image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮಠಾಧೀಶರು ಹಾಗೂ ಭಕ್ತರ ತಂಗುದಾಣಕ್ಕೆ ಬೆಂಗಳೂರು ಹೊರವಲಯದಲ್ಲಿ 2 ಎಕರೆ ಜಾಗ: ಡಿ.ಕೆ. ಶಿವಕುಮಾರ್ ಘೋಷಣೆ

ಮಠಾಧೀಶರು ಹಾಗೂ ಭಕ್ತರ ತಂಗುದಾಣಕ್ಕೆ ಬೆಂಗಳೂರು ಹೊರವಲಯದಲ್ಲಿ 2 ಎಕರೆ ಜಾಗ: ಡಿ.ಕೆ. ಶಿವಕುಮಾರ್ ಘೋಷಣೆ

ಬೆಂಗಳೂರು : ಬೆಂಗಳೂರಿನ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಭಾನುವಾರ ನಡೆದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹೊರ ಊರುಗಳಿಂದ ಆಗಮಿಸುವ ಮಠಾಧೀಶರು ಮತ್ತು ಭಕ್ತರು ಉಳಿದುಕೊಳ್ಳಲು ಅನುಕೂಲವಾಗುವಂತೆ ನಗರದ ಹೊರವಲಯದಲ್ಲಿ 2 ಎಕರೆ ಜಾಗ ನೀಡುವುದಾಗಿ ಘೋಷಿಸಿದರು. "ಜಾಗ ನಮ್ಮದು, ಕಟ್ಟಡ ನಿಮ್ಮದು. ಇದಕ್ಕೆ ವೀರಗಂಗಾಧರ ಸ್ವಾಮೀಜಿ ಅವರ ಹೆಸರು ಇಡುತ್ತೀರೋ ಅಥವಾ ಬೇರೆ ಯಾರ ಹೆಸರು ಇಡುತ್ತೀರೋ ಅದು ನಿಮ್ಮಿಷ್ಟ. ಅವರ ಆಶಯವನ್ನು ಜಾರಿಗೊಳಿಸಿ" ಎಂದು ತಿಳಿಸಿದರು.

ವಿಶ್ವದ ಮೊದಲ ಸಂಸತ್ತನ್ನು ಪರಿಚಯಿಸಿ, ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ನೀಡಿದ ವೀರಶೈವ ಲಿಂಗಾಯತ ಧರ್ಮದ ಪ್ರವರ್ತಕರಾದ ಬಸವಣ್ಣನವರನ್ನು ಜಗತ್ತು ವಿಶ್ವಗುರು ಎಂದು ಗೌರವಿಸುತ್ತದೆ ಎಂದು ಸ್ಮರಿಸಿದ ಅವರು, "ಮಾನವ ಧರ್ಮಕ್ಕೆ ಜಯವಾಗಲಿ, ವಿಶ್ವಕ್ಕೆ ಧರ್ಮದಿಂದಲೇ ಶಾಂತಿ" ಎಂದ ವೀರಗಂಗಾಧರ ಅಜ್ಜ ಅವರ ನುಡಿಯನ್ನು ಉಲ್ಲೇಖಿಸಿದರು. ಮಾನವ ಧರ್ಮದ ಪ್ರತಿಪಾದನೆಯಿಂದಲೇ ಮಠಗಳಿಗೆ ನೈಜ ಶಕ್ತಿ ಬರುತ್ತದೆ. ಆದ್ದರಿಂದ 'ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು' ಎಂದು ಸಾರಿದ ಧರ್ಮದ ಮೂಲ ತತ್ತ್ವಗಳನ್ನು ರಕ್ಷಿಸಬೇಕು ಎಂದು ಮಠಾಧೀಶರಲ್ಲಿ ಮನವಿ ಮಾಡಿದರು.

ಇದೇ ವೇಳೆ, ಆರ್ಥಿಕವಾಗಿ ಸಬಲವಾಗಿರುವ ಮಠಗಳು ಸರ್ಕಾರಕ್ಕೆ ಸರಿಸಮನಾಗಿ ಸಮಾಜದ ಎಲ್ಲಾ ಧರ್ಮದ ವಿದ್ಯಾರ್ಥಿಗಳಿಗೆ ಸಂಸ್ಕಾರ, ಶಿಕ್ಷಣ, ಜ್ಞಾನ ಮತ್ತು ಅಕ್ಷರದಾಸೋಹವನ್ನು ನೀಡುತ್ತಿರುವುದನ್ನು ಮುಕ್ತಕಂಠದಿಂದ ಶ್ಲಾಘಿಸಿ, ಅನನ್ಯ ಸೇವಾ ಕಾರ್ಯದಲ್ಲಿ ತೊಡಗಿರುವ ಎಲ್ಲ ಮಠಾಧೀಶರಿಗೂ ತಮ್ಮ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸಿದರು.

Category
ಕರಾವಳಿ ತರಂಗಿಣಿ