image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಸ್ಎಂ ಕೃಷ್ಣ ನಿಧನಕ್ಕೆ ಶಾಸಕ ಕಾಮತ್ ತೀವ್ರ ಸಂತಾಪ

ಎಸ್ಎಂ ಕೃಷ್ಣ ನಿಧನಕ್ಕೆ ಶಾಸಕ ಕಾಮತ್ ತೀವ್ರ ಸಂತಾಪ

ಮಂಗಳೂರು:ನಾಡು ಕಂಡ ಸರಳ ಸಜ್ಜನ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಮುತ್ಸದ್ದಿ ಎಸ್ಎಂ ಕೃಷ್ಣ ರವರ ನಿಧನಕ್ಕೆ ಶಾಸಕ ವೇದವ್ಯಾಸ್ ಕಾಮತ್ ರವರು ತೀವ್ರ ಸಂತಾಪ ವ್ಯಕ್ತಪಡಿಸಿದರು. 

ಮುಖ್ಯಮಂತ್ರಿಯಾಗಿ ತಮ್ಮ ಅಧಿಕಾರಾವಧಿಯಲ್ಲಿ ಹತ್ತು ಹಲವು ಹೊಸ ಪ್ರಯೋಗಗಳನ್ನು ಪರಿಚಯಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಅವರು ಕೇಂದ್ರ ಸಚಿವರಾಗಿ, ವಿದೇಶಾಂಗ ಮಂತ್ರಿಗಳಾಗಿ ದೇಶಕ್ಕೂ ಹಲವು ಕೊಡುಗೆ ನೀಡಿದ್ದರು. ಅಂತಹ ಶ್ರೇಷ್ಠ ವ್ಯಕ್ತಿತ್ವದ ನಿಧನದಿಂದ ದೇಶದ ಧೀಮಂತ ರಾಜಕಾರಣದ ವ್ಯಕ್ತಿತ್ವವೊಂದರ ಅಂತ್ಯವಾಗಿದ್ದು ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. 

ಎಸ್‌.ಎಂ. ಕೃಷ್ಣ ರವರು ನಡೆದು ಬಂದ ಹಾದಿ, ಕಾರ್ಯವೈಖರಿ ಪ್ರತಿಯೊಬ್ಬರಿಗೂ ಪ್ರೇರಣೆ ಹಾಗೂ ಮಾರ್ಗದರ್ಶಿಯಾಗಿದ್ದು ಅಗಲಿದ ಹಿರಿಯ ಚೇತನಕ್ಕೆ ಭಗವಂತ ಸದ್ಗತಿಯನ್ನು ಕರುಣಿಸಲಿ ಎಂದು ಶಾಸಕರು ಪ್ರಾರ್ಥಿಸಿದರು.

Category
ಕರಾವಳಿ ತರಂಗಿಣಿ