ಜಿಲ್ಲಾಧಿಕಾರಿ ಕಾಂಗ್ರೇಸಿನ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಪ್ರತಿ ಹಂತದಲ್ಲಿಯೂ ನನ್ನನ್ನು ತಿರಸ್ಕಾರ ಮಾಡುತ್ತಿದ್ದಾರೆ. ಹಂತ ಹಂತದಲ್ಲಿಯೂ ಅವಮಾನ ಮಾಡುತ್ತಿದ್ದಾರೆ ಎಂದು ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಆರೋಪಿಸಿದರು. ಅವರು ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಕಂಬಳ ಸಮಿತಿಯವರು ನಮಗೆ ಕಾಲ್ ಮಾಡಿ ಹೇಳುತ್ತಾರೆ ಪಿಲಿಕುಲದಲ್ಲಿ ಕಂಬಳದ ಮೀಟಿಂಗ್ ಆಗುತ್ತಿದೆ ಎಂದು. ಡಿಸಿ ನನ್ನ ಜೊತೆ ಚರ್ಚೆ ಮಾಡ ಬೇಕಿತ್ತು. ನನ್ನ ಜೊತೆ ಚರ್ಚಿಸಿ ಮುಂದೆ ಹೋಗಬೇಕಿತ್ತು. ನನ್ನ ಕ್ಷೇತ್ರದ ಯಾವುದೇ ಮೀಟಿಂಗ್ ಗೂ ನನ್ನನ್ನು ಕರೆಯದೇ ಅವರೆ ಮುಗಿಸುತ್ತಾರೆ. ನಿನ್ನೆ ಪಿಲಿಕುಲದಲ್ಲಿ ನಡೆದ ಗುದ್ದಲಿ ಪೂಜೆಗೂ ನನ್ನ ಜೊತೆ ಚರ್ಚಿಸುವುದಾಗಲಿ, ನನ್ನನ್ನು ಕರೆಯುವುದಾಗಲಿ ಮಾಡಲಿಲ್ಲ. ಹಿಂದೆ ನಡೆದ ಅಂತರ್ ರಾಷ್ಟ್ರೀಯ ಸರ್ಫಿಂಗ್ ನಡೆದಾಗ ಕೂಡ ನನ್ನ ಜೊತೆ ಚರ್ಚೆ ಮಾಡಿಲ್ಲ. ಜಿಲ್ಲಾಧಿಕಾರಿ ನಾನೊಬ್ಬ ಸ್ಥಳಿಯ ಜನಪ್ರತಿನಿಧಿಯಾಗಿರುವುದರಿಂದ ನನ್ನ ಜೊತೆ ಚರ್ಚಿಸಬೇಕು. ಆದರೆ ನಾನೋಬ್ಬ ಹಿಂದುಳಿದ ಸಮುದಾಯದ ಶಾಸಕ ಅಂತ ನನಗೆ ಅವಮಾನ ಮಾಡುತ್ತಿದ್ದಾರೆಯೇ? ಎಂದು ಪ್ರಶ್ನಿಸಿದರು. ಗಣೇಶ ಚತುರ್ಥಿ ಮುಗಿದ ಕೂಡಲೆ ಒಂದು ದೊಡ್ಡ ಮಟ್ಟದ ಪ್ರತಿಭಟನೆ ಮಾಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ನಂದನ ಮಲ್ಯ, ಈಶ್ವರ್ ಉಪಸ್ಥಿತರಿದ್ದರು.