image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ದಸರಾ ಮೆರವಣಿಗೆಗೆ ಹೊಸ ಮೆರುಗು: ಮಿಲಿಟರಿ, ವಾಯುಸೇನೆ ಭಾಗಿಗೆ ಮನವಿ

ದಸರಾ ಮೆರವಣಿಗೆಗೆ ಹೊಸ ಮೆರುಗು: ಮಿಲಿಟರಿ, ವಾಯುಸೇನೆ ಭಾಗಿಗೆ ಮನವಿ

ಬೆಂಗಳೂರು: ಈ ಬಾರಿಯ ದಸರಾ ವಿಜಯದಶಮಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಮಿಲಿಟರಿ ಹಾಗೂ ವಾಯುಸೇನೆಗೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ದಸರಾಗೆ ಪಾರಂಪರಿಕತೆಯ ಜೊತೆಗೆ ಇನ್ನಷ್ಟು ಹೊಸ ರೂಪ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

ಜಂಬೂಸವಾರಿ ಮೆರವಣಿಗೆಯಲ್ಲಿ ಕಂಸಾಳೆ, ಡೊಳ್ಳು ಸೇರಿದಂತೆ ಪ್ರತಿಯೊಂದು ಕಲಾಪ್ರದರ್ಶನಕ್ಕೂ ಒಂದೇ ತಂಡಕ್ಕೆ ಅವಕಾಶ ನೀಡಲಾಗುವುದು. ಇದರಿಂದ ರಾಜ್ಯದ ಎಲ್ಲ ವೈವಿಧ್ಯಮಯ ಕಲೆಗಳಿಗೂ ದಸರಾ ವೇದಿಕೆಯಲ್ಲಿ ಪ್ರದರ್ಶನ ನೀಡಲು ಅವಕಾಶ ಸಿಗಲಿದೆ. ಇನ್ನು ದಸರಾ ಚಲನಚಿತ್ರೋತ್ಸವದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ನೇತೃತ್ವದಲ್ಲಿ ನಾಡಿನ ಪ್ರಮುಖ ನಟ-ನಟಿಯರು ಪಾಲ್ಗೊಳ್ಳಲಿದ್ದು, ಮೆರವಣಿಗೆಯಲ್ಲಿ ಚಲನಚಿತ್ರ ರಂಗದ ಪ್ರತ್ಯೇಕ ಸ್ತಬ್ಧಚಿತ್ರವೂ ಇರಲಿದೆ.

ಪೊಲೀಸ್ ಬ್ಯಾಂಡ್ ಕಾರ್ಯಕ್ರಮಕ್ಕೆ ಹೊಸ ಸ್ಪರ್ಶ ನೀಡಲಾಗಿದ್ದು, ಸೆಸ್ಕ್ ವತಿಯಿಂದ ನಗರದಾದ್ಯಂತ ₹10 ಕೋಟಿಗೂ ಅಧಿಕ ವೆಚ್ಚದಲ್ಲಿ ಭವ್ಯ ದೀಪಾಲಂಕಾರ ವ್ಯವಸ್ಥೆ ಮಾಡಲಾಗುತ್ತಿದೆ. ಇದೇ ವೇಳೆ ಕಂಬಳ ಆಯೋಜನೆ ಕುರಿತು ಮಾತನಾಡಿದ ಅವರು, ಕಂಬಳ ನಮ್ಮ ರಾಜ್ಯದ ಸಾಂಪ್ರದಾಯಿಕ ಕ್ರೀಡೆಯಾಗಿದ್ದು, ಅದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಕಂಬಳದಿಂದ ಯಾವುದೇ ರೀತಿಯ ಪರಿಸರ ನಾಶ ಅಥವಾ ನೀರು ಪೋಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Category
ಕರಾವಳಿ ತರಂಗಿಣಿ