ಮಂಗಳೂರು : CPIM ಮತ್ತು ಮಂಗಳೂರು ಪೊಲೀಸ್ ಕಮೀಷನರ್ ನಡುವಿನ ಸಮರ ತೀವ್ರಗೊಂಡಿದ್ದು CPIM ದ.ಕ ಜಿಲ್ಲಾ ಸಮಿತಿಯ ನಿಯೋಗ ಇಂದು ಗೃಹ ಸಚಿವರನ್ನು ಭೇಟಿ ಪೊಲೀಸ್ ಕಮೀಷನರನ್ನು ವರ್ಗಾವಣೆಗೆ ಮನವಿ ಸಲ್ಲಿಸಿತು. CPIM ಪಕ್ಷದ ದ.ಕ. ಜಿಲ್ಲಾ ಸಮಿತಿಯ ನಿಯೋಗ ಮಂಗಳೂರು ಪ್ರವಾಸದಲ್ಲಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಂಗಳೂರು ಪೊಲೀಸ್ ಕಮೀಷನರ್ ವಿರುದ್ಧ ಲಿಖಿತ ದೂರು ನೀಡಿತು. ಶಿಸ್ತು ಕ್ರಮ ಕೈಗೊಂಡು ವರ್ಗಾಯಿಸುವಂತೆ ಆಗ್ರಹಿಸಿತು. ಜನಪರ ಸಂಘಟನೆಗಳು ನಡೆಸುವ ಪ್ರತಿಭಟನೆ, ಧರಣಿಗಳಿಗೆ ವಿನಾಕಾರಣ ಅನುಮತಿ ನಿರಾಕರಿಸುವುದು, ಪ್ರತಿಭಟನಾಕಾರರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡುತ್ತಿರುವುದು ಮಂಗಳೂರಿನಲ್ಲಿ ಜನಾಕ್ರೋಶಕ್ಕೆ ಕಾರಣವಾಗಿದೆ. ಸಿಪಿಐಎಂ ಪಕ್ಷವು ಕಮೀಷನರ್ ಅನುಪಮ್ ಅಗ್ರವಾಲ್, ಡಿಸಿಪಿ ಸಿದ್ದಾರ್ಥ ಗೋಯಲ್ ರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಸರಣಿ ಪ್ರತಿಭಟನೆಗೆ ಕರೆ ನೀಡಿದ್ದು, ವರ್ಗಾವಣೆಗೆ ಪಟ್ಟು ಹಿಡಿದಿದೆ. ಅದರ ಭಾಗವಾಗಿ ಇಂದು ಸಿಪಿಐಎಂ ಜಿಲ್ಲಾ ಸಮಿತಿ ನಿಯೋಗ ಗೃಹ ಸಚಿವರನ್ನು ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿತು.ಪೊಲೀಸ್ ಕಮೀಷನರ್ ನಡುವಿನ ಸಮರ ತೀವ್ರಗೊಂಡಿದ್ದು CPIM ದ.ಕ ಜಿಲ್ಲಾ ಸಮಿತಿಯ ನಿಯೋಗ ಇಂದು ಗೃಹ ಸಚಿವರನ್ನು ಭೇಟಿ ಪೊಲೀಸ್ ಕಮೀಷನರನ್ನು ವರ್ಗಾವಣೆಗೆ ಮನವಿ ಸಲ್ಲಿಸಿತು.