image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೆಳಗಾವಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆಯ ಫಲಿತಾಂಶ : ಶಾಸಕ ಲಕ್ಷ್ಮಣ್ ಸವದಿ ಭಾರೀ ಮತಗಳ ಅಂತರದಿಂದ ಭರ್ಜರಿ ಗೆಲುವು

ಬೆಳಗಾವಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆಯ ಫಲಿತಾಂಶ : ಶಾಸಕ ಲಕ್ಷ್ಮಣ್ ಸವದಿ ಭಾರೀ ಮತಗಳ ಅಂತರದಿಂದ ಭರ್ಜರಿ ಗೆಲುವು

ಬೆಳಗಾವಿ: ರಾಜಕೀಯ ಜಿದ್ದಾಜಿದ್ದಿ ಮತ್ತು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬೆಳಗಾವಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಶಾಸಕ ಲಕ್ಷ್ಮಣ್ ಸವದಿ ಭಾರೀ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬೆಳಗಾವಿಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರು ಹಾಗೂ ಮತ್ತೊಂದೆಡೆ ರಮೇಶ್ ಕತ್ತಿ ನಡುವೆ ತೀವ್ರ ರಾಜಕೀಯ ಹಣಾಹಣಿಯೇ ನಡೆಯಿತು. ಈ ಚುನಾವಣೆ ಗೆಲುವಿಗಾಗಿ ಜಾರಕಿಹೊಳಿ ಬ್ರದರ್ಸ್ ಒಂದು ಬಣವಾದರೇ, ಸಂಸದ ರಮೇಶ್ ಕತ್ತಿ ಹಾಗೂ ಶಾಸಕ ಲಕ್ಷ್ಮಣ್ ಸವದಿ ಮತ್ತೊಂದು ಬಣವಾಗಿದ್ದರು. ಬೆಳಗಾವಿಯ ಡಿಸಿಸಿ ಬ್ಯಾಂಕಿನ 7 ಕ್ಷೇತ್ರಗಳಲ್ಲಿ 2 ಕ್ಷೇತ್ರಗಳಲ್ಲಿ ಸವದಿ ಬಣ ಗೆಲುವು ಸಾಧಿಸಿದರೇ, 1 ಕ್ಷೇತ್ರದಲ್ಲಿ ಜಾರಕಿಹೊಳಿ ಬಣವು ಗೆಲುವು ಸಾಧಿಸಿದೆ.ರಾಮದುರ್ಗ ತಾಲೂಕಿನಲ್ಲಿ ಮಲಣ್ಣಾ ಯಾದವಾಡ 19 ಮತಗಳು, ಶ್ರೀಕಾಂತ್ ಧವನ 16 ಮತಗಳು ಮತ್ತು ಮಲ್ಲಣ್ಣಾ ಯಾದವಾಡ 3 ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಇನ್ನು ಅಥಣಿ ತಾಲೂಕಿನಲ್ಲಿ ಲಕ್ಷ್ಮಣ ಸವದಿ 122 ಮತಗಳು,ಮಹೇಶ್ ಕುಮಟಳ್ಳಿ 3 ಮತಗಳನ್ನು ಪಡೆದಿದ್ದು, ಲಕ್ಷ್ಮಣ ಸವದಿ 119 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಇನ್ನು ರಾಯಭಾಗ ತಾಲೂಕಿನಲ್ಲಿ ಅಪ್ಪಾಸಾಹೇಬ್ ಕುಲಗೋಡೆ 120 ಮತಗಳು,bಬಸನಗೌಡ ಆಸಂಗಿ 64 ಮತಗಳು,ಅಪ್ಪಾಸಾಹೇಬ್ ಕುಲಗೋಡೆ 56 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಒಟ್ಟಾರೆಯಾಗಿ 7 ಕ್ಷೇತ್ರಗಳ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಥಣಿ, ರಾಯಭಾಗ, ರಾಮದುರ್ಗ ಕ್ಷೇತ್ರದ ಫಲಿತಾಂಶ ಪ್ರಕಟವಾಗಿದ್ದು, ನಿಪ್ಪಾಣಿ, ಹುಕ್ಕೇರಿ, ಬೈಲಹೊಂಗಲ, ಕಿತ್ತೂರು ಸೇರಿ 4 ಕ್ಷೇತ್ರಗಳ ಫಲಿತಾಂಶ ಕೋರ್ಟ್ ಆದೇಶ ಹಿನ್ನಲೆಯಲ್ಲಿ ತಡೆಹಿಡಿಯಲಾಗಿದೆ.

Category
ಕರಾವಳಿ ತರಂಗಿಣಿ