image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಿಜೆಪಿಯಿಂದ ಕಲಿಯುವುದು ಬಹಳಷ್ಟಿದೆ ಎಂಬ ಅಚ್ಚರಿ ಹೇಳಿಕೆ ನೀಡಿದ ಅಖಿಲೇಶ್ ಯಾದವ್

ಬಿಜೆಪಿಯಿಂದ ಕಲಿಯುವುದು ಬಹಳಷ್ಟಿದೆ ಎಂಬ ಅಚ್ಚರಿ ಹೇಳಿಕೆ ನೀಡಿದ ಅಖಿಲೇಶ್ ಯಾದವ್

ಭುವನೇಶ್ವರ್: ಲಾತೂರ್ ಪುರಸಭೆ ಹೊರತುಪಡಿಸಿ ಮುಂಬೈ ಮಹಾನಗರ ಪಾಲಿಕೆ ಸೇರಿ ಮಹಾರಾಷ್ಟ್ರದ 27 ಪುರಸಭೆಗಳಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಬಿಜೆಪಿ ಗೆಲುವಿನ ತಂತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಮಾಜಿ ಸಿಎಂ & ಎಸ್​ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಜೆಪಿಯಿಂದ ಕಲಿಯುವುದು ಬಹಳಷ್ಟಿದೆ ಎಂದು ಹೇಳಿದ್ದಾರೆ. ಒಡಿಶಾದ ಭುವನೇಶ್ವರದಲ್ಲಿ ಮಾತನಾಡಿರುವ ಅವರು, ಬಿಜೆಪಿ ಪಕ್ಷವು ಅತ್ಯಂತ ವೃತ್ತಿಪರ ರೀತಿಯಲ್ಲಿ ನಡೆಸಲ್ಪಡುತ್ತಿದೆ. ದತ್ತಾಂಶ ಆಧಾರಿತ ತಂತ್ರಗಳು ಮತ್ತು ಅಪಾರ ಸಂಪನ್ಮೂಲಗಳಿಂದ ಕೂಡಿದೆ. ಅದನ್ನು ಸೋಲಿಸಲು ಬಯಸುವವರು ಅದೇ ರೀತಿಯಲ್ಲಿ ತಯಾರಿ ನಡೆಸಬೇಕಾಗುತ್ತದೆ. ಬಿಜೆಪಿಗೆ ಯಾವುದೇ ಸಂಪನ್ಮೂಲಗಳ ಕೊರತೆಯಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಬಿಜೆಪಿ ಕೋಮುವಾದಿ ಕಾರ್ಯಸೂಚಿ ಅನುಸರಿಸುವ ಮೂಲಕ ವಿಭಜಕ ರಾಜಕೀಯ ಮಾಡುತ್ತಿದೆ. ಬಿಜೆಪಿ ದುರ್ಬಲ ಎಂದು ಭಾವಿಸಿದಾಗ ಅಥವಾ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲವಾದಾಗಲೆಲ್ಲಾ ಕೋಮು ರಾಜಕೀಯದತ್ತ ಹೊರಳುತ್ತದೆ. ಸಮಾಜವಾದಿ ಪಕ್ಷವು ವಿಭಜಕ ರಾಜಕೀಯದಲ್ಲಿ ನಂಬಿಕೆ ಇಡುವುದಿಲ್ಲ. ನಮ್ಮ ಪಕ್ಷವು ಜನರನ್ನು ಒಟ್ಟುಗೂಡಿಸಿ ಏಕತೆಯ ರಾಜಕೀಯವನ್ನು ಮಾಡಲು ಬಯಸುತ್ತದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ ಐ-ಪ್ಯಾಕ್ ಕಚೇರಿ ಮೇಲಿನ ಇಡಿ ದಾಳಿ ವಿರುದ್ದ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಇಡಿ ಅಥವಾ ಆದಾಯ ತೆರಿಗೆ ಇಲಾಖೆಯಿಂದ ಏಕೆ ದಾಳಿ ನಡೆಸಲಾಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಂಗಾಳದಲ್ಲಿ ಬಿಜೆಪಿ ಸೋಲುತ್ತದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಗೆಲ್ಲಲಿದೆ ಎಂದಿದ್ದಾರೆ

Category
ಕರಾವಳಿ ತರಂಗಿಣಿ