಳು ಅನಗತ್ಯವಾಗಿ ವ್ಯಾಪಾರಸ್ಥರನ್ನು ಬಂಧಿಸುವುದು ಸೂಕ್ತವಲ್ಲ ಎಂದು ವಾದಿಸಲಾಯಿತು. ನಿಯಮಾನುಸಾರ ಎಷ್ಟು ತೆರಿಗೆ ಪಾವತಿಸಬೇಕೋ ಅದನ್ನು ಕಟ್ಟಿಸಿಕೊಳ್ಳಬೇಕೇ ಹೊರತು ಬಂಧನ ಸರಿಯಲ್ಲ ಎಂಬ ಚರ್ಚೆಗೆ, ಒಂದು ರಾಜ್ಯವನ್ನು ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳು ಸಮ್ಮತಿ ಸೂಚಿಸಿವೆ ಎಂದು ಡಿ.ಕೆ. ಶಿವಕುಮಾರ್ ವಿವರಣೆ ನೀಡಿದರು.

Category
ಕರಾವಳಿ ತರಂಗಿಣಿ