image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಿಜೆಪಿ ಎಂಎಲ್ಎಗಳ ನಕಾರಾತ್ಮಕ ಚಿಂತನೆಯಿಂದ ಮಂಗಳೂರು ನಗರ ಬಳಲುತ್ತಿದೆ- ಐವನ್ ಡಿಸೋಜ

ಬಿಜೆಪಿ ಎಂಎಲ್ಎಗಳ ನಕಾರಾತ್ಮಕ ಚಿಂತನೆಯಿಂದ ಮಂಗಳೂರು ನಗರ ಬಳಲುತ್ತಿದೆ- ಐವನ್ ಡಿಸೋಜ

ಮಂಗಳೂರು: ಬಿಜೆಪಿ ಎಂಎಲ್ಎಗಳ ನಕಾರಾತ್ಮಕ ಚಿಂತನೆಯಿಂದ ಮಂಗಳೂರು ನಗರ ಬಳಲುತ್ತಿದೆ ಎಂದು ಎಂಎಲ್‌ಸಿ ಐವನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಗರದ ಕಾಂಗ್ರೆಸ್ ಕಚೇರಿಯಲ್ಲಿ ಅವರು, ವಿಧಾನಸಭೆಯಲ್ಲಿ ಡಿಸಿಎಂ ಡಿಕೆಶಿಯವರು ಸಂಜೆ 7ಗಂಟೆಯ ಬಳಿಕ ಮಂಗಳೂರು ಡೆಡ್ ಎಂದು ಹೇಳಿರುವ ಬಗ್ಗೆ ಮಾತನಾಡಿ, ಈ ಬಗ್ಗೆ ನಮಗೆ ನಿಜವಾಗಿ ಅವಮಾನವಾಗಿದೆ ಎಂದು ಹೇಳಿದರು.

ರಾಜ್ಯ ಸರಕಾರದ ಬಜೆಟ್ ಶೂನ್ಯ ಎಂದು ಹೇಳುವ ದ.ಕ.ಜಿಲ್ಲೆಯ ಬಿಜೆಪಿ ಎಂಎಲ್‌ಎಗಳು ಜಿಲ್ಲೆಯ ಅಭಿವೃದ್ಧಿಗೆ ಸರಕಾರದ ಕದ ತಟ್ಟಿದ್ದಾರೆಯೇ?.  ಒಂದು ಸಲವಾದರೂ ಸಭೆ ಕರೆದಿದ್ದಾರೆಯೇ? ನಮ್ಮನ್ನು ಬೇಕಾದರೂ ಜೊತೆಗೆ ಕರೆದುಕೊಂಡು ಹೋಗಲಿ. ಸಿಎಂ ಬಳಿ ಕರೆದೊಯ್ಯಲು ಹೇಳಿದರೆ, ಅಭಿವೃದ್ಧಿ ಕಾರ್ಯಕ್ಕೆ ನಾವೂ ಜೊತೆಯಾಗುತ್ತೇವೆ. ಅಭಿವೃದ್ಧಿ ಬಗ್ಗೆ ಕೆಡಿಪಿಯಲ್ಲೂ ಚರ್ಚೆ ನಡೆಸಿಲ್ಲ. ಎಲ್ಲದಕ್ಕೂ ಅವರಿಂದ ನರಾಕಾತ್ಮಕ ಉತ್ತರವೇ ಬರುತ್ತದೆ ಎಂದು ಅವರು ಹೇಳಿದರು.

ನಾವು ಆಡಳಿತ ಪಕ್ಷದಲ್ಲಿದ್ದರೂ, ಮಂಗಳೂರು, ದ.ಕ‌.ಜಿಲ್ಲೆಗೆ ಬೇಕಾದ ಯೋಜನೆಗಳ ಬಗ್ಗೆ ಧ್ವನಿಯೆತ್ತಿ ಸರಕಾರದ ಗಮನ ಸೆಳೆದು ಹೋರಾಟ ನಡೆಸುತ್ತಿದ್ದೇವೆ. ಬಿಜೆಪಿಯವರದ್ದು ಸಂಪೂರ್ಣ ನೆಗೆಟಿವ್ ಚಿಂತನೆ. ಇದು ಸರಿಯಾದ ಕ್ರಮವಲ್ಲ, ಇನ್ನಾದರೂ ಅವರು ತಿದ್ದುಕೊಳ್ಳಲಿ ಎಂದು ಐವನ್ ಡಿಸೋಜ ಹೇಳಿದರು.

Category
ಕರಾವಳಿ ತರಂಗಿಣಿ