image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಶಿಗ್ಗಾವಿ ಆಂಜನೇಯ ದೇವಾಲಯದಲ್ಲಿ ಅಪವಿತ್ರ ಕೃತ್ಯ: ಆ. 26ಕ್ಕೆ ಪಟ್ಟಣ ಬಂದ್‌ಗೆ ಪ್ರಮೋದ್ ಮುತಾಲಿಕ್ ಕರೆ

ಶಿಗ್ಗಾವಿ ಆಂಜನೇಯ ದೇವಾಲಯದಲ್ಲಿ ಅಪವಿತ್ರ ಕೃತ್ಯ: ಆ. 26ಕ್ಕೆ ಪಟ್ಟಣ ಬಂದ್‌ಗೆ ಪ್ರಮೋದ್ ಮುತಾಲಿಕ್ ಕರೆ

ಶಿಗ್ಗಾಂವಿ : ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಇರುವ ಐತಿಹಾಸಿಕ ಆಂಜನೇಯ ಮತ್ತು ಬನ್ನಿಮಹಾಕಾಳಿ ದೇವಾಲಯದ ಆವರಣದಲ್ಲಿ ಅನ್ಯಕೋಮಿನ ಯುವಕನೊಬ್ಬ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿರುವ ಘಟನೆ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪಿ ಮಹಮದ್ ಜಾಫರ್ ಎಂಬಾತನನ್ನು ಸ್ಥಳೀಯರು ತಕ್ಷಣವೇ ಹಿಡಿದು ಶಿಗ್ಗಾಂವಿ ಪೊಲೀಸರಿಗೆ ಒಪ್ಪಿಸಿದ್ದು, ಕೃತ್ಯವೆಸಗಿದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಭಕ್ತಾದಿಗಳು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ. ಶ್ರಾವಣ ಮಾಸದ ಧಾರ್ಮಿಕ ಪೂಜಾ ಕಾರ್ಯಗಳು ನಡೆಯುತ್ತಿದ್ದ ವೇಳೆ ನಡೆದ ಈ ದುಷ್ಕೃತ್ಯವನ್ನು ಖಂಡಿಸಿರುವ ಹಿಂದೂ ಸಂಘಟನೆಯ ಕಾರ್ಯಕರ್ತರು ದೇವಾಲಯವನ್ನು ಗೋಮೂತ್ರದಿಂದ ಪ್ರೋಕ್ಷಣೆ ಮಾಡಿ ಸ್ವಚ್ಛಗೊಳಿಸಿದ್ದು, ಬಳಿಕ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿರುವ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ದೇಗುಲದ ಪವಿತ್ರತೆಗೆ ಧಕ್ಕೆ ತಂದ ಆರೋಪಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಮತ್ತು ಆತನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಈ ಕೃತ್ಯವನ್ನು ಪ್ರತಿಭಟಿಸಿ ಮುಂಬರುವ ಈದ್ ಮಿಲಾದ್ ಹಬ್ಬದಂದು (ಆಗಸ್ಟ್ 26) ಶಿಗ್ಗಾಂವಿ ಪಟ್ಟಣ ಸಂಪೂರ್ಣ ಬಂದ್‌ಗೆ ಶ್ರೀರಾಮಸೇನೆ ಕರೆ ನೀಡಿದೆ. ಪ್ರಕರಣದ ಹಿಂದೆ ಸ್ಥಳೀಯ ನಾಯಕರು ಹಾಗೂ ಮೌಲ್ವಿಗಳ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿರುವ ಮುತಾಲಿಕ್, ಘಟನೆಯ ಕುರಿತು ಉನ್ನತ ಮಟ್ಟದ ಹಾಗೂ ಆಳವಾದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

Category
ಕರಾವಳಿ ತರಂಗಿಣಿ