ಧರ್ಮಸ್ಥಳ: ಬುರುಡೆ ತಂದು ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತರ ರೂಪಿಸಿದವರಿಗೆ ಬೆಂಬಲ ನೀಡಿರುವ ಬುರುಡೆ ಸರಕಾರದ ವಿರುದ್ಧ ನಾವೆಲ್ಲಾ ಸೆಟೆದು ನಿಲ್ಲಬೇಕಿದೆ ಎಂದು ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಧರ್ಮಸ್ಥಳ ಚಲೋ ಅಭಿಯಾನದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸೌಜನ್ಯಾ ಪರ ಹೋರಾಟ ವಿಚಾರದಲ್ಲಿ ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಹೋರಾಟ ಮಾಡಿದಾಗ ಈ ಸರ್ಕಾರ ನೆರವಿಗೆ ಬರಲಿಲ್ಲ. ಸೌಜನ್ಯ ಪರ ಹೋರಾಟ ಮಾಡುವವರು ಧರ್ಮಸ್ಥಳಕ್ಕೆ ಯಾಕೆ ಬರಬೇಕು. ಅವರು ನ್ಯಾಯಾಲಯದಲ್ಲಿ ಹೋರಾಟ ಮಾಡಲಿ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಬುರುಡೆ ಗ್ಯಾಂಗ್‌ನೊಂದಿಗೆ ಸೇರಿ ಬುರುಡೆ ಬಿಡುತ್ತಿದೆ.ಇದು ಧರ್ಮಸ್ಥಳಕ್ಕೆ ಕಳಂಕ ತರುವ ಪ್ರಯತ್ನಯಾಗಿದೆ. ಆದ್ದರಿಂದ ಎಲ್ಲರೂ ಸೇರಿ ಈ ಷಡ್ಯಂತರದ ವಿರುದ್ಧ ಧರ್ಮವನ್ನು ಬಲಗೊಳಿಸೋಣ ಎಂದು ಛಲವಾದಿ ನಾರಾಯಣ ಸ್ವಾಮಿ ಹೇಳಿದರು.