ಮಂಗಳೂರು: ಮಂಗಳೂರು ಮಂಡಲದ ಹರೇಕಳ ಗ್ರಾಮದ ರಾಜಗುಡ್ಡೆ 57ನೇ ಬೂತ್ ಅಧ್ಯಕ್ಷರಾದ ಶರತ್ ಕುಮಾರ್ ಗಟ್ಟಿ ಹಾಗೂ ಅವರ ಅಜ್ಜಿಗೆ, ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಖಂಡನೀಯ.
ಕಾಂಗ್ರೆಸ್ ಸರ್ಕಾರ ಜಿಹಾದಿಗಳ ಬೆನ್ನಿಗೆ ನಿಂತಿರುವ ಕಾರಣ ರಾಜಾರೋಷವಾಗಿ ದುಷ್ಕೃತ್ಯಗಳನ್ನು ಎಸಗುತ್ತಿದ್ದಾರೆ. ಗೌರವಾನ್ವಿತ ಹುದ್ದೆಯಲ್ಲಿರುವ ಸ್ಪೀಕರ್ UT Khader ಅವರೂ ಕೂಡಾ ಸಮಾಜ ಘಾತುಕರಿಗೆ ರಕ್ಷಣೆ ನೀಡುತ್ತಿದ್ದಾರೆ.
ಬಿಜೆಪಿ ಮತ್ತು ಪರಿವಾರ ಸಂಘಟನೆಗಳ ಮುಖಂಡರ, ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಗ್ಗಿಸಲು ಮೇಲಿಂದ ಮೇಲೆ ದಾಳಿ ನಡೆಸುತ್ತಿದ್ದಾರೆ, ಇದೇ ರೀತಿ ಮುಂದುವರೆದಲ್ಲಿ ಬಿಜೆಪಿ ಇದಕ್ಕೆ ತಕ್ಕ ಉತ್ತರ ನೀಡಲಿದೆ. ಸರ್ಕಾರ ಈ ಕೂಡಲೇ ಹರೇಕಳ ಪ್ರಕರಣದ ಆರೋಪಿಗಳನ್ನು ಹೆಡೆಮುರಿ ಕಟ್ಟಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಆಗ್ರಹಿಸಿದ್ದಾರೆ