image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

KEA ಸೀಟು ರದ್ದತಿಗೆ ₹5,000 ದಂಡ: ಕೆಇಎ ಕಚೇರಿ ಮುಂದೆ ತೀವ್ರ ಪ್ರತಿಭಟನೆ

KEA ಸೀಟು ರದ್ದತಿಗೆ ₹5,000 ದಂಡ: ಕೆಇಎ ಕಚೇರಿ ಮುಂದೆ ತೀವ್ರ ಪ್ರತಿಭಟನೆ

ಬೆಂಗಳೂರು : ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಚೇರಿಯ ಮುಂದೆ ಯುಜಿ ಸಿಇಟಿ-2026ರ (UGCET-2026) ವಿದ್ಯಾರ್ಥಿಗಳು ಮತ್ತು ಪೋಷಕರು ಬೃಹತ್ ಪ್ರತಿಭಟನೆ ನಡೆಸಿದರು. ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟನ್ನು ರದ್ದುಪಡಿಸಿಕೊಂಡು ಮೂರನೇ ಸುತ್ತಿನ ಕೌನ್ಸೆಲಿಂಗ್‌ಗೆ ತೆರಳಲು ಪ್ರಾಧಿಕಾರವು ₹5,000 ದಂಡ ವಿಧಿಸಿರುವುದೇ ಈ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.

ಕೆಇಎ ಪ್ರಕಟಣೆಯಂತೆ ಆನ್‌ಲೈನ್ ಮೂಲಕ ಸೀಟು ರದ್ದು ಪ್ರಕ್ರಿಯೆಯು ಆಗಸ್ಟ್ 27ರಿಂದ ಆರಂಭವಾಗಿದ್ದು, ಆಗಸ್ಟ್ 29ರ ಮಧ್ಯಾಹ್ನ 3 ಗಂಟೆಯವರೆಗೆ ಲಭ್ಯವಿರುತ್ತದೆ. ಅಭ್ಯರ್ಥಿಗಳು ಕೆಇಎ ಪೋರ್ಟಲ್‌ಗೆ ಲಾಗಿನ್ ಆಗಿ ಕಡ್ಡಾಯವಾಗಿ ದಂಡ ಪಾವತಿಸಿ ಸೀಟು ರದ್ದುಪಡಿಸಿದರೆ ಮಾತ್ರ 3ನೇ ಸುತ್ತಿಗೆ ಅರ್ಹತೆ ಪಡೆಯಲಿದ್ದಾರೆ. 2ನೇ ಸುತ್ತಿನಲ್ಲಿ ಸೀಟು ಪಡೆದವರು ನಿಗದಿತ ಕಾಲೇಜಿಗೆ ಸೇರಬೇಕು ಅಥವಾ ಚಾಯ್ಸ್-1 ಆಯ್ಕೆ ಮಾಡದೆ 3ನೇ ಸುತ್ತಿಗೆ ಹೋಗಲು ಸೀಟು ರದ್ದುಪಡಿಸಲೇಬೇಕು ಎಂಬ ನಿಯಮವನ್ನು ಪ್ರಾಧಿಕಾರ ಜಾರಿಗೆ ತಂದಿದೆ. ಕಾಲೇಜು ಶುಲ್ಕದ ಜೊತೆಗೆ ಈ ರೀತಿಯ ಹೆಚ್ಚುವರಿ ದಂಡದ ಹೊರೆ ಹಾಕಿರುವುದಕ್ಕೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರ ನಡುವೆ, ವೈದ್ಯಕೀಯ ಶಿಕ್ಷಣ ಇಲಾಖೆಯ ಎಡವಟ್ಟಿನಿಂದಾಗಿ ನರ್ಸಿಂಗ್ ಹಾಗೂ ಬಿಪಿಟಿ (BPT) ಕೋರ್ಸ್ ಪ್ರವೇಶಾತಿ ಬಯಸಿದ ನೂರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಗೆ ತಲುಪಿದೆ. ನೋಂದಣಿಯಾಗದ ಮತ್ತು ವಿಳಾಸ ಬದಲಾದ ಕಾಲೇಜುಗಳ ಮಾಹಿತಿಯನ್ನು ಇಲಾಖೆ ಒದಗಿಸಿದ್ದರಿಂದ, ಕೆಇಎ ಅದೇ ಕಾಲೇಜುಗಳಿಗೆ ಸೀಟು ಹಂಚಿಕೆ ಮಾಡಿರುವುದು ವಿದ್ಯಾರ್ಥಿಗಳನ್ನು ಇನ್ನಷ್ಟು ಸಂಕಷ್ಟಕ್ಕೆ ಈಡುಮಾಡಿದೆ.

Category
ಕರಾವಳಿ ತರಂಗಿಣಿ