image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಾಲಿಕೆಯಿಂದ ಸಂಸ್ಕರಿಸಿದ ನೀರು ಜನರಿಗೆ ಪೂರೈಕೆಯಾಗುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪ ಸುಳ್ಳು- ಮೇಯ‌ರ್ ಮನೋಜ್ ಕುಮಾ‌ರ್

ಪಾಲಿಕೆಯಿಂದ ಸಂಸ್ಕರಿಸಿದ ನೀರು ಜನರಿಗೆ ಪೂರೈಕೆಯಾಗುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪ ಸುಳ್ಳು- ಮೇಯ‌ರ್ ಮನೋಜ್ ಕುಮಾ‌ರ್

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಜನರಿಗೆ ಸಂಸ್ಕರಿಸಿದ ನೀರನ್ನೇ ಪೂರೈಕೆ ಮಾಡಲಾಗುತ್ತಿದೆ. ಆದರೆ, ನಗರದ ಅರ್ಧದಷ್ಟು ಪ್ರದೇಶಗಳಿಗೆ ಸಂಸ್ಕರಿಸದ ನೀರು ಪೂರೈಕೆ ಮಾಡಲಾಗುತ್ತಿದೆ ಎಂಬ ವಿಪಕ್ಷ ಕಾಂಗ್ರೆಸ್‌ ನಾಯಕರ ಆರೋಪ ಸುಳ್ಳು ಎಂದು ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಹೇಳಿದ್ದಾರೆ.

ಪಾಲಿಕೆ ಅವರಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನೀರು ಶುದ್ದೀಕರಣ ನಡೆಯುವ ಬೆಂದೂರು ಘಟಕಕ್ಕೆ ತಾನು ಭೇಟಿ ನೀಡಿದ್ದು, ಅಶುದ್ಧ ನೀರು ಸರಬರಾಜು ಆಗುವುದು ಕಂಡುಬಂದಿಲ್ಲ. ಯಾವುದೇ ಕಾರಣಕ್ಕೂ ನಗರದ ಜನರಿಗೆ ಅಶುದ್ಧ ನೀರು ನೀಡುತ್ತಿಲ್ಲ. ಕಾಂಗ್ರೆಸ್ ನಾಯಕರು ರಾಜಕೀಯ ಪ್ರೇರಿತ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು. ಸಂಸ್ಕರಿಸಿದ ನೀರನ್ನೇ ನೀಡುತ್ತಿದ್ದೇವೆ. ಹಾಗಿರುವಾಗ ಕಾಂಗ್ರೆಸ್‌ನವರ ಸತ್ಯಶೋಧನಾ ಸಮಿತಿಯ ಅಗತ್ಯವೇ ಇಲ್ಲ ಪ್ರತಿ ತಿಂಗಳು ನೀರನ್ನು ಫಿಶರೀಸ್ ಕಾಲೇಜಿನ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡುತ್ತಿದ್ದು, ಕುಡಿಯಲು ಯೋಗ್ಯವಾದ ನೀರನ್ನೇ ನೀಡುತ್ತಿದ್ದೇವೆ ಎಂದರು.

ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟು ಪ್ರದೇಶದಲ್ಲಿ ಒಂದು ಟ್ಯಾಂಕ್‌ನಿಂದ ಒಂದು ಹಂತದ ಶುದ್ದೀಕರಣ ಆಗಿಯೇ ಸರಬರಾಜು ಆಗುತ್ತದೆ. ಅಲ್ಲಿರುವ ಇನ್ನೊಂದು ಟ್ಯಾಂಕ್‌ನಲ್ಲಿ ಶುದ್ದೀಕರಣ ಆಗಲ್ಲ, ಅದನ್ನು ಪಣಂಬೂರಿನಲ್ಲಿ ಶುದ್ದೀಕರಣ ಮಾಡಿ ಪೂರೈಕೆ ಮಾಡಲಾಗುತ್ತಿದೆ.ಒಳಚರಂಡಿ ನೀರಿಗೂ ಕುಡಿಯುವ ನೀರಿಗೂ ಯಾವ ಸಂಪರ್ಕವೂ ಇಲ್ಲ. ನಗರದ ಒಳಚರಂಡಿ ವ್ಯವಸ್ಥೆಯ ವೆಟ್‌ವೆಲ್‌ಗಳು, ಎಸ್‌ಟಿಪಿಗಳೆಲ್ಲ ಇರೋದು ತುಂಬೆ ಅಣೆಕಟ್ಟಿನ ಕೆಳಭಾಗದಲ್ಲಿ ಎಂದರು.

ಉಪ ಮೇಯ‌ರ್ ಭಾನುಮತಿ, ಮಾಜಿ ಮೇಯರ್‌ಗಳಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ದಿವಾಕರ ಪಾಂಡೇಶ್ವರ, ಜಯಾನಂದ ಅಂಚನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀಣಾ ಮಂಗಳಾ, ಮನೋಹರ ಕದ್ರಿ ಮೊದಲಾದ ವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ