image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜಾರ್ಖಂಡ್ ಚುನಾವಣೆ: ಎಐಸಿಸಿ ಸಮನ್ವಯಕಾರರಾಗಿ ಹರಿಪ್ರಸಾದ್

ಜಾರ್ಖಂಡ್ ಚುನಾವಣೆ: ಎಐಸಿಸಿ ಸಮನ್ವಯಕಾರರಾಗಿ ಹರಿಪ್ರಸಾದ್

ಮಂಗಳೂರು: ಜಾರ್ಖಂಡ್‌ನಲ್ಲಿ  ನಡೆಯಲಿರುವ ವಿಧಾನಸಭಾ ಚುನಾವಣೆಗೆ ಎಐಸಿಸಿಯ ಹಿರಿಯ ಸಮನ್ವಯಕಾರರನ್ನಾಗಿ ಕಾಂಗ್ರೆಸ್‌ನ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರನ್ನು ನೇಮಕ ಮಾಡಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಆದೇಶಿಸಿದೆ.

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನಿರ್ದೇಶನದಂತೆ ಬಿ.ಕೆ. ಹರಿಪ್ರಸಾದ್, ಗೌರವ್ ಗೊಗಾಯ್, ಮೋಹನ್ ಮರ್ಕಮ್ ಅವರನ್ನು ನೇಮಕಗೊಳಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆದೇಶಿಸಿದ್ದಾರೆ.

Category
ಕರಾವಳಿ ತರಂಗಿಣಿ