ಮಂಗಳೂರು: ಪಕ್ಷಾಂತರ ನಿಷೇಧ ತಿದ್ದುಪಡಿ ಕಾಯ್ದೆಯ ಮೌಲ್ಯಮಾಪನ, ಬಲವರ್ಧನೆಗೆ ಸಂಬಂಧಿಸಿದಂತೆ ಲೋಕಸಭಾ ಸ್ಪೀಕರ್ ಮೂಲಕ ನೇಮಕಗೊಂಡ 5ರಾಜ್ಯಗಳ ವಿಧಾನ ಸಭಾ ಅಧ್ಯಕ್ಷರುಗಳ ಸಮಿತಿ ಸಭೆ ಒಡಿಶಾದ ಭುವನೇಶ್ವರದಲ್ಲಿ ಎ.22,23ರಂದು ನಡೆಯಲಿದೆಎಂದು ಕರ್ನಾಟಕ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಹಿಂದೆ ಮುಂಬಯಿಯಲ್ಲಿ ಒಂದು ಸಭೆ ನಡೆದಿದೆ.ಇದೀಗ ಎರಡನೇ ಸಭೆ ಒಡಿಶಾದಲ್ಲಿ ನಡೆಯಲಿದೆ.ಈ ಸಭೆಯಲ್ಲಿ ಒಡಿಶಾ, ಸಿಕ್ಕಿಂ,ಮಹಾರಾಷ್ಟ್ರ,ನಾಗಾಲ್ಯಾಂಡ್ ,ಕರ್ನಾಟಕ ಸೇರಿದಂತೆ 5ರಾಜ್ಯಗಳ ಸ್ಪೀಕರ್ ಗಳು ಭಾಗವಹಿಸಲಿದ್ದಾರೆ.ಒಂದು ವರ್ಷದ ಒಳಗೆ ಈ ಸಮಿತಿ ಲೋಕಸಭಾ ಅಧ್ಯಕ್ಷರಿಗೆ ವರದಿ ನೀಡಬೇಕಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ಶಾಸಕ ವಿನಯ ಕುಲಕರ್ಣಿ ಗೆ ನ್ಯಾಯಾಲಯ ಶಿಕ್ಷೆ ವಿಧಿಸಿದ್ದರೂ ಅಧಿಕೃತ ಸೂಚನೆ ಬಂದ ಬಳಿಕ ಅವರ ಶಾಸನ ಸಭೆಯ ಅಧಿಕಾರದ ಬಗ್ಗೆ ತೀರ್ಮಾನಿ ಸಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ ಬಹುಮತವಿಲ್ಲದೆ ಬಿದ್ದು ಹೋದ ಬಗ್ಗೆ ಸುದ್ದಿ ಗಾರರ ಪ್ರಶ್ನೆಗೆ ಉತ್ತರಿಸಿದ ಯು.ಟಿ.ಖಾದರ್ ಮಾತನಾಡುತ್ತಾ ಸಂವಿಧಾನ ಬದ್ಧವಾದ ತೀರ್ಮಾ ನಗಳು, ಚರ್ಚೆಗಳಿಂದ ಯಾವುದೇ ಪ್ರದೇಶದ ಜನರು, ಸಮುದಾಯಗಳಿಗೆ ಅನ್ಯಾಯ ವಾಗಬಾರದು ಎನ್ನುವುದು ಮುಖ್ಯ ಎಂದರು