image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನೆಹರು-ಮೋದಿ ಆಡಳಿತ ಹೋಲಿಕೆ ಸಾಧ್ಯವಿಲ್ಲ: ಸಿದ್ದರಾಮಯ್ಯ

ನೆಹರು-ಮೋದಿ ಆಡಳಿತ ಹೋಲಿಕೆ ಸಾಧ್ಯವಿಲ್ಲ: ಸಿದ್ದರಾಮಯ್ಯ

ಬೆಂಗಳೂರು : ಏನೂ ಇಲ್ಲದ ಅಂದಿನ ಭಾರತವನ್ನು ಕಟ್ಟಿದ ನೆಹರು ಎಲ್ಲಿ? ಎಲ್ಲವೂ ಇರುವ ಈಗಿನ ಭಾರತದ ಅಧಿಕಾರ ನಡೆಸುವ ಮೋದಿ ಎಲ್ಲಿ? ಆದರೂ ಅವರಿಬ್ಬರ ಆಡಳಿತವನ್ನು ಹೋಲಿಕೆ ಮಾಡುವ ಕೆಲಸ ನಡೆಯುತ್ತಿರುವುದು ವಿಪರ್ಯಾಸ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರು ಬರೆದಿರುವ 'ಮೆಮೋರೆಬಲ್ ಟ್ರಯಲ್ಸ್ - ಅವಿಸ್ಮರಣೀಯ ಪ್ರಕರಣಗಳು' ಕೃತಿಯ ಕನ್ನಡ ಹಾಗೂ ಇಂಗ್ಲಿಷ್ ಆವೃತ್ತಿಯನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಆಡಳಿತಕ್ಕೂ ಈಗಿನ ಪ್ರಧಾನಿ ಮೋದಿ ಅವರ ಆಡಳಿತಕ್ಕೂ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದ ಅವರು, ನೆಹರು ಪ್ರಧಾನಿ ಆಗಿದ್ದಾಗ ಭಾರತದಲ್ಲಿ ಒಂದು ಹೊತ್ತಿನ ಊಟಕ್ಕೂ ಪರಿತಪಿಸುವ ಕಡುಬಡತನವಿತ್ತು. ಉದ್ಯೋಗ, ಕೈಗಾರಿಕೆಗಳು, ನೀರಾವರಿ ಯಾವುದೂ ಇಲ್ಲದೆ ಭಾರತದ ಸಂಪತ್ತನ್ನೆಲ್ಲಾ ಬ್ರಿಟಿಷರು ದೋಚಿಹೋಗಿದ್ದರು. ಅಂತಹ ಶೂನ್ಯದಿಂದ ಭಾರತವನ್ನು ಕಟ್ಟಿ ಬೆಳೆಸಲು ನೆಹರು ಅವರು 17 ವರ್ಷಗಳ ಕಾಲ ಶ್ರಮಿಸಿ ಜನಪರ ಆಡಳಿತ ನೀಡಿದರು. ಅದನ್ನು ಈಗ ವಿಶ್ವದ ಪ್ರಮುಖ ಆರ್ಥಿಕತೆಯ ದೇಶಗಳಲ್ಲಿ ಒಂದಾಗಿರುವ ಭಾರತದ ಪ್ರಧಾನಿ ಆಗಿರುವ ಮೋದಿ ಅವರ 12 ವರ್ಷಗಳ ಆಡಳಿತದೊಂದಿಗೆ ಹೋಲಿಕೆ ಮಾಡಲಾದರೂ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಆದರೂ ಅಂತಹ ಹೋಲಿಕೆಯ ಪ್ರಯತ್ನಗಳು ಮತ್ತು ಸುಳ್ಳುಗಳ ಪ್ರಚಾರ ನಡೆಯುತ್ತಿದ್ದು, ಈ ಬಗ್ಗೆ ಹೆಚ್ಚಿನ ಚರ್ಚೆ ನಡೆದು ಜನರಿಗೆ ಸತ್ಯ ತಿಳಿಸಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್, ಲೇಖಕಿ ತಸ್ರಿಮ್ ಮುಲ್ಲಾ, ಲೇಖಕ ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ