image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಹಿಂದುತ್ವ ದುರ್ಬಲವಾದರೆ ದೇಶವೂ ದುರ್ಬಲ: ಮದ್ದೂರಿನಲ್ಲಿ ಸಿ.ಟಿ. ರವಿ ಪ್ರತಿಪಾದನೆ

ಹಿಂದುತ್ವ ದುರ್ಬಲವಾದರೆ ದೇಶವೂ ದುರ್ಬಲ: ಮದ್ದೂರಿನಲ್ಲಿ ಸಿ.ಟಿ. ರವಿ ಪ್ರತಿಪಾದನೆ

ಮದ್ದೂರು: ಹಿಂದುತ್ವವೇ ಭಾರತದ ಮೂಲ ರಾಷ್ಟ್ರೀಯತೆಯಾಗಿದ್ದು, ಅದು ದುರ್ಬಲಗೊಂಡರೆ ಇಡೀ ದೇಶವೇ ದುರ್ಬಲವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಹೇಳಿದ್ದಾರೆ. ಮದ್ದೂರಿನಲ್ಲಿ ನಡೆದ ಸಾಮೂಹಿಕ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಗಣೇಶೋತ್ಸವವು ಕೇವಲ ಪೂಜೆ ಮತ್ತು ಪ್ರಸಾದಕ್ಕೆ ಸೀಮಿತವಾಗದೆ, ಸಾಮಾಜಿಕ ಜಾಗೃತಿ ಮೂಡಿಸುವ ಹಾಗೂ ಹಿಂದೂ ಸಮಾಜವನ್ನು ಸಂಘಟಿಸುವ ಪ್ರಬಲ ವೇದಿಕೆಯಾಗಬೇಕು ಎಂದು ಪ್ರತಿಪಾದಿಸಿದರು.

ಲೋಕಮಾನ್ಯ ಬಾಲಗಂಗಾಧರ ತಿಲಕರು ಜಾಗೃತಿ ಮೂಡಿಸುವ ಉದ್ದೇಶದಿಂದಲೇ ಸಾರ್ವಜನಿಕ ಗಣೇಶೋತ್ಸವ ಪ್ರಾರಂಭಿಸಿದ್ದರು. ಹೀಗಾಗಿ ಹಬ್ಬಗಳ ಆಚರಣೆಯಲ್ಲಿ ಜಾತೀಯತೆ, ಅಸ್ಪೃಶ್ಯತೆ ಹಾಗೂ ಮತಾಂತರದ ವಿರುದ್ಧ ಜಾಗೃತಿ ಮೂಡಬೇಕು. 'ನಾವೆಲ್ಲ ಹಿಂದೂ, ನಾವೆಲ್ಲ ಒಂದು' ಎಂಬ ಭಾವನೆ ಬೆಳೆಯಬೇಕು ಎಂದು ಕರೆ ನೀಡಿದ ಅವರು, ಗಾಂಧಾರ, ಸಿಂಧ್, ಬಂಗಾಳ ಹಾಗೂ ಕಾಶ್ಮೀರದಲ್ಲಿ ಉಂಟಾದ ಜನಸಂಖ್ಯಾ ಬದಲಾವಣೆಗಳನ್ನು ಉಲ್ಲೇಖಿಸಿ, ಇತಿಹಾಸದ ಈ ಬೆಳವಣಿಗೆಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಇದೇ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಆಡಳಿತಾರೂಢ ಕಾಂಗ್ರೆಸ್ ಮತಬ್ಯಾಂಕ್‌ಗಾಗಿ ಓಲೈಕೆ ರಾಜಕಾರಣ ಮಾಡುತ್ತಿದ್ದು, ಹಿಂದೂ ಸಮಾಜವನ್ನು ಜಾತಿಯಾಧಾರದಲ್ಲಿ ಒಡೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಮೆರವಣಿಗೆಗಳಿಗೆ ಸಂಬಂಧಿಸಿದಂತೆ ಎಲ್ಲರಿಗೂ ಸಮಾನ ನಿಯಮಗಳಿರಬೇಕು. ಹಿಂದೂಗಳು ಈ ದೇಶದ ಎರಡನೇ ದರ್ಜೆಯ ನಾಗರಿಕರಲ್ಲ. ತಾವು ರಾಜಕಾರಣಕ್ಕಾಗಿ ಹಿಂದುತ್ವ ಬಳಸುತ್ತಿಲ್ಲ, ಬದಲಾಗಿ ಹಿಂದುತ್ವಕ್ಕಾಗಿ ರಾಜಕಾರಣಕ್ಕೆ ಬಂದಿರುವುದಾಗಿ ಸ್ಪಷ್ಟಪಡಿಸಿದ ಅವರು, ಹಿಂದೂಗಳ ಭಾವನೆಗೆ ಧಕ್ಕೆ ತಂದರೆ ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.

Category
ಕರಾವಳಿ ತರಂಗಿಣಿ