image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದಕ್ಷಿಣ ಕನ್ನಡ ಭಾರತೀಯ ಜನತಾ ಪಾರ್ಟಿ ವತಿಯಿಂದ ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆ

ದಕ್ಷಿಣ ಕನ್ನಡ ಭಾರತೀಯ ಜನತಾ ಪಾರ್ಟಿ ವತಿಯಿಂದ ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆ

ರಾಜ್ಯಪಾಲರು ಮಧ್ಯ ಪ್ರವೇಶಿಸಿ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು- ಶಾಸಕ ವೇದವ್ಯಾಸ ಕಾಮತ್

ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 94 ಸಿ.ಸಿ ಹಕ್ಕು ಪತ್ರಗಳಿಗೆ 9/11 ಖಾತಾ ನೀಡದಿರುವುದು, ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ವಿಕಲಚೇತನರ ವೇತನ ಸೇರಿದಂತೆ ಎಲ್ಲಾ ಪಿಂಚಣಿ ಸೌಲಭ್ಯಗಳ ಹಣ ಬಿಡುಗಡೆ ಮಾಡದಿರುವುದು, ಇ-ಖಾತಾ ಹೆಸರಿನಲ್ಲಿ ಜನಸಾಮಾನ್ಯರಿಗೆ ಸಂಕಷ್ಟ, ಅರ್ಹ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಿದ್ದಲ್ಲದೇ ನೂತನ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನೇ ಸ್ವೀಕರಿಸದಿರುವುದು, ನಗರ ಭಾಗದಲ್ಲಿ ಕೃಷಿ ಭೂಮಿಯನ್ನು ಬೇರೆಯವರ ಸಹಿತ ಕುಟುಂಬದೊಳಗೂ ಯಾರಿಗೂ ನೀಡಲಾಗದಂತಹ ಪರಿಸ್ಥಿತಿ ತಂದೊಡ್ಡಿರುವುದು, ಅವೈಜ್ಞಾನಿಕವಾಗಿ ಭೂಮಿಯ ಮಾರ್ಗಸೂಚಿ ದರ ಏರಿಸಿ ಪಾಲಿಕೆ ವ್ಯಾಪ್ತಿಯ ಜನರಿಗೆ ಆಸ್ತಿ ತೆರಿಗೆ ಏರಿಕೆ ಹೊರೆ ಹಾಕಿದ್ದೇ ರಾಜ್ಯ ಸರ್ಕಾರದ ಮಹಾ ಸಾಧನೆಯಾಗಿದೆ. ಅಲ್ಲದೇ, ಮಂಗಳೂರು ಮಹಾನಗರ ಪಾಲಿಕೆಗೆ ಕಳೆದೆರಡು ವರ್ಷಗಳಿಂದ ರಾಜ್ಯ ಸರ್ಕಾರ ವಿಶೇಷ ಅನುದಾನವನ್ನೇ (SFC) ನೀಡದೇ ಪಾಲಿಕೆಯ ಅಭಿವೃದ್ಧಿ ಕುಂಠಿತಗೊಳಿಸಿದೆ. ಇದನ್ನು ಕೇಳೋಣವೆಂದರೆ ಮಂಗಳೂರು ಮಹಾನಗರ ಪಾಲಿಕೆಗೆ 25 ಕೋಟಿ ಅನುದಾನ ಕೊಡುತ್ತೇನೆ ಎಂದಿದ್ದ ನಗರಾಭಿವೃದ್ಧಿ ಸಚಿವರಾದ ಶ್ರೀ ಭೈರತಿ ಸುರೇಶ್ ರವರೂ ಸಹ ಸಿಗುತ್ತಿಲ್ಲ. ಇಂದು ರಾಜ್ಯ ಕಾಂಗ್ರೆಸ್ ಜನನ ಮರಣ ಪತ್ರವನ್ನು 5 ರೂ.ನಿಂದ 70 ರೂ ಗೆ ಏರಿಸಿದ್ದಲ್ಲದೇ ಎಲ್ಲಾ ಸ್ಟ್ಯಾಂಪ್ ಡ್ಯೂಟಿಗಳ ಬೆಲೆಗಳನ್ನು ಗಗನಕ್ಕೇರಿಸಿದ್ದು, ಡೆಡ್ ಎಂಡ್ ನಿವೇಶನಗಳಿಗೆ ಏಕನಿವೇಶನ ವಿನ್ಯಾಸ ನೀಡದೇ ಅನ್ಯಾಯ, ಎಲ್ಲಾ ವಿದ್ಯಾರ್ಥಿ ವೇತನಗಳನ್ನು ತಡೆ ಹಿಡಿದಿರುವುದು, ಮೂಡ ಪ್ರಾಧಿಕಾರದ ಅಧಿಕಾರವನ್ನೇ ಮೊಟಕುಗೊಳಿಸಿದ್ದು, ಮಳೆಹಾನಿ ಪರಿಹಾರದಲ್ಲಿ ಗಣನೀಯ ಕಡಿತಗೊಳಿಸಿದ್ದು, ಆಶಾ ಕಾರ್ಯಕರ್ತೆಯರ ವೇತನ ಬಿಡುಗಡೆಗೊಳಿಸದಿರುವುದು, ಪ್ರಾಪರ್ಟಿ ಕಾರ್ಡ್ ಸ್ಥಗಿತಗೊಂಡಿರುವುದು, ಕುಡಿಯುವ ನೀರಿನ ದರ  ವಿಪರೀತ ಏರಿಕೆ, ಕಸ ವಿಲೇವಾರಿ ಸಮಸ್ಯೆ ಸೇರಿದಂತೆ ಹಲವು ಜನವಿರೋಧಿ ನೀತಿಗಳಿಂದ ಜನಸಾಮಾನ್ಯರನ್ನು ಸಂಕಷ್ಟ ಹೇಳ ತೀರದಾಗಿದೆ.ಸರ್ಕಾರದ ಈ ಎಲ್ಲಾ ಆಡಳಿತ ವೈಫಲ್ಯವನ್ನು ಖಂಡಿಸುತ್ತಾ, ಕೂಡಲೇ ಸನ್ಮಾನ್ಯ ರಾಜ್ಯಪಾಲರು ಮಧ್ಯ ಪ್ರವೇಶಿಸಿ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದಿಂದ ನಗರ ಪಾಲಿಕೆ ಆಯುಕ್ತರ ಮೂಲಕ ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಬೆಲೆ ಏರಿಕೆಯೊಂದೇ ಕಾಂಗ್ರೆಸ್‌ ಸರ್ಕಾರದ 2 ವರ್ಷದ ಸಾಧನೆ- ಕಿಶೋರ್‌ ಕುಮಾರ್‌ ಪುತ್ತೂರು

ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ದಕ್ಷಿಣ ಕನ್ನಡ ಪ್ರಧಾನ ಕಾರ್ಯದರ್ಶಿ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ಬಿಜೆಪಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವತಿಯಿಂದ ಆಯೋಜಿಸಿದ ವಿವಿಧ ಗ್ರಾಮ ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್ ಮತ್ತು ಪುರಸಭೆ ಕಚೇರಿಗಳ ಎದುರು ನಡೆದ  ಪ್ರತಿಭಟನೆಗಳಲ್ಲಿ ಭಾಗವಹಿಸಿ, ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನಿರ್ಧಾರಗಳು, ಬೆಲೆ ಏರಿಕೆ ಹಾಗೂ ನಿರ್ಲಕ್ಷ್ಯ ನೀತಿಯ ವಿರುದ್ಧ ಸ್ಥಳೀಯ ಬಿಜೆಪಿ ಘಟಕಗಳು ಸಂಘಟಿತ ಧರಣಿ ಮತ್ತು ಪ್ರತಿಭಟನೆಯನ್ನು ಆಯೋಜಿಸಿತ್ತು. ಈ ಹೋರಾಟದ ಅಂಗವಾಗಿ ಹಲವಾರು ಗ್ರಾಮ ಪಂಚಾಯತ್ ಗೆ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ನೇರವಾಗಿ ಹಾಜರಾಗಿ ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಮುಖಂಡರೊಂದಿಗೆ ಪ್ರತಿಭಟನೆ ನಡೆಸಿದರು.

ಅಧಿಕಾರ ವಿಕೇಂದ್ರೀಕರಣ ಮೂಲೆ ಗುಂಪು ಮಾಡಿ  ಕಾಂಗ್ರೆಸ್‌ ಸರ್ಕಾರ ಅಂಬೇಡ್ಕರ್‌ಗೆ ಅಗೌರವ ತೋರಿಸುತ್ತಿದೆ- ಕ್ಯಾ. ಚೌಟ ಆಕ್ರೋಶ

ಗುರುಪುರ: ರಾಜ್ಯದ ಪ್ರಗತಿಗೆ ಅದರಲ್ಲಿಯೂ ಅವಿಭಜಿತ ದಕ್ಷಿಣ ಕನ್ನಡದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವುದಕ್ಕೆ ಜನಾಂದೋಲವನ್ನು ರೂಪಿಸುವವರೆಗೆ ಬಿಜೆಪಿ ವಿರಮಿಸುವುದಿಲ್ಲ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ. ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪಕ್ಷವು ಗುರುಪುರ ಗ್ರಾಮ ಪಂಚಾಯತ್ ಕಚೇರಿ ಮುಂದೆ ಇಂದು ನಡೆಸಿದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅನಾಚಾರ, ದುರಾಡಳಿತ, ಜನವಿರೋಧಿ ನೀತಿಗಳಿಂದಾಗಿ ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಹೇರಬೇಕಾದ ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಈ ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ಜನರೇ ಬೀದಿಗಿಳಿಯುವ ಕಾಲ ದೂರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಡಳಿತ ವಿಕೇಂದ್ರೀಕರಣ ಡಾ. ಅಂಬೇಡ್ಕರ್ ಅವರ ಕನಸು; ಅದು ಸಂವಿಧಾನದ ಆಶಯ ಕೂಡಾ ಹೌದು. ಆದರೆ, ಈ ಭ್ರಷ್ಟ ಕಾಂಗ್ರೆಸ್‌ ಸರ್ಕಾರದಲ್ಲಿ ಗ್ರಾಮ ಪಂಚಾಯತ್, ನಗರಸಭೆ, ಪುರಸಭೆಯಿಂದ ಹಿಡಿದು ಪಾಲಿಕೆವರೆಗೆ ಎಲ್ಲಾ ಕಡೆ ಸ್ಥಳೀಯಾಡಳಿತ ವ್ಯವಸ್ಥೆಯನ್ನೇ ಬುಡಮೇಲು ಮಾಡಲಾಗಿದೆ. ಗ್ರಾಮ ಪಂಚಾಯತ್‌ಗಳು ನೀಡುತ್ತಿದ್ದ ಏಕ ವಿನ್ಯಾಸ ನಕ್ಷೆಯಾದ 9/11 ವಿತರಣೆಯ ಹಕ್ಕನ್ನು ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಅಧಿಕಾರವನ್ನು  ಮೊಟಕುಗೊಳಿಸಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾಯಿಸಲಾಗಿದೆ. ಸಿಂಗಲ್‌ ಸೈಟ್‌ನಲ್ಲಿ ಮನೆ ಕಟ್ಟಲು ಸಾಧ್ಯವಾಗದೇ ಜನರು ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗಿದೆ. ಸರಳವಾಗಿದ್ದ ಈ ನಿಯಮ ಜಟಿಲಗೊಳಿಸಿರುವ ಕಾಂಗ್ರೆಸ್ ಸರ್ಕಾರ ಈ ಮೂಲಕವೂ ಮಧ್ಯವರ್ತಿಗಳ ದಂಧೆ ಮಾಡಲು ಅವಕಾಶ ಕೊಟ್ಟಿದೆ. ಚುನಾವಣೆ ವೇಳೆ ಗ್ಯಾರಂಟಿ, ಉಚಿತ ಯೋಜನೆಗಳ ಘೋಷಣೆ ಮಾಡಿ ಜನರನ್ನು ಮೋಸದ ಬಲೆಗೆ ಬೀಳಿಸಿ ಇದೀಗ ವಾಮಮಾರ್ಗಗಳ ಮೂಲಕ ಜನರು ಬೆವರು ಸುರಿಸಿ ದುಡಿದ ಹಣವನ್ನೇ ಕಸಿದುಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಒಂದೊಂದು ಪಂಚಾಯತ್‌ ಮೂಲಕ ಅನೇಕ ಮನೆಗಳನ್ನು ಬಡವರ್ಗದವರಿಗೆ ಕೊಡಲಾಗಿತ್ತು. ಆದರೆ, ಈ ಬಡವಿರೋಧಿ ಕಾಂಗ್ರೆಸ್‌ ಸರಕಾರಕ್ಕೆ ಒಂದೇ ಒಂದು ಮನೆಯನ್ನು ಹಸ್ತಾಂತರಿಸಲು ಸಾಧ್ಯವಾಗಿಲ್ಲ. ಇನ್ನು ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ಯೋಜನೆಯಡಿ‌ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲು‌ ಸಿದ್ದರಾಮಯ್ಯ ಸರ್ಕಾರ ಆದೇಶಿಸಿದೆ. ಹೀಗಿರುವಾಗ, ರಾಜ್ಯದಲ್ಲಿ ಅಭಿವೃದ್ಧಿಯೂ ಇಲ್ಲ, ಅತ್ತ ಗ್ಯಾರಂಟಿಗಳನ್ನು ನಂಬಿದ್ದ ಬಡವರ ಗೋಳು ಕೇಳುವವರಿಲ್ಲ. ಫಲಾನುಭವಿಗಳಿಗೆ ಪಿಂಚಣಿಯೂ ಇಲ್ಲದೆ ಹಿರಿಯ ನಾಗರಿಕರ ಬದುಕನ್ನು ತೀರಾ ಕೆಟ್ಟ ಪರಿಸ್ಥಿತಿಗೆ ತಳ್ಳಿದೆ. ಮತ್ತೊಂದೆಡೆ, ಭ್ರಷ್ಟಾಚಾರದ ಮೂಲಕ ಈ ಕಾಂಗ್ರೆಸ್ ಸರ್ಕಾರವು ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದು, ಪ್ರತಿಯೊಂದು ಇಲಾಖೆಯಲ್ಲಿಯೂ ಬರೀ ವಸೂಲಿ-ಸುಲಿಗೆಕೋರರೇ ದರ್ಬಾರು ನಡೆಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆಯು ಯಾವ ಮಟ್ಟಕ್ಕೆ ಕುಸಿದಿದೆ ಎನ್ನುವುದಕ್ಕೆ ನಮ್ಮ ಜಿಲ್ಲೆಯಲ್ಲಿ ನಡುರಸ್ತೆಯಲ್ಲೇ ಹಿಂದೂ ಕಾರ್ಯಕರ್ತನ ಕೊಲೆಯೇ ಜ್ವಲಂತ ಸಾಕ್ಷಿ. ಒಟ್ಟಾರೆ ದುರಾಡಳಿತದ ಈ ಸರ್ಕಾರ ರಾಜ್ಯದ ಆರ್ಥಿಕ ಸ್ಥಿತಿಯನ್ನು ಅದೋಗತಿ ದೂಡಿದೆ ಎಂದು ಕ್ಯಾ. ಚೌಟ ಆರೋಪಿಸಿದ್ದಾರೆ.

ಬೆಲೆ ಏರಿಕೆ, ಬ್ರಹ್ಮಾಂಡ ಭ್ರಷ್ಟಾಚಾರದಿಂದಾಗಿ  ಜನತೆ ಬದುಕಲು ಸಾಧ್ಯವಾಗುತ್ತಿಲ್ಲ- ಡಾ. ಭರತ್ ಶೆಟ್ಟಿ

ಸುರತ್ಕಲ್ : ಬೆಲೆ ಏರಿಕೆ, ಭ್ರಷ್ಟಾಚಾರದಿಂದ ಜನರು ಬದುಕಲು ಸಾಧ್ಯವಾಗದಂತಹ ಸ್ಥಿತಿ ರಾಜ್ಯದಲ್ಲಿದೆ. ಸ್ವತಃ ಕಾಂಗ್ರೆಸ್ ಶಾಸಕರೇ ಅನುದಾನ ಸಿಗದೇ ಪರದಾಡುತ್ತಿದ್ದು ಬಿಜೆಪಿ ಶಾಸಕರಿಗೆ ಪ್ರತಿಭಟನೆ ಮಾಡುವ ಮೂಲಕ ಸರಕಾರಕ್ಕೆ ಬಿಸಿ ಮುಟ್ಟುವಂತೆ ಮಾಡಿ ಎಂದು ಹೇಳುವಷ್ಟರ ಮಟ್ಟಿಗೆ ಅನುದಾನ ನೀಡಿದ ಈ ಸರಕಾರದಿಂದಾಗಿ  ರಾಜ್ಯದ ಅಭಿವೃದ್ಧಿ ಹೀನಾಯ ಸ್ಥಿತಿಗೆ ಬಂದು ಮುಟ್ಟಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾಕ್ಟರ್ ಭರತ್ ಶೆಟ್ಟಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಭಾರತೀಯ ಜನತಾ ಪಕ್ಷ ಸುರತ್ಕಲ್ ಮಹಾನಗರ ಪಾಲಿಕೆಯ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಗ್ರಾಮದಿಂದ ಹಿಡಿದು ಪುರಸಭೆ ಮಹಾನಗರ ಪಾಲಿಕೆ ಮಂಗಳೂರು ನಗರಾಭಿವೃದ್ಧಿ  ಪ್ರಾಧಿಕಾರ ಸೇರಿದಂತೆ ಎಲ್ಲಾ ಕಡೆ ಸ್ಥಳೀಯ ಆಡಳಿತದ ಅಧಿಕಾರವನ್ನು ಮೋಟಕು ಗೊಳಿಸಿ ಎಲ್ಲಾ ಅಜೆಂಡಗಳು ಬೆಂಗಳೂರಿನಲ್ಲಿ ಆಗುವಂತೆ ಮಾಡಿ ಬ್ರಹ್ಮಾಂಡ  ಭ್ರಷ್ಟಾಚಾರವನ್ನು  ನೀತಿಗೆಟ್ಟ ಈ ಸರಕಾರ  ಸರಕಾರ ಬಹಿರಂಗವಾಗಿಯೇ ಮಾಡುತ್ತಿದೆ. ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡದ ರಾಜ್ಯವನ್ನ ಹಿಂದಕ್ಕೆ ತಳ್ಳಿದೆ. ಇನ್ನೊಂದೆಡೆ  ಜನರಿಂದ ಹೆಚ್ಚಿನ ತೆರಿಗೆ, ಬೆಲೆ ಹೆಚ್ಚಳ ಮಾಡುವ ಮೂಲಕ  ಶೋಷಣೆ ಮಾಡುತ್ತಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ  ಅಕ್ರೋಶ ವ್ಯಕ್ತಪಡಿಸಿದರು. ಅಲ್ಪಸಂಖ್ಯಾತ ಇಲಾಖೆಯಿಂದ ಸರಕಾರ ಇತ್ತೀಚೆಗೆ ಪ್ರತಿ ಕ್ಷೇತ್ರಕ್ಕೆ ಏಳೆಂಟು ಕೋಟಿ ರೂಪಾಯಿಗಳಷ್ಟು ಅನುದಾನ ಬಿಡುಗಡೆ ಮಾಡಿದೆ.ಹಿಂದುಗಳ ಪೂಜಿಸುವ ಶ್ರದ್ಧಾ ಕೇಂದ್ರಗಳಿಗೆ 25 ಲಕ್ಷ ರೂಪಾಯಿ ಬಿಡುಗಡೆ ಮಾಡುವ ಭರವಸೆ ನೀಡಿದ್ದ ಸರಕಾರ  25000 ನೀಡಿ ಕೈ ತೊಳೆದುಕೊಂಡಿದೆ. ಬಹು ಸಂಖ್ಯಾತ ಹಿಂದೂಗಳು ಈ ಸರಕಾರದ ಎದುರು ಭಿಕ್ಷಾ ಪಾತ್ರೆ ಹಿಡಿಯುವಂತೆ ಮಾಡಿ ಹಿಂದುಗಳನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು. ಮಾತೆತ್ತಿದರೆ ಕೋಮುವಾದದ ನೆಪ ಹೇಳಿ ಪೊಲೀಸರ ಮೂಲಕ ಕೇಸು ದಾಖಲಿಸಿ . ನಮ್ಮನ್ನು ಹತ್ತಿಕ್ಕುವ ಕೆಲಸವನ್ನ ಮಾಡುವ ಷಡ್ಯಂತ್ರವನ್ನು ಸರಕಾರ ಮಾಡುತ್ತಿದ್ದು ಇದಕ್ಕೆ ಎದೆಗೊಂಡುವ ಪ್ರಶ್ನೆಯೇ ಇಲ್ಲ. ಇನ್ನು ಎರಡು ಕೇಸ್ ಹಾಕಿದರು ಬಿಜೆಪಿ ಜನಪರ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿದರು.ಬಿಜೆಪಿ ಸರಕಾರ ಇದ್ದಾಗ ಕೋವಿಡು ಸಂದರ್ಭವನ್ನು ಹೊರತುಪಡಿಸಿ ಕೇವಲ ಎರಡು ವರ್ಷದ ಅಧಿಕಾರ ಅವಧಿಗೆ 2,000 ಕೋಟಿ ರೂಪಾಯಿಗಳಿಂದ ಹೆಚ್ಚು ಅನುದಾನವನ್ನ ಸರಕಾರ ನೀಡಿದೆ ಅಭಿವೃದ್ಧಿಯನ್ನು ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಎಷ್ಟು ವರ್ಷವಾದರೂ ಅನುದಾನ ನೀಡದೆ ಸತಾಯಿಸುತ್ತಿದೆ. ಸ್ವತಃ ಕಾಂಗ್ರೆಸ್ ಶಾಸಕರುಗಳೇ ವಿಪಕ್ಷದವರು ಪ್ರತಿಭಟನೆ ಮಾಡಿ ಅನುದಾನ ದೊರಕಿಸಿಕೊಡಿ ಎನ್ನುವಂತ ಸ್ಥಿತಿಗೆ ತಲುಪಿದ್ದೇವೆ ಎಂದು ಹೇಳಿದರು.ಭಾರತೀಯ ಜನತಾ ಪಕ್ಷ ಸರಕಾರವಿದ್ದಾಗ 100 ಮನೆಗಳನ್ನ ಬಡವರ್ಗಕ್ಕೆ ವಿತರಣೆ ಮಾಡಿದ್ದೇವೆ.ಈ ಸರಕಾರಕ್ಕೆ ಒಂದೇ ಒಂದು ಮನೆಯನ್ನ ಹಸ್ತಾಂತರಿಸಲು ಸಾಧ್ಯವಾಗಿಲ್ಲ.ಬಸ್ಸಿನ ದರ  ಏರಿಕೆ, ಭೂ ನೊಂದಣಿ ಯಲ್ಲಿ ದರ ಏರಿಕೆ, ಹೀಗೆ ಪ್ರತಿಯೊಂದುರಲ್ಲಿ ಯುದ್ಧ ಏರಿಕೆ ಮಾಡಿ ಜನರು ಬಸವಳಿಯುವಂತೆ ಮಾಡಿದೆ.94 ಸಿಹಿ ಹಕ್ಕುಪತ್ರಗಳಿಗೆ ತಡೆ, ಮನೆ ನಂಬರ್ ನೀಡಲು ತಕರಾರು, ಬಡವರ್ಗಕ್ಕೆ ಮನೆ ಕಟ್ಟಲು ಮರಳು ಕೆಂಪುಕಲ್ಲು ಮತ್ತಿತರ ಸೌಲಭ್ಯಗಳಿಗೆ ಅಡೆತಡೆಗಳನ್ನು ಮಾಡುವ ಮೂಲಕ  ನೆಮ್ಮದಿಯ ಜೀವನಕ್ಕೆ ಕುತ್ತು ತಂದಿದೆ. ಇಂತಹ ಸರ್ಕಾರದ ವಿರುದ್ಧ ಜನರೇ ಇದೀಗ ಬಂಡೇಳುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಮಂತ್ರಿ ಮಾಗದವರಿಗೆ ಸರಿಯಾದ ಪಾಠವನ್ನೇ ಕಲಿಸಲಿದ್ದಾರೆ ಎಂದು ಹೇಳಿದರು.

ಜನವಿರೋಧಿ, ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿ.ಜೆ.ಪಿ. ಯ ಪ್ರತಿಭಟನೆಗೆ ನಾಗರಿಕರಿಂದ ಅಭೂತಪೂರ್ವ  ಬೆಂಬಲ-ಸತೀಶ್ ಕುಂಪಲ.

ಮಂಗಳೂರು: ಬ್ರಹ್ಮಾಂಡ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಭಿವೃದ್ಧಿ ಶೂನ್ಯ ಜನವಿರೋಧಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜನರ ಜೀವನವನ್ನೇ ದುಬಾರಿ ಯಾಗಿಸಿದೆ. ಬೆಲೆಯೇರಿಕೆ ಯಿಂದ ಜನರು ತತ್ತರಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಜನರು ಗೃಹ‌ ನಿರ್ಮಾಣದಿಂದ ಹಿಡಿದು ವೃದ್ಧಾಪ್ಯ, ಸಂಧ್ಯಾ ಸುರಕ್ಷಾ ಪಿಂಚನಿ ಗಳಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಗ್ರಾಮ ಪಂಚಾಯತ್ ಗಳಿಗೆ ರಾಜ್ಯ ಸರ್ಕಾರದ ಅನುದಾನ ಶೂನ್ಯ. ಕೇಂದ್ರ ಸರ್ಕಾರದ15 ನೇ ಹಣಕಾಸು ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಸರ್ಕಾರ ಜನರ ಹಣ ಕೊಳ್ಳೆ ಹೊಡೆಯುವುದರಲ್ಲಿ ನಿರತವಾಗಿದೆ. ಲಂಚ ಕೊಡದೆ ಏನೂ ನಡೆಯಲು ಸಾಧ್ಯವಿಲ್ಲದಂತಹ ಸನ್ನಿವೇಶ ಬಂದಿದೆ. ಇವೆಲ್ಲದರ ವಿರುದ್ಧ ಭಾರತೀಯ ಜನತಾ ಪಾರ್ಟಿಯ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಕಛೇರಿ ಮುಂಭಾಗದಲ್ಲಿ ನಾಗರಿಕರ ಜತೆಯಲ್ಲಿ ಬಿ.ಜೆ.ಪಿ. ಪ್ರತಿಭಟನೆ ನಡೆಸಿದೆ ಎಂದು ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಹೇಳಿದರು.

ಪ್ರತಿಭಟನೆಯಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಭಾಗವಹಿಸುವುದರ ಮೂಲಕ ಹೊಣೆಗೇಡಿ ಕಾಂಗ್ರೆಸ್ ಸರ್ಕಾರದ ಮೇಲಿರುವ ಅಸಮಾಧಾನ ವನ್ನು ಬಹಿರಂಗ ವಾಗಿ ಹೊರಹಾಕಿದ್ದಾರೆ. ಜಿಲ್ಲೆಯಲ್ಲಿ ಸುಮಾರು 45,000 ಕ್ಕೂ ಅಧಿಕ ಜನರು ಈ ಪ್ರತಿಭಟನೆ ಯಲ್ಲಿ ಭಾಗವಹಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ. ಜಿಲ್ಲೆಯ ಸಂಸದರು, ಶಾಸಕರು, ಎಲ್ಲಾ ಜನಪ್ರತಿನಿಧಿಗಳು, ಪಕ್ಷದ ಜಿಲ್ಲೆಯ, ಮಂಡಲದ ಎಲ್ಲಾ ನಾಯಕರುಗಳು, ಕಾರ್ಯಕರ್ತರು ಮುಂಚೂಣಿಯಲ್ಲಿ ನಿಂತು ಜನಸಾಮಾನ್ಯರ ಜತೆಯಲ್ಲಿ ಪಕ್ಷ ಸದಾ ಇರಲಿದೆ ಎಂದು ಈ ಪ್ರತಿಭಟನೆ ತೋರಿಸಿಕೊಟ್ಟಿದೆ. ಅಭೂತಪೂರ್ವ ವಾಗಿ ಯಶಸ್ವಿ ಗೊಳಿಸಿದ ಎಲ್ಲರಿಗೂ ಕೃತಜ್ಞತೆ ಗಳನ್ನು ಕುಂಪಲ ರವರು‌ ತಿಳಿಸಿದ್ದಾರೆ.

 

Category
ಕರಾವಳಿ ತರಂಗಿಣಿ