image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಚಾಮುಂಡೇಶ್ವರಿ ತಾಯಿಗೆ ವಿಜೃಂಭಣೆಯ ಚಿನ್ನ - ವಜ್ರ - ವೈಢೂರ್ಯದ ಜವಾರಿ ಉತ್ಸವ

ಚಾಮುಂಡೇಶ್ವರಿ ತಾಯಿಗೆ ವಿಜೃಂಭಣೆಯ ಚಿನ್ನ - ವಜ್ರ - ವೈಢೂರ್ಯದ ಜವಾರಿ ಉತ್ಸವ

ಮೈಸೂರು: ತಾಯಿ ಚಾಮುಂಡೇಶ್ವರಿಗೆ ಚಿನ್ನ- ವಜ್ರ - ವೈಢೂರ್ಯವನ್ನು ಹಾಕಿ ನಡೆಸುವ ಜವಾರಿ ಉತ್ಸವ ಭಾನುವಾರ ರಾತ್ರಿ ಚಾಮುಂಡಿ ಬೆಟ್ಟದಲ್ಲಿ ವೈಭವದಿಂದ ಜರಗಿದೆ. ಇದು ನವರಾತ್ರಿಯಲ್ಲಿ ಚಾಮುಂಡಿ ಬೆಟ್ಟದಲ್ಲಿ ನಡೆಯುವ ಕೊನೆಯ ಉತ್ಸವವಾಗಿದ್ದು, ಆ ಮೂಲಕ ಈ ಬಾರಿಯ ನವರಾತ್ರಿಯ ಉತ್ಸವ ಚಾಮುಂಡಿ ಬೆಟ್ಟದಲ್ಲಿ ಮುಕ್ತಾಯವಾಗಿದೆ.

ನಾಡ ಅಧಿದೇವತೆ ಚಾಮುಂಡಿ ತಾಯಿಗೆ ನವರಾತ್ರಿಯಲ್ಲಿ ವಿಶೇಷ ಪೂಜೆ ಹಾಗೂ ವಿಶೇಷ ಅಲಂಕಾರಗಳು ನವರಾತ್ರಿಯ ಒಂಬತ್ತು ದಿನವೂ ನಡೆಯುತ್ತವೆ. ಜತೆಗೆ ನವರಾತ್ರಿಯ ಹತ್ತನೇ ದಿನ ವಿಜಯದಶಮಿಯ ವಿಶೇಷ ಪೂಜೆ ಜತೆಗೆ ರಥೋತ್ಸವ, ಶಯಾನೋತ್ಸವ, ಹಾಗೂ ನವರಾತ್ರಿಯ ಕೊನೆಯ ಉತ್ಸವ ಜವಾರಿ ಉತ್ಸವ ನಡೆಯುವ ಮೂಲಕ ಶರನ್ನವರಾತ್ರಿಯ ಪೂಜೆಗಳು ಚಾಮುಂಡಿಬೆಟ್ಟದಲ್ಲಿ ಸಂಪನ್ನವಾಗುವ ಮೂಲಕ ಈ ವರ್ಷದ ನವರಾತ್ರಿ ಕೊನೆಗೊಳ್ಳುತ್ತದೆ.

ನಾಡ ಅಧಿದೇವತೆ ಚಾಮುಂಡಿ ತಾಯಿಯ ಮೂಲ ಮೂರ್ತಿಗೆ ರಾಜ-ಮಹಾರಾಜರು ನೀಡಿದ ವಜ್ರ-ವೈಢೂರ್ಯ ಹಾಕಿ ಶೃಂಗಾರ ಮಾಡಿ, ಜತೆಗೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ದೇವಾಲಯದ ಆವರಣದಲ್ಲಿ ಮೈಸೂರು ರಾಜ ಒಡೆಯರು​​ ನೀಡಿರುವ ಚಿನ್ನ-ವಜ್ರಗಳ ಜತೆಗೆ ಬೆಲೆ ಬಾಳುವ ಪಾರಂಪರಿಕ ವಜ್ರದ ಅಪರೂಪದ ಪಚ್ಚೆ ಹರಳನ್ನು ಧರಿಸಿ ಪೂಜೆ ಸಲ್ಲಿಸುತ್ತಾರೆ. ಆ ಮೂಲಕ ವಿಶೇಷ ಪೂಜೆ ಸಲ್ಲಿಸಿ ಈ ವರ್ಷದ ಶರನ್ನವರಾತ್ರಿ ಸಂಪನ್ನವಾಯಿತು.

ಈ ಆಭರಣಗಳು ಮೈಸೂರು ಜಿಲ್ಲಾ ಖಜಾನೆಯಲ್ಲಿ ಭದ್ರವಾಗಿ ಇರುತ್ತದೆ. ಜವಾರಿ ಉತ್ಸವದ ಸಂದರ್ಭದಲ್ಲಿ ವಿಶೇಷ ಪೊಲೀಸ್‌ ಭದ್ರತೆಯಲ್ಲಿ ತಂದು ನಾಡ ಅಧಿದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಧರಿಸಿ ವಾಪಾಸ್‌ ಆಭರಣಗಳು ಇಲಾಖಾ ಖಜಾನೆಗೆ ಮರಳುತ್ತದೆ.

Category
ಕರಾವಳಿ ತರಂಗಿಣಿ