image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನೀವು ನೂರು ಎಫ್ಐಆರ್ ಹಾಕಿ, ನಾವು ಹೆದರಲ್ಲ, ಓಡಿಹೋಗಲ್ಲ: ಶೋಭಾ ಕರಂದ್ಲಾಜೆ

ನೀವು ನೂರು ಎಫ್ಐಆರ್ ಹಾಕಿ, ನಾವು ಹೆದರಲ್ಲ, ಓಡಿಹೋಗಲ್ಲ: ಶೋಭಾ ಕರಂದ್ಲಾಜೆ

ಬೆಂಗಳೂರು: "ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ದ್ವೇಷದ ರಾಜಕಾರಣ ಆರಂಭಿಸಿದೆ. ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸದೆ ಕೇವಲ ಬಿಜೆಪಿ ನಾಯಕರು ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲಿಸಲಾಗುತ್ತಿದೆ. ನೀವು ಕೇಸ್ ಹಾಕಿ ಸಿದ್ದರಾಮಯ್ಯ ಅವರೇ, ನಾವು ಓಡಿಹೋಗಲ್ಲ. ನಾವು ಹೋರಾಟದಿಂದಲೇ ಬಂದವರು. ಇವನ್ನೆಲ್ಲ ಕಾನೂನು ಮೂಲಕವೇ ಎದುರಿಸುತ್ತೇವೆ. ಅಧಿಕಾರ ಶಾಶ್ವತ ಅಲ್ಲ, ನೀವು ಅಧಿಕಾರದಿಂದ ಕೆಳಗೆ ಇಳಿತೀರಿ. ಜನ ಇದಕ್ಕೆ ತಕ್ಕ ಉತ್ತರ ಕೊಡ್ತಾರೆ" ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, "ರಾಜ್ಯದಲ್ಲಿ ಅಘೋಶಿತ ಎಮರ್ಜೆನ್ಸಿ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದು ಹಿಟ್ಲರ್ ಆಗಿದ್ದಾರೆ. ಬಿಜೆಪಿ ನಾಯಕರ ಮೇಲೆ ನಿರಂತರ ಎಫ್ಐಆರ್ ಹಾಕುತ್ತಿದ್ದಾರೆ. ಬಿಜೆಪಿ ರಾಜ್ಯ, ಕೇಂದ್ರದ ನಾಯಕರ ಮೇಲೆ ಎಫ್ಐಆರ್ ಹಾಕಿದ್ದಾರೆ. ಸಂಸದ ತೇಜಸ್ವಿ ಸೂರ್ಯ, ಹರೀಶ್ ಪೂಂಜಾ, ಬಸನಗೌಡ ಪಾಟೀಲ್ ಯತ್ನಾಳ್, ಭರತ್ ಶೆಟ್ಟಿ ಸೇರಿದಂತೆ ಅನೇಕರ ಮೇಲೆ ಎಫ್ಐಆರ್ ಹಾಕಿದ್ದಾರೆ. ಬಿಜೆಪಿ ನಾಯಕರ ಧ್ವನಿ ಹತ್ತಿಕ್ಕೋ ಕೆಲಸ ಮಾಡಿದ್ದಾರೆ."

"ಐವನ್ ಡಿಸೋಜಾ ರಾಜ್ಯಪಾಲರನ್ನು ಬಾಂಗ್ಲಾದೇಶ ಮಾದರಿಯಲ್ಲಿ ಓಡಿಸ್ತೇವೆ ಅಂದರೂ ಅವರ ಮೇಲೆ ಎಫ್ಐಆರ್ ಆಗಿಲ್ಲ. ಪಿಎಸ್ಐ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡರು. ಕಾಂಗ್ರೆಸ್ ಎಂಎಲ್‌ಎ ಮತ್ತು ಅವರ ಮಗ ಹಣ ಕೇಳಿದ್ದರು. ಕೊಡಲು ನನಗೆ ಶಕ್ತಿ ಇಲ್ಲ ಅಂತ‌ ಹೇಳಿ ಆತ್ಮಹತ್ಯೆ ಮಾಡಿಕೊಂಡರು. ಅವರ ಮೇಲೆ ಎಫ್ಐಆರ್ ಆಗಲಿಲ್ಲ. ವಾಲ್ಮೀಕಿ ನಿಗಮದ ಹಗರಣದಲ್ಲಿ ಚಂದ್ರಶೇಖರ್ ಆತ್ಮಹತ್ಯೆ ಆಯ್ತು. ಎಸ್ಐಟಿ ರಚನೆ ಮಾಡಿದರು, ಅದರಲ್ಲಿ ನಾಗೇಂದ್ರ ಹೆಸರೇ ಇಲ್ಲ. ಸಿಬಿಐ ವರದಿ ಓದಿದ್ದೀರಾ ಸಿದ್ದರಾಮಯ್ಯ ಅವರೇ?" ಎಂದು ಪ್ರಶ್ನಿಸಿದರು.

Category
ಕರಾವಳಿ ತರಂಗಿಣಿ