image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರ ಆರೋಗ್ಯ ವಿಚಾರಿಸಿದ ಯು.ಟಿ. ಖಾದರ್

ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರ ಆರೋಗ್ಯ ವಿಚಾರಿಸಿದ ಯು.ಟಿ. ಖಾದರ್

ಬೆಂಗಳೂರು : ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸಹಕಾರ ರತ್ನ, ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಖಾದರ್, ವೈದ್ಯರಿಂದ ರಾಜೇಂದ್ರ ಕುಮಾರ್ ಅವರ ಚಿಕಿತ್ಸೆ ಮತ್ತು ಅರೋಗ್ಯ ಸುಧಾರಣೆ ಚಿಕಿತ್ಸೆ ಕುರಿತು ವಿವರವಾದ ಮಾಹಿತಿ ಪಡೆದುಕೊಂಡರು. ಕುಟುಂಬಸ್ಥರು ಹಾಗೂ ವೈದ್ಯರ ಜೊತೆ ಸುದೀರ್ಘವಾಗಿ ಚರ್ಚಿಸಿದರು

ಅವರ  ಕ್ಷೇತ್ರದಲ್ಲಿದ್ದ ಸಕ್ರಿಯ ಕೊಡುಗೆಗಳನ್ನು ಸ್ಮರಿಸಿದ ಯು.ಟಿ. ಖಾದರ್, ರಾಜೇಂದ್ರ ಕುಮಾರ್ ಅವರು ತಕ್ಷಣ ಚೇತರಿಸಿಕೊಂಡು ತಮ್ಮ ನಿತ್ಯದ ಕಾರ್ಯ ಚಟುವಟಿಕೆಗಳಿಗೆ ಮರಳಲಿ ಎಂದು ಶುಭ ಹಾರೈಸಿದರು.   ರಾಜೇಂದ್ರ ಕುಮಾರ್ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದರು ಎಂದು ಹೇಳಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಪ್ರಮುಖರು ಹಾಗೂ ಸಹಕಾರ ಕ್ಷೇತ್ರದ ಹಲವು ಮುಖಂಡರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ