image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಚಿತ್ರದುರ್ಗಕ್ಕೆ ಭದ್ರಾ ನೀರು ಪ್ರವೇಶ: ಬಾಗಿನ ಅರ್ಪಣೆ ವೇಳೆ ಸಾಣೇಹಳ್ಳಿ ಶ್ರೀಗಳ ಹೇಳಿಕೆ ವೈರಲ್

ಚಿತ್ರದುರ್ಗಕ್ಕೆ ಭದ್ರಾ ನೀರು ಪ್ರವೇಶ: ಬಾಗಿನ ಅರ್ಪಣೆ ವೇಳೆ ಸಾಣೇಹಳ್ಳಿ ಶ್ರೀಗಳ ಹೇಳಿಕೆ ವೈರಲ್

ಚಿತ್ರದುರ್ಗ: ಸುಮಾರು ಐದು ದಶಕಗಳ ಸುದೀರ್ಘ ಹೋರಾಟ ಹಾಗೂ ಬಯಲುಸೀಮೆ ಜನರ ಕನಸಾಗಿದ್ದ ಭದ್ರಾ ಮೇಲ್ದಂಡೆ ಯೋಜನೆಯ ನೀರು ಕೊನೆಗೂ ಚಿತ್ರದುರ್ಗ ಜಿಲ್ಲೆಯ ಶಾಖಾ ಕಾಲುವೆಗೆ ಪ್ರಾಯೋಗಿಕವಾಗಿ ಹರಿದುಬಂದಿದೆ. ಬರಪೀಡಿತ ಜಿಲ್ಲೆಗೆ ಭದ್ರಾ ಜಲಾಶಯದ ನೀರು ತಲುಪುತ್ತಿದ್ದಂತೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಬಳಿಯ ಕಾಲುವೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

ಈ ಶುಭ ಸಂದರ್ಭದಲ್ಲಿ ಸ್ಥಳೀಯ ಮಹಿಳೆಯರು ಕಾಲುವೆಗೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು. ಈ ವೇಳೆ ಸಾಣೇಹಳ್ಳಿ ತರಳಬಾಳು ಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಅವರು ಉಪಸ್ಥಿತರಿದ್ದರು. ಮಹಿಳೆಯರು ಬಾಗಿನ ಅರ್ಪಿಸುತ್ತಾ 'ಮುತ್ತೈದೆ ಭಾಗ್ಯ ಕರುಣಿಸು' ಎಂದು ಪ್ರಾರ್ಥಿಸುತ್ತಿದ್ದಾಗ, ಪಕ್ಕದಲ್ಲಿದ್ದ ಶ್ರೀಗಳು "ಬೇಗ ಸಾಯಲಿ" ಎಂದು ಹೇಳಿರುವುದು ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಶ್ರೀಗಳ ಈ ಹೇಳಿಕೆಯನ್ನು ಕೇಳಿ ಸ್ಥಳದಲ್ಲಿದ್ದ ಮಹಿಳೆಯರು ನಕ್ಕಿದ್ದಾರಾದರೂ, ಸ್ವಾಮೀಜಿ ಯಾವ ಅರ್ಥದಲ್ಲಿ ಅಥವಾ ಉದ್ದೇಶದಿಂದ ಈ ಮಾತುಗಳನ್ನು ಆಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಈ ಕುರಿತು ಮಠದ ಕಡೆಯಿಂದ ಯಾವುದೇ ಸ್ಪಷ್ಟನೆ ಹೊರಬಿದ್ದಿಲ್ಲವಾದರೂ, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಐದು ದಶಕಗಳ ಶ್ರಮದ ಫಲವಾಗಿ ಭದ್ರೆ ಹರಿದುಬಂದ ಇಂತಹ ಶುಭ ಸಂದರ್ಭದಲ್ಲಿ ಶ್ರೀಗಳು 'ಸಾಯುವ' ಪದ ಬಳಸಿರುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

Category
ಕರಾವಳಿ ತರಂಗಿಣಿ