image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜೆಡಿಎಸ್ ಮಹಿಳಾ ಘಟಕ ಬಲವರ್ಧನೆಗೆ ಮಂಗಳೂರಿನಲ್ಲಿ ಕರೆ

ಜೆಡಿಎಸ್ ಮಹಿಳಾ ಘಟಕ ಬಲವರ್ಧನೆಗೆ ಮಂಗಳೂರಿನಲ್ಲಿ ಕರೆ

ಮಂಗಳೂರು : ಜನತಾದಳ (ಜಾತ್ಯತೀತ) ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಘಟಕದ ವತಿಯಿಂದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಸಂಘಟನಾ ಸಭೆಯು ಮಂಗಳೂರಿನ ಹೋಟೆಲ್ ವುಡ್‌ಲ್ಯಾಂಡ್ಸ್‌ನಲ್ಲಿ ಯಶಸ್ವಿಯಾಗಿ ನಡೆಯಿತು. ಶಾರದಾ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಜ್ಯೋತಿ ಜೈನ್ ಎಲ್ಲರನ್ನು ಸ್ವಾಗತಿಸಿದರು. ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳಾ ಸಂಘಟನೆಯನ್ನು ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಬಲಿಷ್ಠಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದರು. ಮಹಿಳೆಯರು ರಾಜಕೀಯ, ಸಾಮಾಜಿಕ ಮತ್ತು ಸಾರ್ವಜನಿಕ ಸೇವಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷದ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕು ಎಂದು ಕರೆ ನೀಡಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಮೀಝಾ ಬಾನು ಅವರು, ನೂತನ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಬದ್ಧತೆಯಿಂದ ನಿರ್ವಹಿಸಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಬೇಕು ಎಂದರು. ವೇದಿಕೆಯಲ್ಲಿ ರಾಜ್ಯ ಕಾರ್ಯದರ್ಶಿ ಶ್ರೀಮಣಿ ಆರ್. ಶೆಟ್ಟಿ ಮತ್ತು ಕಾನೂನು ಸಲಹೆಗಾರರಾದ ಭಾರತಿ ಪುಷ್ಪರಾಜನ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿ ಗೌರವಿಸಲಾಯಿತು. ಜಿಲ್ಲಾ ಮಹಿಳಾ ಘಟಕದ ನೂತನ ಪದಾಧಿಕಾರಿಗಳಾಗಿ ಪ್ರಿಯ ಸಾಲಿಯಾನ್ (ಕಾರ್ಯಾಧ್ಯಕ್ಷೆ), ಜ್ಯೋತಿ ಜೈನ್ (ಪ್ರಧಾನ ಕಾರ್ಯದರ್ಶಿ), ಚೂಡಾಮಣಿ ಎಲ್. ಬಂಗೇರ (ಹಿರಿಯ ಉಪಾಧ್ಯಕ್ಷೆ), ಶಾರದಾ ಶೆಟ್ಟಿ (ಉಪಾಧ್ಯಕ್ಷೆ), ಸಲೀಮಾ ಖಾದರ್, ರಾಜೇಶ್ವರಿ ಉಳ್ಳಾಲ್ (ಕಾರ್ಯದರ್ಶಿಯರು), ಪ್ಲೇವಿಯನ್ ಮತ್ತು ತಾರಾ ಯು.ಆರ್. ಶೆಟ್ಟಿ (ಸಂಘಟನಾ ಕಾರ್ಯದರ್ಶಿಯರು) ಅಧಿಕಾರ ಸ್ವೀಕರಿಸಿದರು. ತಾಲೂಕು ಅಧ್ಯಕ್ಷೆಯರಾಗಿ ಮೀನಾಕ್ಷಿ ಎಂ. (ಪುತ್ತೂರು), ಮೋಹಿನಿ ಶೆಟ್ಟಿ (ಮಂಗಳೂರು ಉತ್ತರ), ವೀಣಾ ಶೆಟ್ಟಿ (ಮಂಗಳೂರು ದಕ್ಷಿಣ) ಹಾಗೂ ಜೋಹರ (ಉಳ್ಳಾಲ) ನೇಮಕಗೊಂಡರು. ಸಭೆಯಲ್ಲಿ ಮಹಿಳಾ ಸದಸ್ಯತ್ವ ಅಭಿಯಾನ ಹಾಗೂ ಮುಂಬರುವ ಸಂಘಟನಾ ಕಾರ್ಯಕ್ರಮಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು.

Category
ಕರಾವಳಿ ತರಂಗಿಣಿ