ಮಂಗಳೂರು: ಮೀನುಗಾರಿಕೆ ಮಾಡುತ್ತಿರುವ ಸಂದರ್ಭ ಅಪಘಾತಕ್ಕೀಡಾಗಿ ಮೃತಪಟ್ಟ ಅಫ್ಘಾನ್ ಅವರ ಕುಟುಂಬಕ್ಕೆ ಸರ್ಕಾರದಿಂದ 8 ಲಕ್ಷ ರೂ. ಸಹಾಯ ಧನವನ್ನು ವಿಧಾನ ಪರಿಷತ್ತಿನ ಶಾಸಕ ಐವನ್ ಡಿಸೋಜಾ ಅವರು ಮೃತರ ಮನೆಗೆ ತೆರಳಿ ಚೆಕ್ ವಿತರಿಸಿದರು.
ಈ ಸಂದರ್ಭ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ದಿಲೀಪ್ ಕುಮಾರ್ ಹಾಗೂ ಸಿದ್ದಯ್ಯ.ಡಿ, ಬೆಂಗ್ರೆ ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ಅಶ್ರಫ್ ಬೆಂಗ್ರೆ, ಬೆಂಗ್ರೆ ಯುವ ಕಾಂಗ್ರೆಸ್ ನ ಸಫಾನ್, ಬೆಂಗ್ರೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಲೀಂ, ರಫೀಕ್, ಶಿಯಾಬ್ ಮುಂತಾದವರು ಉಪಸ್ಥಿತರಿದ್ದರು