image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಜೇಶ್ವರದಲ್ಲಿ ಬಿಜೆಪಿ ಪರ ಶಾಸಕ ವೇದವ್ಯಾಸ ಕಾಮತ್ ಅಬ್ಬರದ ಪ್ರಚಾರ: ಕೆ. ಸುರೇಂದ್ರನ್ ಗೆಲುವಿಗಾಗಿ ಮತಯಾಚನೆ

ಮಂಜೇಶ್ವರದಲ್ಲಿ ಬಿಜೆಪಿ ಪರ ಶಾಸಕ ವೇದವ್ಯಾಸ ಕಾಮತ್ ಅಬ್ಬರದ ಪ್ರಚಾರ: ಕೆ. ಸುರೇಂದ್ರನ್ ಗೆಲುವಿಗಾಗಿ ಮತಯಾಚನೆ

ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಕಣ ರಂಗೇರಿದ್ದು, ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ಪರವಾಗಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಬಿರುಸಿನ ಪ್ರಚಾರ ನಡೆಸಿದರು. ಗಡಿಭಾಗದ ಈ ಪ್ರತಿಷ್ಠಿತ ಕ್ಷೇತ್ರದಲ್ಲಿ ಬಿಜೆಪಿ ವಿಜಯಪತಾಕೆ ಹಾರಿಸಲು ಶಾಸಕರು ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

​ಪ್ರಚಾರದ ಅಂಗವಾಗಿ ಮಂಜೇಶ್ವರದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಮದನಂತೇಶ್ವರ ದೇವಸ್ಥಾನ ಹಾಗೂ ಕೀರ್ತೇಶ್ವರ ಪರಿಸರದಲ್ಲಿ ಭೇಟಿ ನೀಡಿದ ಶಾಸಕರು, ನಂತರ ಕುಂಬ್ಳೆ ಪಂಚಾಯತ್ ವ್ಯಾಪ್ತಿಯ ಕುಂಟಗೇರಡ್ಕದ ಪರಿಶಿಷ್ಟ ಪಂಗಡ ಕಾಲೋನಿ, ಗುಡ್ಡೆಕೇರಿ ಮತ್ತು ಬಡಾಜೆ ಪ್ರದೇಶಗಳಲ್ಲಿ ಸಂಚರಿಸಿದರು. ಈ ವೇಳೆ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಮತ್ತು ದೇಶದ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ನೀಡಿದರು.
​"ಮಂಜೇಶ್ವರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವುದು ಅತ್ಯಗತ್ಯ. ಕ್ಷೇತ್ರದಲ್ಲಿ ಈಗಾಗಲೇ ಬದಲಾವಣೆಯ ಗಾಳಿ ಬೀಸುತ್ತಿದ್ದು, ಈ ಬಾರಿ ತಾವರೆ ಅರಳುವುದು ಶತಸಿದ್ಧ," ಎಂದು ಕಾಮತ್ ವಿಶ್ವಾಸ ವ್ಯಕ್ತಪಡಿಸಿದರು.
​ಈ ಸಂದರ್ಭದಲ್ಲಉಪಸ್ಥಿತರಿದ್ದರುರಮೇಶ್ ಹೆಗ್ಡೆ, ಪ್ರಶಾಂತ್ ಪೈ, ಪೂಜಾ ಪೈ, ವರುಣ್ ಅಂಬಟ್, ಯಾದವ ಬಡಾಜೆ, ಆದರ್ಶ್, ಹರೀಶ್ಚಂದ್ರ ಮಂಜೇಶ್ವರ ಸೇರಿದಂತೆ ನೂರಾರು ಸಂಖ್ಯೆಯ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ