image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಹೊಸಪೇಟೆ-ಅರಸೀಕೆರೆ ನಡುವೆ ಹೊಸ ಡೆಮು ರೈಲು ಆರಂಭ: 5 ಜಿಲ್ಲೆಗಳ ಪ್ರಯಾಣಿಕರಿಗೆ ಸುಸಜ್ಜಿತ ಸೇವೆ

ಹೊಸಪೇಟೆ-ಅರಸೀಕೆರೆ ನಡುವೆ ಹೊಸ ಡೆಮು ರೈಲು ಆರಂಭ: 5 ಜಿಲ್ಲೆಗಳ ಪ್ರಯಾಣಿಕರಿಗೆ ಸುಸಜ್ಜಿತ ಸೇವೆ

ಹೊಸಪೇಟೆ : ಕರ್ನಾಟಕದ ರೈಲು ಪ್ರಯಾಣಿಕರಿಗೆ ರೈಲ್ವೇ ಇಲಾಖೆಯು ಸಿಹಿ ಸುದ್ದಿ ನೀಡಿದ್ದು, ಹೊಸಪೇಟೆ ಮತ್ತು ಅರಸೀಕೆರೆ ಮಾರ್ಗದಲ್ಲಿ ಹೊಸ ಡೆಮು (DEMU) ರೈಲು ಸೇವೆಯನ್ನು ಆರಂಭಿಸುತ್ತಿದೆ. ಆಗಸ್ಟ್ 28 ರಿಂದ ಚಾಲನೆಗೊಳ್ಳಲಿರುವ ಈ ಹೊಸ ರೈಲು, ಶನಿವಾರ ಹಾಗೂ ಭಾನುವಾರ ಹೊರತುಪಡಿಸಿ ವಾರಕ್ಕೆ 5 ದಿನ ಸಂಚಾರ ನಡೆಸಲಿದೆ.

ರೈಲು ಸಂಖ್ಯೆ 07343 ಹೊಸಪೇಟೆಯಿಂದ ಬೆಳಿಗ್ಗೆ 6:30ಕ್ಕೆ ಹೊರಟು, ದಾವಣಗೆರೆಯನ್ನು ಬೆಳಿಗ್ಗೆ 10:00 ಗಂಟೆಗೆ ಹಾಗೂ ಅರಸೀಕೆರೆಯನ್ನು ಮಧ್ಯಾಹ್ನ 2:20ಕ್ಕೆ ತಲುಪಲಿದೆ. ಮರುಪ್ರಯಾಣದಲ್ಲಿ ರೈಲು ಸಂಖ್ಯೆ 07344 ಅರಸೀಕೆರೆಯಿಂದ ಮಧ್ಯಾಹ್ನ 2:30ಕ್ಕೆ ಹೊರಟು, ದಾವಣಗೆರೆಯನ್ನು ಸಂಜೆ 5:20ಕ್ಕೆ ತಲುಪಿ, ರಾತ್ರಿ 9:30ಕ್ಕೆ ಹೊಸಪೇಟೆ ತಲುಪಲಿದೆ. ಈ ರೈಲು ಮಾರ್ಗವು ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಹಾಸನ ಸೇರಿದಂತೆ ರಾಜ್ಯದ 5 ಪ್ರಮುಖ ಜಿಲ್ಲೆಗಳ 29 ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಇದರಿಂದ ದಿನನಿತ್ಯ ಪ್ರಯಾಣಿಸುವ ಉದ್ಯೋಗಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ವ್ಯಾಪಾರಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.

Category
ಕರಾವಳಿ ತರಂಗಿಣಿ