ಮಂಗಳೂರು: ರಾಹುಲ್ ಗಾಂಧಿ ವಿರುದ್ದ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಡಾ. ವೈ ಭರತ್ ಶೆಟ್ಟಿ ನೀಡಿದ ಹೇಳಿಕೆಯ ವಿರುದ್ದ ಕಾಂಗ್ರೆಸ್ ನಾಯಕರಾದ ರಮಾನಾಥ್ ರೈ ಮತ್ತು ಐವನ್ ಡಿ ಸೋಜಾ ಪತ್ಯೇಕ ಪತ್ರಿಕಾಗೋಷ್ಠಿ ನಡೆಸಿ ಮುಗಿ ಬಿದ್ದರು. ನಾಯಕ ರಮಾನಾಥ್ ರೈ ಮಾತನಾಡಿ ರಾಹುಲ್ ಗಾಂಧಿಗೆ ಕಪಾಳಕ್ಕೆ ಹೊಡೆಯಬೇಕು ಎಂದಿರುವ ನೀವು ರಾಹುಲ್ ಗಾಂಧಿ ಬಿಡಿ ನಮ್ಮ ಸಾಮಾನ್ಯ ಕಾರ್ಯಕರ್ತನ ಮೈ ಮುಟ್ಟಿ ನೋಡಿ ಆಗ ಈ ಜಿಲ್ಲೆಯಲ್ಲಿ ಏನು ಆಗಿತ್ತದೆ ಎನ್ನುವುದನ್ನು ನೋಡಿ ಎಂದು ಸವಾಲು ಹಾಕಿದರು.
ಐವನ್ ಡಿ ಸೋಜಾ ಮಾತಾಡಿ ಬಿಜೆಪಿಯವರಿಗೆ ಹಿಂದೂ ಧರ್ಮದ ಬಗ್ಗೆ ವಕಾಲತ್ತು ಮಾಡಲು ಯಾರು ಅಧಿಕಾರ ಕೊಟ್ಟಿಲ್ಲ. ಬಿಜೆಪಿಯವರು ಹಾದಿ ಬೀದಿಯಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ರಾಹುಲ್ ಗಾಂಧಿಗೆ ಕನ್ನೆಗೆ ಹೊಡೆಯುವುದಕ್ಕೆ ಹೇಳುತ್ತೀರಿ. ನೀವು ಬಿಡಿ ನಿಮ್ಮ ಮೋದಿಗೆ ಅದು ಆಗಿಲ್ಲ. ಇನ್ನು ಭರತ್ ಶೆಟ್ಟಿ ಒಬ್ಬ ಚಿಲ್ಲರೆ ನಾಯಕ. ನಾಯಿಯನ್ನು ತೋರಿಸಿ ರಾಹುಲ್ ಗಾಂಧಿಗೆ ಹೋಲಿಸಿದ್ದೀರಿ. ಆದರೆ ನಾಯಿಗೆ ಇರುವ ಬುದ್ದಿ ಡಾಕ್ಟರಿಗೆ ಇಲ್ಲ. ಶಸ್ತ್ರಾಸ್ತ್ರ ಹಿಡಿಯಲು ಹೇಳುವುದು ಅಪರಾದ. ಈಗಿರುವಾಗ ಭರತ್ ಶೆಟ್ಟಿ ಮೇಲೆ ಸುಮೋಟೋ ಪ್ರಕರಣ ದಾಖಲಿಸಬೇಕು ಎಂದು ಪೊಲೀಸ್ ಇಲಾಖೆಗೆ ವಿನಂತಿಸಿದರು.