ಮಂಗಳೂರು: ಮುಲ್ಕಿ ಮೂಡಬಿದಿರೆ ಶಾಸಕರಾದ ಉಮಾನಾಥ ಕೋಟ್ಯಾನ್ ಗೆ ಜಿಲ್ಲಾಡಳಿತ ಅವಮಾನ ಮಾಡುವ ಮೂಲಕ ಬಿಲ್ಲವ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಮೂಡದ ಮಾಜಿ ಅದ್ಯಕ್ಷರಾದ ರವಿಶಂಕರ್ ಮಿಜಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ನಗರದ ಖಾಸಗಿ ಹೊಟೆಲಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಕನ್ನಡ ಜಿಲ್ಲೆಯ ಅತಿ ಪ್ರಮುಖ ಪ್ರದೇಶ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಬರುವಂತಹ ದಕ್ಷಿಣ ಕನ್ನಡದ ಎಲ್ಲಾ ಜನರ ಒಂದು ಪ್ರಮುಖ ಪ್ರವಾಸಿ ತಾಣ ಅಂತ ಹೇಳಿದರೆ ತಪ್ಪಾಗಲಾರದು. ಈ ಒಂದು ಪ್ರವಾಸಿ ತಾಣ ಇಂತಹ ಮಟ್ಟಕ್ಕೆ ಹೋಗಬೇಕಾದರೆ ಆ ಕ್ಷೇತ್ರದ ಸರ್ವ ಜನಾಂಗದ ಸಹಾಯ ಜನಾಂಗದೊಟ್ಟಿಗೆ ಒಳ್ಳೆ ರೀತಿಯಲ್ಲಿ ಬೆರೆತ ಪರಿಣಾಮವಾಗಿ ಎರಡನೇ ಬಾರಿ ಕೂಡ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಂಬಳ ಅಂತ ಹೇಳಿದರೆ ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪ್ರಖ್ಯಾತ ಕ್ರೀಡೆ. ಕಂಬಳ, ನಾಟಕ, ಸಿನಿಮಾ ಗೆ ಅವರದೇ ಅದ ಕೊಡುಗೆ ಶಾಸಕರು ಕೊಟ್ಟಿದ್ದಾರೆ. ಅವರ ಸ್ವಕ್ಷೇತ್ರ ಮೂಡುಬಿದರೆಯಲ್ಲಿ ಕಂಬಳವನ್ನು ಬಹಳ ಅದ್ಭುತವಾಗಿ ಅವರು ನಿರ್ವಹಿಸಿದ ಕಾರಣ ಅದು ಅಲ್ಲಿ ಜನಪ್ರಿಯವಾಯಿತು. ಸರ್ವ ಸಮಾಜದ ಶಕ್ತಿಯೊಂದಿಗೆ ಅವರು ಒಳ್ಳೆಯ ನಿರ್ವಹಣೆಯನ್ನು ಮಾಡಿದ್ದಾರೆ. ಇವರು ದಕ್ಷಿಣ ಕನ್ನಡದ ಒಬ್ಬರೇ ಬಿಲ್ಲವ ಶಾಸಕರು ಇರುವುದು. ಕರ್ನಾಟಕದ ಸದನಲ್ಲೂ ಅವರು ಪ್ರಶ್ನೆಗಳ ಮುಖಾಂತರ ಗಮನ ಸೆಳೆದಿದ್ದಾರೆ. ಅವರು ತಂದಿರುವ ಅನುದಾನದ ಮುಖಾಂತರ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸವನ್ನು ಮಾಡಿದ್ದಾರೆ. ಹೀಗಿರುವಾಗ ಅವರದೇ ಕ್ಷೇತ್ರ ಪಿಳಿಕುಲದ ಕಂಬಳದ ಬಗ್ಗೆ ಅವರನ್ನು ಅವಮಾನ ಮಾಡಲಾಗಿದೆ. ಇದನ್ನು ಸಮಾಜಸಹಿಸಿಕೊಳ್ಳಲ್ಲ.
ಕರ್ನಾಟಕದಲ್ಲಿ ನಾವು ನೋಡಬೇಕಾದರೆ ಇವತ್ತು ಹತ್ತು ಹಲವರು ವಿಚಿತ್ರ ವಿದ್ಯಾಮಾನಗಳು ನಮ್ಮ ಎದುರಿಗೆ ಇದೆ. ಅದರೆ ರಾಜಕೀಯ ಬೇಡ. ಒಬ್ಬ ಶಾಸಕನಾಗಿ ಅವರಿಗೆ ಕೊಡಬೇಕಾದ ಗೌರವದಲ್ಲೂ ಜಿಲ್ಲಾಡಳಿತ ಅವಮಾನ ಮಾಡುತ್ತಿದೆ. ಇದನ್ನು ಈಗಲೇ ಸರಿ ಮಾಡಿಕೊಳ್ಳಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಪೂಜಾರಿ, ಯಶವಂತ್ ಜಯರಾಮ್, ರಾಮ ಅಮಿನ್, ಅವಿನಾಶ್ ಸುವರ್ಣ, ಸತೀಶ್ ಕರ್ಕೇರಾ, ಸಂದೀಪ್ ಗರೋಡಿ ಉಪಸ್ಥಿತರಿದ್ದರು.