image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾಂಗ್ರೆಸ್ ಶಾಸಕನಾಗಿ ನಮ್ಮ ಹೈಕಮಾಂಡ್ ಭೇಟಿ ಮಾಡದೆ ಕೇಶವ ಕೃಪಾ, ಮೋದಿ ಭೇಟಿ ಮಾಡಲಾ- ಪ್ರಿಯಾಂಕ್ ಖರ್ಗೆ

ಕಾಂಗ್ರೆಸ್ ಶಾಸಕನಾಗಿ ನಮ್ಮ ಹೈಕಮಾಂಡ್ ಭೇಟಿ ಮಾಡದೆ ಕೇಶವ ಕೃಪಾ, ಮೋದಿ ಭೇಟಿ ಮಾಡಲಾ- ಪ್ರಿಯಾಂಕ್ ಖರ್ಗೆ

ಮಂಗಳೂರು: ಓರ್ವ ಶಾಸಕ, ಸಚಿವನಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ನ ಭೇಟಿ ಮಾಡದೆ, ಕೇಶವ ಕೃಪಾ, ಮೋದಿ, ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಬೇಕಾ? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಡಿಕೆಶಿ ಹೈಕಮಾಂಡ್ ಮೀಟಿಂಗ್‌ಗೆ ಹೋಗುವ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಹೋಗಿ ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್, ಖರ್ಗೆ, ರಾಹುಲ್ ಗಾಂಧಿಯವರನ್ನು ಭೇಟಿ ಮಾಡಬೇಕು. ಅದರಲ್ಲಿ ತಪ್ಪೇನಿದೆ ಎಂದು ಹೇಳಿದರು. 

ಗೃಹಲಕ್ಷ್ಮಿಯೋಜನೆ ಹಣ ಬರುವುದು ವಿಳಂಬ ಆಗಿರೋದು ನಿಜ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಿಎಂ, ಡಿಸಿಎಂ ಅವರು ಈ ವಾರದಲ್ಲಿ ಹಣ ಎಲ್ಲರ ಖಾತೆಗೆ ಬೀಳುತ್ತದೆ ಎಂದು ಹೇಳಿದ್ದಾರೆ. ಬಿಟ್ಟಿ ಭಾಗ್ಯ, ಸರಿಯಿಲ್ಲ ಗ್ಯಾರಂಟಿ ಯೋಜನೆ ಎಂದ ಬಿಜೆಪಿಯವರು ಯಾಕೆ ಇದರ ಮಾತನಾಡುವುದು ಎಂದರು‌.

ಮುಂದಿನ ಚುನಾವಣೆ ತನ್ನ ನೇತೃತ್ವದಲ್ಲಿ ನಡೆಯುತ್ತದೆ ಎಂಬ ಡಿಕೆಶಿ ಹೇಳಿಕೆ ವಿಚಾರದಲ್ಲಿ ಮಾತನಾಡಿದ ಅವರು, ಡಿಕೆಶಿಯವರು ನಮ್ಮ ಹಿರಿಯ ನಾಯಕರು. ನಮ್ಮದು ಸಾಮೂಹಿಕ ನಾಯಕತ್ವ‌. ಡಿಕೆಶಿಯವರು ಡಿಸಿಎಂ, ಎಐಸಿಸಿ ಅಧ್ಯಕ್ಷರು ಆಗಿದ್ದಾರೆ. ಆದ್ದರಿಂದ ಅವರ ನಾಯಕತ್ವದಲ್ಲೂ ಹೋಗುತ್ತೇವೆ. ಸಿದ್ದರಾಮಯ್ಯನವರ ನಾಯಕತ್ವದಲ್ಲೂ ಹೋಗುತ್ತೇವೆ. ಹೈಕಮಾಂಡ್ ನಿಮಗೆ ನಾಯಕತ್ವ ಕೊಟ್ಟರೆ, ನಿಮ್ಮ ನಾಯಕತ್ವದಲ್ಲೂ ಚುನಾವಣೆ ಎದುರಿಸ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

Category
ಕರಾವಳಿ ತರಂಗಿಣಿ