image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಐಎನ್​ಡಿಐಎ ಮೈತ್ರಿಕೂಟದ ಕಾರ್ಯತಂತ್ರ ಬದಲಾವಣೆ ಅಗತ್ಯವಿದೆ ಎಂದ ಸಿಎಂ ಒಮರ್ ಅಬ್ದುಲ್ಲಾ

ಐಎನ್​ಡಿಐಎ ಮೈತ್ರಿಕೂಟದ ಕಾರ್ಯತಂತ್ರ ಬದಲಾವಣೆ ಅಗತ್ಯವಿದೆ ಎಂದ ಸಿಎಂ ಒಮರ್ ಅಬ್ದುಲ್ಲಾ

ನವದೆಹಲಿ: ಐಎನ್​ಡಿಐಎ ಮೈತ್ರಿಕೂಟವು ತನ್ನ ಕಾರ್ಯತಂತ್ರವನ್ನು ಕಾಲಮಿತಿಯ ವಿಧಾನದೊಳಗೆ ಬದಲಾಯಿಸಿಕೊಳ್ಳದಿದ್ದಲ್ಲಿ ಮೈತ್ರಿಕೂಟ ರಚಿಸಿರುವ ಉದ್ದೇಶವೇ ವಿಫಲವಾಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್​ಸಿ) ನಾಯಕ ಒಮರ್ ಅಬ್ದುಲ್ಲಾ ಸೋಮವಾರ ಪುನರುಚ್ಚರಿಸಿದ್ದಾರೆ.

"ನಾವು ಹೀಗೆಯೇ ಭಿನ್ನಮತದ ಹಾದಿಯಲ್ಲಿ ಮುಂದುವರಿದರೆ, ಅದು ಐಎನ್​ಡಿಐಎ ಬಣದ ಭವಿಷ್ಯಕ್ಕೆ ಒಳ್ಳೆಯದಲ್ಲ" ಎಂದು ಅವರು ಹೇಳಿದರು.

ತಂದೆ ಫರೂಕ್ ಅಬ್ದುಲ್ಲಾ ಹಾಗೂ ಮಗ ಒಮರ್ ಒಬ್ದುಲ್ಲಾ ನೇತೃತ್ವದ ಎನ್​ಸಿ ಐಎನ್​ಡಿಐಎ ಮೈತ್ರಿಕೂಟದ ಪ್ರಮುಖ ಘಟಕವಾಗಿದ್ದು, ದೆಹಲಿ ಚುನಾವಣೆಯ ವಿಚಾರದಲ್ಲಿ ಬಹುತೇಕ ತಟಸ್ಥವಾಗಿ ಉಳಿದಿದೆ. ಆದರೆ ಮೈತ್ರಿಕೂಟದ ಇತರ ಮಿತ್ರ ಪಕ್ಷಗಳಾದ ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ(ಎಸ್​ಪಿ)ಗಳು ಕಾಂಗ್ರೆಸ್‌ನಿಂದ ದೂರವಿದ್ದು ಎಎಪಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿವೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಒಮರ್, ಕೇಜ್ರಿವಾಲ್ ನೇತೃತ್ವದ ಎಎಪಿ ಪರವಾದ ಅಭಿಪ್ರಾಯ ವ್ಯಕ್ತಪಡಿಸಿದರು. ಸಾಮಾನ್ಯವಾಗಿ ಚುನಾವಣೆಗಳಲ್ಲಿ ಆಡಳಿತ ಪಕ್ಷವು ಇತರರಿಗಿಂತ ಮೇಲುಗೈ ಸಾಧಿಸುವ ಸಾಧ್ಯತೆಗಳಿರುತ್ತವೆ ಎಂದರು. ಆದಾಗ್ಯೂ ಅವರು ದೆಹಲಿ ಚುನಾವಣಾ ಫಲಿತಾಂಶವನ್ನು ಊಹಿಸುವ ವಿಚಾರದಲ್ಲಿ ಜಾಗರೂಕತೆಯಿಂದ ಮಾತನಾಡಿದರು.

Category
ಕರಾವಳಿ ತರಂಗಿಣಿ