image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಮತಾ, ಸ್ಟಾಲಿನ್ ಭದ್ರಕೋಟೆ ಧೂಳೀಪಟ: ‘ಬ್ಲಡಿ ಹೆಲ್’ ಎಂದ ಒಮರ್ ಅಬ್ದುಲ್ಲಾ!

ಮಮತಾ, ಸ್ಟಾಲಿನ್ ಭದ್ರಕೋಟೆ ಧೂಳೀಪಟ: ‘ಬ್ಲಡಿ ಹೆಲ್’ ಎಂದ ಒಮರ್ ಅಬ್ದುಲ್ಲಾ!

ನವದೆಹಲಿ: ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದ ಟ್ರೆಂಡ್ ಇಡೀ ದೇಶದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ಬೆಳವಣಿಗೆಯನ್ನು ಕಂಡು ಅಕ್ಷರಶಃ ಆಘಾತಕ್ಕೊಳಗಾಗಿದ್ದಾರೆ. ಈ ಭಾರಿ ರಾಜಕೀಯ ಸ್ಥಿತ್ಯಂತರಕ್ಕೆ ಕೇವಲ ಎರಡು ಪದಗಳಲ್ಲಿ ಪ್ರತಿಕ್ರಿಯಿಸಿರುವ ಅವರು, ತಮ್ಮ ‘ಎಕ್ಸ್’ ಖಾತೆಯಲ್ಲಿ "Bloody hell" (ಅಯ್ಯೋ ದೇವರೇ!) ಎಂದು ಬರೆದುಕೊಳ್ಳುವ ಮೂಲಕ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಅಜೇಯ ಶಕ್ತಿಯಾಗಿ ಮೆರೆಯುತ್ತಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯನ್ನು ಬಿಜೆಪಿ ಈ ಬಾರಿ ಅಕ್ಷರಶಃ ಪುಡಿಪುಡಿ ಮಾಡಿದೆ.

ಆರಂಭಿಕ ಮತ ಎಣಿಕೆಯಿಂದಲೇ ಭರ್ಜರಿ ಮುನ್ನಡೆ ಸಾಧಿಸಿರುವ ಬಿಜೆಪಿ, ರಾಜ್ಯದಲ್ಲಿ ಸ್ಪಷ್ಟ ಬಹುಮತದತ್ತ ದಾಪುಗಾಲು ಹಾಕುತ್ತಿರುವುದು ತೃಣಮೂಲ ಕಾಂಗ್ರೆಸ್ ಪಾಳಯದಲ್ಲಿ ಮೌನ ಆವರಿಸುವಂತೆ ಮಾಡಿದೆ. ಇತ್ತ ತಮಿಳುನಾಡಿನಲ್ಲೂ ಅಚ್ಚರಿಯ ಫಲಿತಾಂಶ ಹೊರಬಿದ್ದಿದ್ದು, ಚೊಚ್ಚಲ ಚುನಾವಣೆಯಲ್ಲೇ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಆಡಳಿತಾರೂಢ ಡಿಎಂಕೆ ಮೈತ್ರಿಕೂಟಕ್ಕೆ ಬಿಗ್ ಶಾಕ್ ನೀಡಿದೆ. ಡಿಎಂಕೆಯನ್ನು ಹಿಂದಿಕ್ಕಿರುವ ವಿಜಯ್ ಅವರ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸೂಚನೆ ನೀಡಿದೆ. ದೇಶದ ಇಬ್ಬರು ಪ್ರಭಾವಿ ನಾಯಕರಾದ ಮಮತಾ ಬ್ಯಾನರ್ಜಿ ಮತ್ತು ಎಂ.ಕೆ. ಸ್ಟಾಲಿನ್ ಅವರಿಗೆ ಎದುರಾಗಿರುವ ಈ ಹಿನ್ನಡೆಯು ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಒಮರ್ ಅಬ್ದುಲ್ಲಾ ಅವರು ಅತ್ಯಂತ ಹತಾಶೆಯಿಂದ ಇಂತಹದೊಂದು ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗುತ್ತಿದೆ.

Category
ಕರಾವಳಿ ತರಂಗಿಣಿ