ಚೆನ್ನೈ: ಜನಸಂಖ್ಯೆ ಆಧಾರದ ಮೇಲೆ ಲೋಕಸಭಾ ಕ್ಷೇತ್ರ ಪುನರ್ವಿಂಗಡನೆ (ಡಿಲಿಮಿಟೇಶನ್) ವಿರೋಧಿಸಿ ಇಂದು ಚೆನ್ನನಲ್ಲಿ ತಮಿಳುನಾಡು ನೃತೃತ್ವದಲ್ಲಿ ಹಲವು ಇಂಡಿ ಕೂಟದ ಪಕ್ಷಗಳು ಮೊದಲ ಜಂಟಿ ಕ್ರಿಯಾ ಸಮಿತಿ ಸಭೆಗೆ ಮುಂದಾಗಿದೆ. ಈ ಸಭೆಯಲ್ಲಿ ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ರಾಜ್ಯದ ನಾಯಕರು ಭಾಗಿಯಾಗುತ್ತಿದ್ದಾರೆ.
ಸಭೆಯಲ್ಲಿ ಭಾಗಿಯಾಗುವ ಉದ್ದೇಶದಿಂದ ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಶನಿವಾರ ಚೆನ್ನೈಗೆ ಆಗಮಿಸಿದ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಲೋಕಸಭಾ ಸ್ಥಾನಗಳು ಕಡಿಮೆ ಆಗಲು ಬಿಡುವುದಿಲ್ಲ ಎಂದು ಹೇಳಿದರು. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ಅವರು ಒಕ್ಕೂಟ ವ್ಯವಸ್ಥೆ ಮತ್ತು ಸಂವಿಧಾನ ರಕ್ಷಣೆಗಾಗಿ ನಮ್ಮೆಲ್ಲರನ್ನು ಒಂದೆಡೆ ಸೇರಿಸುತ್ತಿರುವುದಕ್ಕೆ ಅವರನ್ನು ಅಭಿನಂದಿಸುವೆ ಎಂದರು.
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಬಿಆರ್ಎಸ್ ಕಾರ್ಯಕಾರಿ ಅಧ್ಯಕ್ಷ ಕೆಟಿ ರಾಮ ರಾವ್ ಕೂಡ ಚೆನ್ನೈ ತಲುಪಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಚೆನ್ನೈ ವಿಮಾನ ನಿಲ್ದಾಣ ತಲುಪಿದ್ದು, ಒಡಿಶಾ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ್ ದಾಸ್ ಮತ್ತು ಬಿಜು ಜನತಾದಳ ನಾಯಕ ಸಂಜಯ್ ಕುಮಾರ್ ದಾಸ್ ಆಗಮಿಸಲಿದ್ದಾರೆ. ಕೇಂದ್ರ ಸರ್ಕಾರದ ಉದ್ದೇಶಿತ ಜನಸಂಖ್ಯಾಧಾರಿತ ಕ್ಷೇತ್ರ ಪುನರ್ವಿಂಗಡನೆಯನ್ನು ಕಟುವಾಗಿ ವಿರೋಧಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಇದರ ವಿರುದ್ಧ ಧ್ವನಿ ಎತ್ತಲು ಅನೇಕ ರಾಜಕೀಯ ನಾಯಕರರನ್ನು ಒಟ್ಟುಗೂಡಿಸುವ ಪ್ರಯತ್ನ ನಡೆಸಿದ್ದು, ಇದಕ್ಕಾಗಿ ಜಂಟಿ ಕ್ರಿಯಾ ಸಮಿತಿ ಸಭೆಯನ್ನು ಆಯೋಜಿಸಿದ್ದಾರೆ. ಡಿಲಿಮಿಟೇಶನ್ ಅನ್ನು ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿ ಎಂದು ಅವರು ಕರೆದಿದ್ದಾರೆ.
ಈ ಸಭೆಗೆ ಇತರೆ ರಾಜ್ಯಗಳಲ್ಲಿ ಆಡಳಿತದಲ್ಲಿರುವ ಎನ್ಡಿಎ ಮೈತ್ರಿ ಪಕ್ಷ ಸೇರಿದಂತೆ ಏಳು ರಾಜ್ಯಗಳಿಗೆ ಸಬೆಗೆ ಆಹ್ವಾನಿಸಿರುವ ಅವರು, ಅನ್ಯಾಯದ ವಿರುದ್ಧ ಹೋರಾಡೋಣ ಎಂದಿದ್ದಾರೆ.
ಸಭೆಗೆ ಮುನ್ನು ಶುಕ್ರವಾರ ಈ ಕುರಿತು ವಿಡಿಯೋ ಪೋಸ್ಟ್ ಮಾಡಿರುವ ಸಿಎಂ ಸ್ಟಾಲಿನ್, "ಸಂಸದ ಸದಸ್ಯ ಸಂಖ್ಯೆ ಸ್ಥಾನಕ್ಕೆ ಮಾತ್ರವಲ್ಲದೇ ನ್ಯಾಯಸಮ್ಮತ ಕ್ಷೇತ್ರ ಪುನರ್ವಿಂಗಡನೆ ನಿರ್ಣಾಯಕವಾಗಿದ್ದು, ಇದು ರಾಜ್ಯದ ಹಕ್ಕಾಗಿದೆ. ಸದ್ಯ ಇದೀಗ ನ್ಯಾಯ ಸಮ್ಮತ ಕ್ಷೇತ್ರ ಪುನರ್ವಿಂಗಡನೆ ಮಾತುಕತೆ ನಡೆಯಬೇಕಿದೆ. ಇದೀಗ ಡಿಎಂಕೆ ಹೆಚ್ಚು ಗಮನ ವಹಿಸುತ್ತಿರುವಕ್ಕೆ ಕಾರಣ 2026 ರಲ್ಲಿ ಕ್ಷೇತ್ರ ಪುನರ್ವಿಂಗಡಣೆ ನಡೆಯಲಿದೆ. ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆಯನ್ನು ನಡೆಸಿದರೆ, ಸಂಸತ್ತಿನಲ್ಲಿ ನಮ್ಮ ಪ್ರಾತಿನಿಧ್ಯದ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ. ಇದು ಕೇವಲ ಸಂಸದರ ಸಂಖ್ಯೆಯ ಬಗ್ಗೆ ಅಲ್ಲ, ನಮ್ಮ ರಾಜ್ಯದ ಹಕ್ಕುಗಳ ಬಗ್ಗೆ ಆಗಿದೆ. ಇದಕ್ಕಾಗಿ ನಾವು ಎಲ್ಲಾ ಪಕ್ಷಗಳ ಸಭೆಯನ್ನು ಕರೆದಿದ್ದೇವೆ. ಬಿಜೆಪಿ ಹೊರತುಪಡಿಸಿ, ಉಳಿದೆಲ್ಲ ಪಕ್ಷಗಳು ಒಟ್ಟಾಗಿ ನಿಂತಿವೆ" ಎಂದಿದ್ದಾರೆ.
ಕೇಂದ್ರ ಸರ್ಕಾರದ ಎನ್ಇಪಿ 2020 ಪ್ರಸ್ತಾವಿತ ತ್ರಿಭಾಷಾ ನೀತಿ ಹಾಗೂ ಡಿಲಿಮಿಟೇಷನ್ ವಿರುದ್ಧ ತಮಿಳುನಾಡು ಸಿಎಂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.