image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ ಬಿಜೆಪಿ ಮಂಡಲ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಘೋಷಣೆ

ಬೆಳ್ತಂಗಡಿ ಬಿಜೆಪಿ ಮಂಡಲ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಘೋಷಣೆ

ಬೆಳ್ತಂಗಡಿ: ದಿನಾಂಕ 29/07/2026 ರಂದು ಬೆಳ್ತಂಗಡಿ ಬಿಜೆಪಿ ಕಚೇರಿಯಲ್ಲಿ ಬೆಳ್ತಂಗಡಿ ಮಂಡಲದ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಘೋಷಣಾ ಕಾರ್ಯಕ್ರಮವು ವಿಧ್ಯುಕ್ತವಾಗಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಡಲದ ಅಧ್ಯಕ್ಷರಾದ ಶ್ರೀನಿವಾಸ ರಾವ್, ಮುಂಬರುವ ದಿನಗಳಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸುವಲ್ಲಿ ಹಾಗೂ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಕಾನೂನು ಪ್ರಕೋಷ್ಠದ ವಿಶೇಷ ಸಹಕಾರ ಮತ್ತು ಮಾರ್ಗದರ್ಶನವನ್ನು ಕೋರಿದರು.

ಜಿಲ್ಲಾ ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಶ್ರೀಧರ ಶೆಟ್ಟಿ ಪುಳಿಂಚ ಅವರು ಕಾರ್ಯಕ್ರಮದ ಪ್ರಸ್ತಾವನೆಗೈದರು. ಹಾಗೆಯೇ, ಸಹ ಸಂಚಾಲಕರಾದ ಪ್ರಮೋದ್ ಪೂಜಾರಿ ಕೆರ್ವಾಶೆ ಅವರು ಕಾನೂನು ಪ್ರಕೋಷ್ಠದ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಸಭೆಗೆ ವಿವರಣೆ ನೀಡಿದರು. ಜಿಲ್ಲಾ ಸದಸ್ಯರಾದ ಶ್ರೀಧರ ಸುವರ್ಣ ಅವರು ಸಾಂದರ್ಭಿಕವಾಗಿ ಮಾತನಾಡಿದರು.

ಮಂಡಲದ ಸಂಚಾಲಕರಾದ ಸೌಮ್ಯ ಅವರು ಮಂಡಲದ ಲೀಗಲ್ ಸೆಲ್‌ನ ನೂತನ ಸದಸ್ಯರ ಹೆಸರುಗಳನ್ನು ಅಧಿಕೃತವಾಗಿ ಘೋಷಿಸಿದರು. ವೇದಿಕೆಯಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಂಡಲದ ಸದಸ್ಯರಾಗಿ ಚಿರಾಗ್ ಶೆಟ್ಟಿ, ನಿಶಾಂಕ್ ಬಿ.ಎಚ್., ಸಂದೇಶ್ ಕುಮಾರ, ಅಶೋಕ ಕರಿಯನೆಲ ಮತ್ತು ಜಿತಿನ್ ಜಿಜೋ ಅವರ ಹೆಸರುಗಳನ್ನು ಘೋಷಿಸಲಾಯಿತು. ಮಂಡಲದ ಸಹ ಸಂಚಾಲಕರಾದ ಯತೀಶ ಪಣೆಕ್ಕರ್ ಎಲ್ಲರನ್ನು ಸ್ವಾಗತಿಸಿ, ಕೊನೆಯಲ್ಲಿ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

Category
ಕರಾವಳಿ ತರಂಗಿಣಿ