image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಂಡಿತ್ ದೀನ್ ದಯಾಳ ಉಪಾಧ್ಯಾಯ ಅವರ ಜನ್ಮದಿನಾಚರಣೆಯು ದ.ಕ. ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆಯಿತು.

ಪಂಡಿತ್ ದೀನ್ ದಯಾಳ ಉಪಾಧ್ಯಾಯ ಅವರ ಜನ್ಮದಿನಾಚರಣೆಯು ದ.ಕ. ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆಯಿತು.

ಮಂಗಳೂರು: ಸೆಪ್ಟೆಂಬರ್ 25 ರಂದು ಪಂ. ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನವನ್ನು ದ.ಕ. ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆಯಿತು.ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋನಪ್ಪ ಭಂಡಾರಿಯವರು ದೀನ ದಯಾಳ್ ಉಪಾಧ್ಯಾಯ ಅವರ ತ್ಯಾಗ ಪರಿಶ್ರಮ ಈಗಿನ ನಮ್ಮ ಬಿಜೆಪಿ ಕಾರ್ಯಕರ್ತರಿಗೂ ಪ್ರೇರಣೆ ಹಾಗೂ ದಾರಿದೀಪವಾಗಿದೆ ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ ಹಾಗೂ ಮ.ನ.ಪಾ. ಮೇಯರ್ ಮನೋಜ್ ಕೋಡಿಕಲ್ ಹಾಗೂ ಉಪ ಮೇಯರ್ ಶ್ರೀಮತಿ ಭಾನುಮತಿ ಹಾಗೂ  ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಕೇಶ್ ರೈ ನಿರ್ವಹಣೆ ಮಾಡಿದರು ಹಾಗೂ ಶ್ರೀಮತಿ ಮಂಜುಳಾ ರಾವ್ ಅವರು ಧನ್ಯವಾದ ಸಮರ್ಪಸಿದರು.

Category
ಕರಾವಳಿ ತರಂಗಿಣಿ