image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ವಿರುದ್ಧ ತನಿಖೆಗೆ ಆರ್‌ಟಿಐ ಕಾರ್ಯಕರ್ತನ ಆಗ್ರಹ

ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ವಿರುದ್ಧ ತನಿಖೆಗೆ ಆರ್‌ಟಿಐ ಕಾರ್ಯಕರ್ತನ ಆಗ್ರಹ

ಸೂರತ್ : ಅಮೆರಿಕದಿಂದ ಭಾರತಕ್ಕೆ ಆಗಮಿಸಿ ವಿದ್ಯಾರ್ಥಿ ಚಳವಳಿಯ ನೇತೃತ್ವ ವಹಿಸಿರುವ 'ಕಾಕ್ರೋಚ್ ಜನತಾ ಪಕ್ಷ'ದ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಮತ್ತು ಅವರ ಕುಟುಂಬದ ಆರ್ಥಿಕ ಹಿನ್ನೆಲೆಯ ಕುರಿತು ತೀವ್ರ ತನಿಖೆ ನಡೆಸಬೇಕೆಂಬ ಆಗ್ರಹ ವ್ಯಕ್ತವಾಗಿದೆ. ನೀಟ್ ಪರೀಕ್ಷೆ ಅಕ್ರಮಗಳ ವಿರುದ್ಧದ ಪ್ರತಿಭಟನೆಯ ಹಿಂದೆ ವಿದೇಶಿ ಫಂಡಿಂಗ್, ಸೋಷಿಯಲ್ ಮೀಡಿಯಾ ಹ್ಯಾಂಡ್ಲರ್‌ಗಳ ಸಕ್ರಿಯ ಪಾತ್ರ ಹಾಗೂ ರಾಜಕೀಯ ದುರುದ್ದೇಶಗಳಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ವಿದೇಶಿ ಫಂಡಿಂಗ್ ಆರೋಪಗಳ ಕುರಿತು ದೀಪ್ಕೆ ನೀಡಿದ್ದ ಹೇಳಿಕೆಗಳ ಬೆನ್ನಲ್ಲೇ, ಸೂರತ್ ಮೂಲದ ಆರ್‌ಟಿಐ ಕಾರ್ಯಕರ್ತ ಅಮಿತ್ ತಿವಾರಿ ಅವರು ಅಭಿಜೀತ್ ದೀಪ್ಕೆ ಕುಟುಂಬದ ಆಸ್ತಿಪಾಸ್ತಿಗಳ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ನಿವೃತ್ತ ನೌಕರರಾಗಿರುವ ಅಭಿಜೀತ್ ಅವರ ತಂದೆ ಭಗವಾನ್‌ರಾವ್ ಅವರು ತಮ್ಮ ಆದಾಯದ ಮಿತಿಯಲ್ಲಿದ್ದುಕೊಂಡು ಮಗನ ವಿದೇಶಿ ಶಿಕ್ಷಣಕ್ಕೆ ಬೃಹತ್ ಪ್ರಮಾಣದ ಹಣ ಖರ್ಚು ಮಾಡಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಇದರೊಂದಿಗೆ, ಸಿಜೆಪಿ ಪ್ರತಿಭಟನಾಕಾರರಿಗೆ ಘೋಷಿಸಲಾಗಿರುವ ಕಾನೂನು ರಕ್ಷಣಾ ನಿಧಿಯ ಕುರಿತಾಗಿಯೂ ಆಕ್ಷೇಪ ವ್ಯಕ್ತವಾಗಿದೆ. 1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 29A ಅಡಿಯಲ್ಲಿ ಸಿಜೆಪಿ ಪಕ್ಷವು ಚುನಾವಣಾ ಆಯೋಗದಲ್ಲಿ ನೋಂದಾಯಿಸಲ್ಪಟ್ಟಿದೆಯೇ ಹಾಗೂ ನೋಂದಾಯಿತವಲ್ಲದ ಸಂಘಟನೆಯು ರಾಜಕೀಯ ಮಾದರಿಯಲ್ಲಿ ಕೋಟ್ಯಂತರ ರೂಪಾಯಿ ನಿಧಿ ನಿರ್ವಹಣೆ ಮಾಡುತ್ತಿದೆಯೇ ಎಂಬುದನ್ನು ಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ನೀಟ್ ವಿದ್ಯಾರ್ಥಿಗಳ ಹಿತರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಈ ಚಳವಳಿಯ ನೈಜ ಹಿನ್ನೆಲೆ ಮತ್ತು ಉದ್ದೇಶಗಳ ಬಗ್ಗೆ ತನಿಖೆಯಿಂದಷ್ಟೇ ಸ್ಪಷ್ಟತೆ ಬರಬೇಕಿದೆ.

Category
ಕರಾವಳಿ ತರಂಗಿಣಿ