image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜೆರ್ಮನಿ ಪಾರ್ಲಿಮೆಂಟ್ ಪುಸ್ತಕದಲ್ಲಿ ಸ್ಪೀಕರ್ ಯು.ಟಿ.ಖಾದರ್ ಸಹಿ: ಇದೊಂದು ಐತಿಹಾಸಿಕ ಮೈಲಿಗಲ್ಲು ಎಂದ ಜೆರ್ಮನ್ ಅಸೆಂಬ್ಲಿ ಅಧ್ಯಕ್ಷ ಐಲ್ಸ್ ಏಗ್ನರ್

ಜೆರ್ಮನಿ ಪಾರ್ಲಿಮೆಂಟ್ ಪುಸ್ತಕದಲ್ಲಿ ಸ್ಪೀಕರ್ ಯು.ಟಿ.ಖಾದರ್ ಸಹಿ: ಇದೊಂದು ಐತಿಹಾಸಿಕ ಮೈಲಿಗಲ್ಲು ಎಂದ ಜೆರ್ಮನ್ ಅಸೆಂಬ್ಲಿ ಅಧ್ಯಕ್ಷ ಐಲ್ಸ್ ಏಗ್ನರ್

ಜೆರ್ಮನ್ ಪ್ರವಾಸದಲ್ಲಿರುವ ಕರ್ನಾಟಕ ಸ್ಪೀಕರ್ ಯು.ಟಿ.ಖಾದರ್ ಮತ್ತು ಅವರ ನಿಯೋಗ ಬುಧವಾರ ಜರ್ಮನಿಯ ಮ್ಯೂನಿಚ್ ನಲ್ಲಿರುವ ಬವೇರಿಯನ್ ಸ್ಟೇಟ್ ಪಾರ್ಲಿಮೆಂಟ್ ಗೆ ಭೇಟಿ ನೀಡಿ ಅಲ್ಲಿನ ಪಾರ್ಲಿಮೆಂಟ್ ವಿಚಾರಗಳನ್ನು ತಿಳಿದುಕೊಂಡಿತು.

ಈ ಸಂದರ್ಭ ಪಾರ್ಲಿಮೆಂಟ್ ವಿಐಪಿ ಭೇಟಿದಾರರ ಪುಸ್ತಕದಲ್ಲಿ ಯು.ಟಿ.ಖಾದರ್ ಸಹಿ ಮಾಡುವ ಮೂಲಕ ಇತಿಹಾಸ ಬರೆದರು.

ಬವೇರಿಯನ್ ಸ್ಟೇಟ್ ಪಾರ್ಲಿಮೆಂಟ್ ಅಧ್ಯಕ್ಷ ಐಲ್ಸ್ ಏಗ್ನರ್ ಇದೊಂದು ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಿದರು.

ಯು.ಟಿ.ಖಾದರ್ ಅವರ ಜೊತೆಗೆ ವಿಧಾನಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಉಮಾನಾಥ ಕೋಟ್ಯಾನ್,

ಅಶೋಕ್ ಕುಮಾರ್ ರೈ, ಮಹಾಂತೇಶ ಕೌಜಲಗಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ