image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

KEA 4,699 ಹುದ್ದೆಗಳ ಭರ್ತಿಗೆ ಸಿದ್ಧತೆ: ಸೆಪ್ಟೆಂಬರ್‌ನಲ್ಲಿ ಅಧಿಸೂಚನೆ

KEA 4,699 ಹುದ್ದೆಗಳ ಭರ್ತಿಗೆ ಸಿದ್ಧತೆ: ಸೆಪ್ಟೆಂಬರ್‌ನಲ್ಲಿ ಅಧಿಸೂಚನೆ

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 4,699 ಹುದ್ದೆಗಳ ಭರ್ತಿಗೆ ಸಿದ್ಧತೆ ನಡೆಸಿದೆ. ಈ ನೇಮಕಾತಿಯಲ್ಲಿ ಪದವಿ, ಪಿಯುಸಿ ಹಾಗೂ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ದೊರೆಯಲಿದ್ದು, ಸೆಪ್ಟೆಂಬರ್‌ನಲ್ಲಿ ಅಧಿಕೃತ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆಯಿದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕೆಇಎ ಲಿಖಿತ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ನೇಮಕಾತಿಯಲ್ಲಿ ಒಟ್ಟು 3,645 RPC ಹಾಗೂ 1,054 ಕಲ್ಯಾಣ ಕರ್ನಾಟಕ (KK) ಹುದ್ದೆಗಳಿವೆ. ಇದರಲ್ಲಿ ಪದವಿ ಮಟ್ಟದ 2,421 ಹುದ್ದೆಗಳು (RPC 1,912, KK 509), ಪಿಯುಸಿ ಮಟ್ಟದ 2,062 ಹುದ್ದೆಗಳು (RPC 1,548, KK 514) ಮತ್ತು ಡಿಪ್ಲೊಮಾ ಮಟ್ಟದ 216 ತಾಂತ್ರಿಕ ಹುದ್ದೆಗಳು (RPC 185, KK 31) ಸೇರಿವೆ.

ಪದವಿ ವಿದ್ಯಾರ್ಹತೆಯ ಅಭ್ಯರ್ಥಿಗಳಿಗೆ ಲೆಕ್ಕ ಸಹಾಯಕರು (502), ವಾರ್ಡನ್ / ನಿಲಯ ಮೇಲ್ವಿಚಾರಕರು (705+), ಪ್ರಥಮ ದರ್ಜೆ ಸಹಾಯಕರು (500+), ಸಹಕಾರ ಸಂಘಗಳ ಲೆಕ್ಕಪರಿಶೋಧಕರು (502), ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 (184), ವಾಣಿಜ್ಯ ತೆರಿಗೆ ಪರಿವೀಕ್ಷಕರು (50) ಮತ್ತು ಸಚಿವಾಲಯ ಸಹಾಯಕ (42) ಹುದ್ದೆಗಳು ಲಭ್ಯವಿವೆ. ಪಿಯುಸಿ ಅಭ್ಯರ್ಥಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ SDA (590), ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2 (322), ಗ್ರಾಮೀಣಾಭಿವೃದ್ಧಿ ಇಲಾಖೆ SDA (309) ಹಾಗೂ ಕಿರಿಯ ಲೆಕ್ಕ ಸಹಾಯಕ (223) ಹುದ್ದೆಗಳಿವೆ. ಡಿಪ್ಲೊಮಾ ಅಭ್ಯರ್ಥಿಗಳಿಗೆ ಸಹಾಯಕ ನಗರ ಯೋಜಕರು (119) ಮತ್ತು ಸಿವಿಲ್ ಜೂನಿಯರ್ ಎಂಜಿನಿಯರ್ (85) ಸೇರಿದಂತೆ ಒಟ್ಟು 216 ಹುದ್ದೆಗಳಿವೆ. ಕರ್ನಾಟಕ ನಾಗರಿಕ ಸೇವಾ ನಿಯಮಗಳು-2021ರ ಅನ್ವಯ ಪರೀಕ್ಷೆಗಳು ನಡೆಯಲಿದ್ದು, ಪದವಿ ಹಾಗೂ ಪಿಯುಸಿ ಹುದ್ದೆಗಳಿಗೆ ಪತ್ರಿಕೆ-1 (ಸಾಮಾನ್ಯ ಜ್ಞಾನ) ಮತ್ತು ಪತ್ರಿಕೆ-2 (ಸಂವಹನ/ವಿಷಯಾಧಾರಿತ) ಇರಲಿದೆ. ಡಿಪ್ಲೊಮಾ ಹುದ್ದೆಗಳಿಗೆ ವಿಷಯಾಧಾರಿತ ತಾಂತ್ರಿಕ ಪರೀಕ್ಷೆ ಇರಲಿದೆ. ಅಧಿಕೃತ ಮಾಹಿತಿಗಾಗಿ ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ ವೀಕ್ಷಿಸಬಹುದು.

Category
ಕರಾವಳಿ ತರಂಗಿಣಿ