image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಡಿಎಂಕೆ-ಕಾಂಗ್ರೆಸ್ ಮೈತ್ರಿ ಮುರಿದುಬಿದ್ದ ಬೆನ್ನಲ್ಲೇ ಸಂಸತ್ತಿನಲ್ಲಿ ಆಸನ ಬದಲಾವಣೆಗೆ ಕನ್ನಿಮೋಳಿ ಪತ್ರ

ಡಿಎಂಕೆ-ಕಾಂಗ್ರೆಸ್ ಮೈತ್ರಿ ಮುರಿದುಬಿದ್ದ ಬೆನ್ನಲ್ಲೇ ಸಂಸತ್ತಿನಲ್ಲಿ ಆಸನ ಬದಲಾವಣೆಗೆ ಕನ್ನಿಮೋಳಿ ಪತ್ರ

ನವದೆಹಲಿ : ​ಸತತ ಸೋಲುಗಳಿಂದ ಕಂಗೆಟ್ಟು ಕೇರಳದ ಗೆಲುವಿನಿಂದ ಹೊಸ ಆಶಾವಾದ ಹೊಂದಿದ್ದ ಕಾಂಗ್ರೆಸ್ ಪಕ್ಷಕ್ಕೆ ದಕ್ಷಿಣ ಭಾರತದ ರಾಜಕಾರಣದಲ್ಲಿ ಈಗ ಚೇತರಿಸಿಕೊಳ್ಳಲಾಗದಷ್ಟು ಭಾರಿ ಪೆಟ್ಟು ಬಿದ್ದಿದೆ. ತಮಿಳುನಾಡಿನಲ್ಲಿ ಪಾರುಪತ್ಯ ಸಾಧಿಸಲು ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷದ ಜೊತೆಗೂಡಿ ಸರ್ಕಾರದ ಭಾಗವಾಗಲು ಕಾಂಗ್ರೆಸ್ ನಡೆಸಿದ ರಣತಂತ್ರ ಈಗ ಉಲ್ಟಾ ಹೊಡೆದಿದ್ದು, ದಶಕಗಳ ಕಾಲದ ಮಿತ್ರಪಕ್ಷ ಡಿಎಂಕೆ ಅಧಿಕೃತವಾಗಿ ಮೈತ್ರಿ ಕಡಿದುಕೊಂಡಿದೆ. ಈ ಬೆಳವಣಿಗೆಯಿಂದಾಗಿ ರಾಷ್ಟ್ರಮಟ್ಟದಲ್ಲಿ 'ಇಂಡಿಯಾ' ಒಕ್ಕೂಟಕ್ಕೆ ದೊಡ್ಡ ಹಿನ್ನಡೆಯಾಗಿದ್ದು, ಡಿಎಂಕೆ ಸಂಸದೆ ಕನ್ನಿಮೋಳಿ ಕರುಣಾನಿಧಿ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮಹತ್ವದ ಪತ್ರ ಬರೆದಿದ್ದಾರೆ.

​ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಇಂಡಿಯಾ ಒಕ್ಕೂಟದ ಆಶಯಗಳನ್ನು ಬದಿಗೊತ್ತಿ, ಕಾಂಗ್ರೆಸ್ ಪಕ್ಷವು ನೇರವಾಗಿ ಟಿವಿಕೆ ಪಕ್ಷಕ್ಕೆ ಬೆಂಬಲ ಸೂಚಿಸಿರುವುದು ಡಿಎಂಕೆ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. "ಕಾಂಗ್ರೆಸ್ ಡಿಎಂಕೆ ಜೊತೆ ನಿಶ್ಚಿತಾರ್ಥ ಮಾಡಿಕೊಂಡು, ಟಿವಿಕೆ ಜೊತೆ ಮದುವೆಯಾಗಲು ಹವಣಿಸುತ್ತಿದೆ" ಎಂದು ಡಿಎಂಕೆ ನಾಯಕರು ವ್ಯಂಗ್ಯವಾಡುತ್ತಿದ್ದರು. ಇದರ ಬೆನ್ನಲ್ಲೇ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿರುವ ಕನ್ನಿಮೋಳಿ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿ ಅಂತ್ಯಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದರ ಪಕ್ಕದಲ್ಲಿ ಡಿಎಂಕೆ ಸದಸ್ಯರಿಗೆ ಆಸನ ವ್ಯವಸ್ಥೆ ಬೇಡವೆಂದು, ತಮಗಾಗಿ ಪ್ರತ್ಯೇಕ ಆಸನಗಳನ್ನು ಮೀಸಲಿಡಬೇಕು ಎಂದು ಮನವಿ ಮಾಡಿದ್ದಾರೆ. ಕೇರಳದಲ್ಲಿ ಅಧಿಕಾರ ಹಿಡಿದ ಸಂಭ್ರಮದಲ್ಲಿದ್ದ ಕಾಂಗ್ರೆಸ್‌ಗೆ, ತಮಿಳುನಾಡಿನಲ್ಲಿ ಸರ್ಕಾರದ ಭಾಗವಾಗಲು ಹೂಡಿದ ರಣತಂತ್ರ ಈಗ ಸ್ವತಃ ಪಕ್ಷವನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ.

Category
ಕರಾವಳಿ ತರಂಗಿಣಿ