image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು: ಮಂಜುನಾಥ ಭಂಡಾರಿ ಆಕ್ರೋಶ

ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು: ಮಂಜುನಾಥ ಭಂಡಾರಿ ಆಕ್ರೋಶ

ಮಂಗಳೂರು: ದೇಶದ ಪ್ರಧಾನಿಯ ಜವಾಬ್ದಾರಿಯುತ ಸ್ಥಾನದಲ್ಲಿರುವ ನರೇಂದ್ರ ಮೋದಿಯವರು ವಿದೇಶ ಪ್ರವಾಸ ಮಾಡಬೇಡಿ, ಚಿನ್ನ ಖರೀದಿಸಬೇಡಿ ಹಾಗೂ ವಾಹನ ಸಂಚಾರ ತಗ್ಗಿಸಿ ಎಂದು ನೀಡಿರುವ ಹೇಳಿಕೆ ಅತ್ಯಂತ ಬಾಲಿಶತನದ್ದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಟೀಕಿಸಿದ್ದಾರೆ.

ಈ ಬಗ್ಗೆ ಮಾದ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದೇಶದಲ್ಲಿ ವಾಣಿಜ್ಯ ಗ್ಯಾಸ್ ಬೆಲೆ ಏರಿಕೆಯಿಂದ ಉದ್ಯಮ ವಲಯ ಕಂಗಾಲಾಗಿದೆ ಮತ್ತು ರಸಗೊಬ್ಬರ ಕೊರತೆಯ ಭೀತಿ ಎದುರಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಜನರಿಗೆ ಧೈರ್ಯ ತುಂಬಬೇಕಾದ ಪ್ರಧಾನಿಯವರು, ಜನರನ್ನು ಹಾಗೂ ಉದ್ಯಮ ರಂಗವನ್ನು ಮತ್ತಷ್ಟು ಆತಂಕಕ್ಕೆ ದೂಡುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ದೇಶದ ಜನತೆ ಎಂದಿಗೂ ನಿರೀಕ್ಷಿಸದ ನಡೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಚಿನ್ನದ ಬೆಲೆ ಏರಿಕೆಯಿಂದ ಸ್ವರ್ಣೋದ್ಯಮ ಈಗಾಗಲೇ ಸಂಕಷ್ಟದಲ್ಲಿದೆ. ಖಾದ್ಯ ತೈಲಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರಿ ವೆಚ್ಚದಲ್ಲಿ ಪದೇ ಪದೇ ವಿದೇಶ ಪ್ರವಾಸ ಮಾಡುವ ಮೋದಿ ಅವರು, ಜನರಿಗೆ ಮಾತ್ರ ವಿದೇಶಕ್ಕೆ ಹೋಗಬೇಡಿ ಎಂದು ಹೇಳುತ್ತಿರುವುದು ಅವರ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಜಾಗತಿಕ ಆರ್ಥಿಕ ತಲ್ಲಣಗಳ ಸಂದರ್ಭದಲ್ಲಿ ಜನರಲ್ಲಿ ಭರವಸೆ ಮೂಡಿಸುವ ಬದಲು ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಭಂಡಾರಿ ಕಿಡಿಕಾರಿದ್ದಾರೆ.

Category
ಕರಾವಳಿ ತರಂಗಿಣಿ