image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಿಳಾ ಮೀಸಲಾತಿಗೂ ಡಿಲಿಮಿಟೇಶನ್‌ಗೂ ಸಂಬಂಧವೇ ಇಲ್ಲ: ದಿನೇಶ್ ಗುಂಡೂರಾವ್

ಮಹಿಳಾ ಮೀಸಲಾತಿಗೂ ಡಿಲಿಮಿಟೇಶನ್‌ಗೂ ಸಂಬಂಧವೇ ಇಲ್ಲ: ದಿನೇಶ್ ಗುಂಡೂರಾವ್

ಮಂಗಳೂರು: ಕೇಂದ್ರ ಸರ್ಕಾರವು ಮಹಿಳೆಯರ ಹೆಸರಿನಲ್ಲಿ ವಂಚನೆ ಮಾಡಲು ಹೊರಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ವಿಷಯದಲ್ಲಿ ಬಿಜೆಪಿ ರಾಜಕೀಯ ಸಂಚು ರೂಪಿಸುತ್ತಿದೆ ಎಂದು ಟೀಕಿಸಿದರು.

​ಮಹಿಳಾ ಮೀಸಲಾತಿ ಜಾರಿಗೆ ಯಾವುದೇ ವಿರೋಧವಿಲ್ಲ. 2023ರಲ್ಲಿ ಕೇಂದ್ರ ಸರ್ಕಾರ ಈ ಕಾನೂನು ತರುವ ಪ್ರಸ್ತಾಪ ಮಾಡಿದಾಗಲೇ, ಇದನ್ನು ತಕ್ಷಣದಿಂದಲೇ ಜಾರಿಗೆ ತನ್ನಿ ಎಂದು ಕಾಂಗ್ರೆಸ್ ಪಕ್ಷ ಸರ್ವಾನುಮತದಿಂದ ಬೆಂಬಲ ನೀಡಿತ್ತು. ಆದರೆ, ಮಹಿಳಾ ಮೀಸಲಾತಿ ನೀಡಲು ಕ್ಷೇತ್ರ ಪುನರ್ ವಿಂಗಡಣೆ (ಡಿಲಿಮಿಟೇಶನ್) ಆಗಬೇಕೆಂಬ ಷರತ್ತು ವಿಧಿಸಿರುವುದು ಸರಿಯಲ್ಲ. ಮಹಿಳೆಯರಿಗೆ ನೇರವಾಗಿ 33% ಮೀಸಲಾತಿ ನೀಡುವ ತೀರ್ಮಾನ ಮಾಡಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
​ಹಿಂದೆಯೇ ಈ ಕಾನೂನು ತಂದಿದ್ದರೆ ಈಗ ಚುನಾವಣೆ ನಡೆಯುತ್ತಿರುವ 5 ರಾಜ್ಯಗಳಿಗೂ ಇದರ ಪ್ರಯೋಜನ ಸಿಗುತ್ತಿತ್ತು. ಕ್ಷೇತ್ರ ಪುನರ್ ವಿಂಗಡಣೆಯ ಹೆಸರಿನಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹೂಡಿರುವ ಈ ಹನ್ನಾರದಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ದೊಡ್ಡ ಮಟ್ಟದ ಅನ್ಯಾಯವಾಗುವ ಸಾಧ್ಯತೆಯಿದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.

ಮಹಿಳೆಯರ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುವ ಬಿಜೆಪಿಯ ಪ್ರಯತ್ನ ವಿಫಲವಾಗಿದೆ. ಪಾರ್ಲಿಮೆಂಟ್‌ನಲ್ಲಿ ಸರಿಯಾದ ಉತ್ತರ ನೀಡಲಾಗದೆ ತೀವ್ರ ಮುಖಭಂಗ ಅನುಭವಿಸಿರುವ ಬಿಜೆಪಿ, ಇದೀಗ ಹೊಸ ಸಂಚು ರೂಪಿಸುತ್ತಿದೆ. ಆದ್ದರಿಂದ ಮಾಧ್ಯಮಗಳು ಮಹಿಳಾ ಮೀಸಲಾತಿ ಮಸೂದೆ ಸೋಲು ಕಂಡಿತು ಎಂದು ಬರೆಯುವ ಬದಲು, ಬಿಜೆಪಿಯ ಸಂಚು ಮತ್ತು ಹೂನ್ನಾರ ಸೋಲು ಕಂಡಿತು ಎಂದು ವರದಿ ಮಾಡಬೇಕು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

Category
ಕರಾವಳಿ ತರಂಗಿಣಿ