image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಜ್ಯಾದ್ಯಂತ ಅಪಾರ ಹಾನಿ ಆಗಿದೆ, ಬೆಳೆ ಹಾನಿ ಅಗಿದೆ. ರಾಜ್ಯ ಸರಕಾರ ಸಮಾರೋಪದಿಯಲ್ಲಿ ಕೆಲಸ ಮಾಡಬೇಕಿದೆ : ಅರ್ ಅಶೋಕ್

ರಾಜ್ಯಾದ್ಯಂತ ಅಪಾರ ಹಾನಿ ಆಗಿದೆ, ಬೆಳೆ ಹಾನಿ ಅಗಿದೆ. ರಾಜ್ಯ ಸರಕಾರ ಸಮಾರೋಪದಿಯಲ್ಲಿ ಕೆಲಸ ಮಾಡಬೇಕಿದೆ : ಅರ್ ಅಶೋಕ್

ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ಪ್ರವಾಸ ಬಿಟ್ಟು ರಾಜ್ಯಕ್ಕೆ ಬರಲಿ, ನಿಮ್ಮ ಅಕ್ರಮಗಳಿಗೆ ಸ್ಪಷ್ಟನೆ ಕೊಡಲು ಅಲ್ಲಿಗೆ ಹೋಗಿದ್ದೀರಿ. ಅದೆಲ್ಲಾ ಮತ್ತೆ ಕೊಡಿ, ಮೊದಲು ರಾಜ್ಯದ ಜನರ ಸಮಸ್ಯೆ ಆಲಿಸಿ ಎಂದು ವಿಪಕ್ಷ ನಾಯಕ ಆ‌ರ್. ಅಶೋಕ್‌ ಹೇಳಿದ್ದಾರೆ.

ಬಂಟ್ವಾಳದ ಜಕ್ರಿಬೆಟ್ಟು, ನಾವೂರು ಮೊದಲಾದ ನೆರೆ ಪೀಡಿತ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ರಾಜ್ಯಾದ್ಯಂತ ಅಪಾರ ಹಾನಿ ಆಗಿದೆ, ಬೆಳೆ ಹಾನಿ ಅಗಿದೆ. ರಾಜ್ಯ ಸರಕಾರ ಸಮಾರೋಪದಿಯಲ್ಲಿ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.

ನಾನು ಕಂದಾಯ ಸಚಿವ ಆಗಿದ್ದಾಗ ರಾಜ್ಯ ಹಾಗೂ ಕೇಂದ್ರದಿಂದ ಸಮಾನ ಅನುದಾನ ನೀಡಿದ್ದೆ. ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಇದ್ದ ಗಂಜಿ ಕೇಂದ್ರವನ್ನು ನಾನು ಬದಲಿಸಿ ಕಾಳಜಿ ಕೇಂದ್ರ ಮಾಡಿ ಮನೆ ಊಟ ಕೊಟ್ಟಿದ್ದೆ. ಆದರೆ ಈಗ ಅಂಥದ್ದು ಎಲ್ಲೂ ನಮಗೆ ಕಾಣಿಸ್ತಾ ಇಲ್ಲ. ಮಂಗಳೂರಿಗೆ ಉಸ್ತುವಾರಿ ಮಂತ್ರಿ ಬರದೇ 15 ದಿನ ಮೇಲಾಗಿದೆ. ಅವರ ಹೈಕಮಾಂಡ್ ಜಿಲ್ಲಾ ಮಂತ್ರಿ ಸ್ಥಳದಲ್ಲಿರಲು ಹೇಳಿದೆಯಂತೆ. ಆದರೆ ಎಲ್ಲೂ ಜಿಲ್ಲಾ ಮಂತ್ರಿಗಳು ಜನರ ಜೊತೆಗೆ ಕಾಣುತ್ತಿಲ್ಲ ಎಂದು ಅಶೋಕ್ ಆರೋಪಿಸಿದರು.

ಬಿಜೆಪಿ ಪಾದಯಾತ್ರೆ ಬಗ್ಗೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅಪಸ್ವರ ವಿಚಾರದ ಪ್ರಶ್ನೆಗೆ, ನಾನು ಇದನ್ನ ಮಾಧ್ಯಮದಲ್ಲಿ ನೋಡಿದ್ದೇನೆ, ಕುಮಾರಸ್ವಾಮಿ ಕರೆ ಮಾಡಿದ್ದಾರೆ, ಮತ್ತೆ ಮಾತನಾಡುತ್ತೇನೆ. ನಮ್ಮ ಉದ್ದೇಶ ಈ ಬಿಸಿಯಲ್ಲೇ ಹೋರಾಟ ಆಗಬೇಕು ಅನ್ನೋದು. ಸಾವಿರಾರು ಕೋಟಿಯ ಭ್ರಷ್ಟಾಚಾರ ಆಗಿದೆ.

ಇಷ್ಟು ದೊಡ್ಡ ಹಗರಣ ಮಾಡಿ ಜನರ ಹಣ ಲೂಟಿ ಮಾಡಿದ್ದಾರೆ. ಸದನದ ಒಳಗೂ ಕಾಂಗ್ರೆಸ್ ನವರು ಬಾಯಿ ಮುಟ್ಟೋ ರೀತಿಯಲ್ಲಿ ಹೋರಾಟ ಆಗಿದೆ. ಜೆಡಿಎಸ್‌ ರಾಜ್ಯಾಧ್ಯಕ್ಷ ಜಿ. ಟಿ. ದೇವೇಗೌಡರು ಕೂಡ ಪಾದಯಾತ್ರೆಗೆ ವಿರೋಧ ಮಾಡಿದ್ದಾರೆ ಎಂದರು.

ಜೆಡಿಎಸ್‌ ಕೂಡ ಎನ್ ಡಿ ಎ ಭಾಗ, ಹೀಗಾಗಿ ಅವರು ಹೋರಾಟದಲ್ಲಿ ಒಟ್ಟಿಗೆ ಇರಬೇಕು. ನಾನು ಕುಮಾರಸ್ವಾಮಿ ಜೊತೆ ಮಾತನಾಡಿ ಸಂಜೆಯೊಳಗೆ ನಿರ್ಧಾರಕ್ಕೆ ಬರುವುದಾಗಿ ಹೇಳಿದರು.

ಶಾಸಕ ರಾಜೇಶ್ ಬಂಟ್ವಾಳ, ವಿಧಾನ ಪರಿಷತ್‌ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮುಖಂಡರಾದ ಸತೀಶ್ ಕುಂಪಲ, ಚೆನ್ನಪ್ಪ ಕೋಟ್ಯಾನ್, ಪೂಜಾ ಪೈ, ಸುಲೋಚನಾ ಭಟ್, ಅಕ್ಷಿತ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ