image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಾಮಾನ್ಯ ಸಭೆಯಲ್ಲಿ ಮೇಯರ್ ಅವರು ಸರ್ವಧಿಕಾರಿಯಂತೆ ವರ್ತಿಸಿದ್ದಾರೆ - ನಾಯಕ ಪ್ರವೀಣ್ ಚಂದ್ ಆಳ್ವ

ಸಾಮಾನ್ಯ ಸಭೆಯಲ್ಲಿ ಮೇಯರ್ ಅವರು ಸರ್ವಧಿಕಾರಿಯಂತೆ ವರ್ತಿಸಿದ್ದಾರೆ - ನಾಯಕ ಪ್ರವೀಣ್ ಚಂದ್ ಆಳ್ವ

ಮಂಗಳೂರು: ಮೊನ್ನೆ ನಡೆದ ಸಾಮಾನ್ಯ ಸಭೆಯಲ್ಲಿ ಮೇಯರ್ ಅವರು ಸರ್ವಧಿಕಾರಿಯಂತೆ ವರ್ತಿಸಿದ್ದಾರೆ ಎಂದು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವಾ ಆರೋಪಿಸಿದರು. ಅವರು ನಗರದ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು,  ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಪ್ರತಿಪಕ್ಷದವರಿಗೆ ಮೊದಲು ಅನುಮತಿ ನೀಡಬೇಕು. ಅದನ್ನು ಗಾಳಿಗೆ ತೂರಿ ಮೇಯರ್ ಅವರು ತಮ್ಮ ಕೊನೆಯ ಸಾಮಾನ್ಯ ಸಭೆಯಲ್ಲಿ ಶಿಷ್ಟಚಾರ ಮೀರಿರಿರುವುದು ಖಂಡನೀಯ. ಮ ನ ಪಾ ಇತಿಹಾಸದಲ್ಲಿ ಈ ರೀತಿ ನಡೆದದ್ದು ಇದೆ ಮೊದಲು. ಇವರ ಸಾಧನೆ ಶೂನ್ಯವಾಗಿರುವಾಗ ಅದನ್ನು ಮರೆಮಾಚಾಲು ಮೇಯರ್ ಈ ರೀತಿ ಮಾಡಿದ್ದಾರೆ. ಪ್ರತಿಪಕ್ಷವಾಗಿ ನಾವು ಅಭಿವೃದ್ಧಿ ವಿಚಾರದಲ್ಲಿ ನಾವು ಎಂದಿಗೂ ರಾಜಕೀಯ ಮಾಡಲಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ರೀತಿ ಎಂದಿಗೂ ನಡೆದಿಲ್ಲ. ಈ ಮೇಯರ್ ಅವಧಿಯಲ್ಲಿ ಏನೂ ಅಭಿವೃದ್ಧಿ ಆಗಲಿಲ್ಲ.  ಕಳೆದ 4 ವರ್ಷದಿಂದ ಅಧಿಕಾರದಲ್ಲಿರುವ  ಇವರುಗಳು ಯಾವುದೇ ಪ್ರಯೋಜನಕಾರಿ ವ್ಯವಸ್ಥೆ ಸರಿ ಮಾಡಲಿಲ್ಲ. ನೀರಿನ ದರದ ವಿಷಯದಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ, ನೀರಿನ ಪಾವತಿಯಲ್ಲಿ ಸಮಸ್ಯೆ,  ಬಡವರಿಗೆ ಒಂದೇ ಒಂದು ಮನೆ ಕೊಟ್ಟಿಲ್ಲ, ಒಳ ಚರಂಡಿ ವ್ಯವಸ್ಥೆ ಸರಿ ಇಲ್ಲ. ಒಳ ಚರಂಡಿ ನೀರು ರಸ್ತೆಯಲ್ಲಿ ಹೋಗುತ್ತಿದೆ. ನಗರದಲ್ಲಿ ಟ್ರಾಫಿಕ್ ವ್ಯವಸ್ಥೆ ಸರಿ ಇಲ್ಲ. ಅದರ ಬಗ್ಗೆ ಸಭೆ ಕರೆಯಬೇಕು. ಆದರೆ ಈಗಿನ ಮೇಯರ್ ಎರಡು ಸಲ ಸಭೆ ನಡೆಸಿದ್ದಾರೆ. ಆದಾಯ ಜಾಸ್ತಿ ಮಾಡುವ ಯೊಜನೆಯ ಬಿಟ್ಟು, ನೀರಿನ ಬಿಲ್ಲು ಜಾಸ್ತಿ ಮಾಡಿ ನಗರ ಪಾಲಿಕೆ ನಡೆಸುವ ಹಾಗಾಗಿದೆ. ಮಹಾನಗರ ಪಾಲಿಕೆಯಲ್ಲಿ ಮಾರುಕಟ್ಟೆ ಇರಬೇಕು. ಆದರೆ ನಮ್ಮಲ್ಲಿ ಯಾವುದೇ ಸರಿಯಾದ ಮಾರ್ಕೆಟ್ ಇಲ್ಲ. ಸಿದ್ದವಾದ ಮಾರ್ಕೆಟ್ ಓಪನ್ ಆಗುತ್ತಿಲ್ಲ ಯಾಕೆ ಅಂತ ಮೇಯರ್ ಅವರನ್ನು ಕೇಳಬೇಕಷ್ಟೆ. ಇವರ ಸಾಧನೆ ವಿರುದ್ದ ಮಾತಾಡುತ್ತೇವೆ ಎಂದು ಸಾಮಾನ್ಯ ಸಭೆಯಲ್ಲಿ ಗಲಾಟೆ ಮಾಡುತ್ತಾರೆ. ಬಸ್ಸಿಗೆ ಕಲ್ಲು ಬಿಸಾಕಿರುವುದನ್ನು ನಾವು ಖಂಡಿಸುತ್ತೇವೆ. ನಮ್ಮ ಸರಕಾರ  ಇದ್ದರೂ ಕೂಡ ಕಲ್ಲು ಬಿಸಾಕಿದವರ ಮೇಲೆ ಕೇಸ್ ಆಗಿದೆ ಎಂದರು.

Category
ಕರಾವಳಿ ತರಂಗಿಣಿ