image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಲೈಂಗಿಕ ದೌರ್ಜನ್ಯ ಪ್ರಕರಣ: ಅಂಗಿ ಬಿಚ್ಚಿ, ಚಾಟಿಯಲ್ಲಿ ಹೊಡೆದುಕೊಂಡ ಅಣ್ಣಾಮಲೈ

ಲೈಂಗಿಕ ದೌರ್ಜನ್ಯ ಪ್ರಕರಣ: ಅಂಗಿ ಬಿಚ್ಚಿ, ಚಾಟಿಯಲ್ಲಿ ಹೊಡೆದುಕೊಂಡ ಅಣ್ಣಾಮಲೈ

ಕೊಯಮತ್ತೂರು: ಕ್ರಿಸ್‌ಮಸ್‌ ಹಬ್ಬದ ಮುನ್ನಾದಿನ ಚೆನ್ನೈ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ನಿಭಾಯಿಸುವಲ್ಲಿ ಆಡಳಿತಾರೂಢ ಡಿಎಂಕೆ ಮತ್ತು ಪೊಲೀಸ್ ಸಂಪೂರ್ಣ ವೈಫಲ್ಯ ಕಂಡಿದೆ ಎಂದು ಆರೋಪಿಸಿ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ  ಅಣ್ಣಾಮಲೈ ತಮಗೆ ತಾವೇ ಚಾಟಿಯಲ್ಲಿ ಹೊಡೆದುಕೊಳ್ಳುವ  ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.  ಈ ಸಂದರ್ಭದಲ್ಲಿ ಹತ್ತಿರದಲ್ಲಿದ್ದ ಕಾರ್ಯಕರ್ತರು ಅಣ್ಣಾಮಲೈ ಅವರನ್ನು ತಡೆದಿದ್ದಾರೆ.ರಾಜ್ಯದಲ್ಲಿ ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಕೂಡ ಅಣ್ಣಾಮಲೈ ಪ್ರತಿಜ್ಞೆ ಮಾಡಿದ್ದಾರೆ. 

'ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯ ಹೆಸರನ್ನು ರಾಜ್ಯ ಪೊಲೀಸರು ಉದ್ದೇಶಪೂರ್ವಕವಾಗಿಯೇ ಬಹಿರಂಗಪಡಿಸಿದ್ದು, ಎಫ್‌ಐಆ‌ರ್ ಸೋರಿಕೆಯಾಗಿದೆ' ಎಂದು ಅಣ್ಣಾಮಲೈ ಆರೋಪಿಸಿದ್ದಾರೆ. 

ಅಣ್ಣಾಮಲೈ ಪ್ರತಿಭಟನೆಗೆ ತಿರುಗೇಟು ನೀಡಿರುವ ಡಿಎಂಕೆಯ ಆ‌ರ್.ಎಸ್.ಭಾರತಿ, 'ಬಿಜೆಪಿಯವರೇ ಈ ಚಾಟಿಯೇಟು ಪ್ರತಿಭಟನೆಯನ್ನು ಒಪ್ಪಿಕೊಳ್ಳುತ್ತಾರೆಯೇ ಎಂಬುದರಲ್ಲಿ ನನಗೆ ಅನುಮಾನವಿದೆ. ಯಾರಾದರೂ ಚಾಟಿಯಲ್ಲಿ ಸ್ವಯಂ ಹೊಡೆದುಕೊಳ್ಳುತ್ತಾರೆಯೇ? ನಾನು ಕಳೆದ 60 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಇಂತಹ ಕೆಲಸವನ್ನು ಯಾವ ನಾಯಕರೂ ಮಾಡಿಲ್ಲ' ಎಂದು  ವ್ಯಂಗ್ಯವಾಡಿದ್ದಾರೆ.

Category
ಕರಾವಳಿ ತರಂಗಿಣಿ