image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಯಾರೇ ರಾಜ್ಯ ಸರಕಾರದ ಆಡಳಿತ ವೈಫಲ್ಯದ ಬಗ್ಗೆ ಯಾರೇ ಮಾತನಾಡಿದರೆ ಎಪ್ ಐ ಆರ್ ಹಾಕುತ್ತಾರೆ- ಕೋಟ ಶ್ರೀನಿವಾಸ್ ಪೂಜಾರಿ

ರಾಜ್ಯದಲ್ಲಿ ಯಾರೇ ರಾಜ್ಯ ಸರಕಾರದ ಆಡಳಿತ ವೈಫಲ್ಯದ ಬಗ್ಗೆ ಯಾರೇ ಮಾತನಾಡಿದರೆ ಎಪ್ ಐ ಆರ್ ಹಾಕುತ್ತಾರೆ- ಕೋಟ ಶ್ರೀನಿವಾಸ್ ಪೂಜಾರಿ

ಮಂಗಳೂರು : ರಾಜ್ಯದಲ್ಲಿ ಯಾರೇ ರಾಜ್ಯ ಸರಕಾರದ ಆಡಳಿತ ವೈಫಲ್ಯದ ಬಗ್ಗೆ ಯಾರೇ ಮಾತನಾಡಿದರೂ ಎಪ್ ಐ ಆರ್ ಹಾಕುತ್ತಾರೆ ಎಂದು ಉಡುಪಿ ಚಿಕ್ಕಮಂಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರಿನಲ್ಲಿ ಶ್ವೇತಾ ಪೂಜಾರಿ, ಬುರ್ಖಾಧಾರಿಗಳನ್ನು ಯಾಕೆ ಬಂಧಿಸಿಲ್ಲ ಅಂತ ಪ್ರಶ್ನಿಸಿದ್ದಕ್ಕೆ ಎಫ್‌ಐಆರ್ ಹಾಕುತ್ತಾರೆ, ಚಕ್ರವರ್ತಿ ಸೂಲಿಬೆಲೆ, ಹರೀಶ್ ಪೂಂಜ, ಶರಣ್ ಪಂಪೈಲ್, ಯಶಪಾಲ್ ಸುವರ್ಣ, ಶ್ರೀಕಾಂತ್ ಶೆಟ್ಟಿ ಮೇಲೆ ಕೇಸು ದಾಖಲಿಸುತ್ತಾರೆ ಈ ಸರಕಾರ ರಾಜ್ಯದಲ್ಲಿ ಪ್ರಶ್ನಿಸಲು ಸಾಧ್ಯವೇ ಇಲ್ಲ ಎನ್ನುವಂತಹ ಸ್ಥಿತಿ ತಂದಿದ್ದಾರೆ.  ಕೇಂದ್ರ ಸರ್ಕಾರವನ್ನು ದೂರುವುದು, ಪ್ರಧಾನಿಯ ಡ್ರೆಸ್ ಬಗ್ಗೆ ಮಾತಾಡುವಂತಹ ಬಾಲಿಶ ಕೆಲಸವನ್ನು ಸಂತೋಷ್ ಲಾಡ್ ಮಾಡಿದ್ದಾರೆ.

ಶುದ್ಧ ನೀರು ನೀಡುವ ಜಲಜೀವನ್ ಮಿಷನ್ ಯೋಜನೆ ಸಂಪೂರ್ಣ ವಿಫಲವಾಗಿದೆ. ಕೋಟ್ಯಂತರ ರೂಪಾಯಿ ಕೇಂದ್ರ ಅನುದಾನವನ್ನು ನೀಡುವುದಕ್ಕೂ ವಿಫಲವಾಗಿದ್ದಾರೆ. ರಾಜ್ಯದ 54 ಲಕ್ಷ ಜನರಿಗೆ ನಾಲ್ಕು ಸಾವಿರ ನೀಡುವ ಯಡಿಯೂರಪ್ಪ ಅವರ ಕಿಸಾನ್ ಸಮ್ಮಾನ್ ನಿಧಿಯನ್ನು ನಿಲ್ಲಿಸಿದರು, ಸಣ್ಣ ಸಮುದಾಯಕ್ಕೆ ಸಭಾಭವನ ಒದಗಿಸುವ ಅನುದಾನಕ್ಕೂ ನಿಲ್ಲಿಸಿದ್ದಾರೆ, ಎಸ್ಸಿ ಎಸ್ಟಿಗಳ 34 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿಗೆ ಬಳಸಿದ್ದಾರೆ.  ಸಿದ್ದರಾಮಯ್ಯ ಎಸ್ಸಿ ಎಸ್ಟಿಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಖರ್ಗೆಯವರು ಚಟ್ ಪಟ್ ಯುದ್ಧ ನಡೀತು, ನಮ್ಮ ಪಾಕಿಸ್ತಾನ ಅಂತ ಹೇಳುತ್ತಾರೆ.  ಭಾರತೀಯ ಸೇನೆಯ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ, ಇಂದಿರಾ ಗಾಂಧಿ ಹತ್ಯೆಯಾದಾಗ ಭದ್ರತಾ ವೈಫಲ್ಯ ಅಂತೀರಾ, ರಾಜೀವ ಗಾಂಧಿಯನ್ನು ಹತ್ಯೆ ಮಾಡಿದಾಗ, ತಾಜ್ ಹೋಟೆಲ್ ಮೇಲೆ ದಾಳಿಯಾದಾಗ, ಕಾಶ್ಮೀರ ಪಂಡಿತರ ಮಾರಣ ಹೋಮ ಆದಾಗ ಭದ್ರತಾ ವೈಫಲ್ಯ ಅಂತ ಹೇಳುತ್ತೀರಾ ಎಂದು ಪ್ರಶ್ನಿಸಿದರು. 

ಮೂರು ಕೋಟಿ ಜನರಿಗೆ ಯುವ ನಿಧಿಯನ್ನು ಕೊಡ್ತವೆ ಅಂತ ರಾಹುಲ್ ಹತ್ತಿರ ಹೇಳಿಸಿದ್ದಾರೆ, ಒಂದೂವರೆ ಲಕ್ಷ ಜನಕ್ಕೂ ಸಿಕ್ಕಿಲ್ಲ ಆದರೆ ಎರಡು ವರ್ಷ ಸಾಧನೆಯನ್ನು ವೈಭವೀಕರಣ ಮಾಡುವುದೇ ಕಾಂಗ್ರೆಸ್ ಸರ್ಕಾರ ವೈಫಲ್ಯಗಳ ಚಾರ್ಚ್ ಶೀಟ್. ಸರ್ಕಾರದ 2 ವರ್ಷದ ಸಾಧನಾ ಸಮಾವೇಶ ಹಿನ್ನೆಲೆ ನೋಡಿದರೆ ಏನು ಇಲ್ಲ. ಇವರು ಕೇಂದ್ರ ಸರ್ಕಾರದ ವಿರುದ್ಧ ಇಲ್ಲದ ಸಲ್ಲದ ಆರೋಪ ಮಾಡುತ್ತಿದ್ದು ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಪರಿಶಿಷ್ಟ ಪಂಗಡಕ್ಕೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ.  ಸುಳ್ಳಿನ ಭರವಸೆಯನ್ನು ನೀಡುತ್ತಿದ್ದಾರೆಂದು ಕಾಂಗ್ರೆಸ್ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ .

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಡಾ. ವೈ ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಎಮ್ ಎಲ್ ಸಿ ಪ್ರತಾಪ್ ಸಿಂಗ್ ನಾಯಕ್, ಕಿಶೋರ್ ಕುಮಾರ್ ಪುತ್ತೂರು, ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ